ಹಾಡಲು ಕಲಿಯಿರಿ(CLICK HERE TO LEARN THIS SONG)
ಭಕ್ತಿಗೀತೆ, ಜಾನಪದ ಗೀತೆ, ದೇಶಭಕ್ತಿ ಗೀತೆ, ಚಲನಚಿತ್ರ ಗೀತೆ, ಶಾಲಾ ಪ್ರಾರ್ಥನೆ, ಭಾವನಾತ್ಮಕ ಹಾಡುಗಳು, ಶ್ಲೋಕಗಳು ಮತ್ತು ಸುಭಾಷಿತಗಳು ಸೇರಿದಂತೆ ಎಲ್ಲಾ ರೀತಿಯ ಕನ್ನಡ ಹಾಡುಗಳನ್ನು ಕಲಿಯಲು ಆಸಕ್ತಿ ಹೊಂದಿರುವ ಯಾರಿಗಾದರೂ ಈ ಬ್ಲಾಗ್ ಉಪಯುಕ್ತವಾಗಿದೆ. ಹೆಚ್ಚಿನ ಹಾಡುಗಳ ಸಾಹಿತ್ಯದ ಕೊನೆಯಲ್ಲಿ ಹಾಡನ್ನು ಕಲಿಯಲು ಅನೂಕೂಲವಾಗುವಂತೆ, ಯು ಟ್ಯೂಬ್ ಲಿಂಕ್ ಅನ್ನು ಕೊಡಲಾಗಿದೆ.
ವರವ ಕೊಡು ಎನಗೆ ವಾಗ್ದೇವಿ ನಿನ್ನ |VARAVA KODU ENAGE |KANAKADASA SONGS|LORD SARASWATI SONGS |
ಕನಕದಾಸನ ಮೇಲೆ ದಯಮಾಡಲು ವ್ಯಾಸ | PURANDARA DASA SONGS |KANADASANA MELE DAYA MAADALU
ಕನಕದಾಸನ ಮೇಲೆ ದಯಮಾಡಲು ವ್ಯಾಸ
ಮುನಿಮಠದ ಜನರೆಲ್ಲ ದೂರಿ ಕೊಂಬುವರು||
ತೀರ್ಥವನು ಕೊಡುವಾಗ ಕನಕನ್ನ ಕರೆಯೆನಲು
ದೂರ್ತರಾಗಿದ್ದ ವಿದ್ವಾಂಸರೆಲ್ಲ
ಸಾರ್ಥಕಾಯಿತು ಇವರ ಸನ್ಯಾಸಿತನವೆಲ್ಲ
ಪೂರ್ತ್ಯಾಗಲೆಂತೆನಲು ಯತಿಯು ನಗುತಿಹನು||1||
ಮರುದಿನ ಅವರವರ ಪರಿಕಿಸಲಿಬೇಕೆಂದು
ಕರೆದು ವಿದ್ವಾಂಸರನು ಕನಕನ್ನ ಬಿಡದೆ
ಕರದಲ್ಲಿ ಕದಳಿಯ ಫಲಗಳನೆ ಕೊಟ್ಟು
ಯಾರಿರದ ಸ್ಥಳದಲ್ಲಿ ಮೆದ್ದು ಬನ್ನಿರೆನಲು||2||
ಊರ ಹೊರಗೆಹೋಗಿ ಬೇರೆ ಬೇರೆ ಕುಳಿತು
ತೋರದಲೆ ಎಲ್ಲರೂ ಮೆದ್ದು ಬರಲು |
ತೋರಲಿಲ್ಲವು ಎನಗೆ ಏಕಾಂತ ಸ್ಥಳವೆನುತ
ಸಾರಿ ಕದಳೀ ಫಲವ ತಂದು ಮುಂದಿಟ್ಟ||3||
ಡಿಂಬದೊಳು ಶಬ್ದವಾಗಾದಿ ಶ್ರೋತ್ರಗಳಲ್ಲಿ
ಇಂಬಾಗಿ ತತ್ವೇಶರೆಲ್ಲ ತುಂಬಿಹರೊ |
ತಿಂಬುವುದು ಹೇಗೆನುತ ವ್ಯಾಸರಾಯರ ಕೇಳೆ
ಸಂಭ್ರಮದವರೆಲ್ಲ ಕುಳಿತು ಕೇಳಿದರು ॥4||
ಮಾಣಿಕವು ಕೋಡಗನ ಕೈಯ್ಯಲ್ಲಿ ಇದ್ದಂತೆ
ಕೋಣನೆದುರಿಗ ಕಿನ್ನರಿಯ ಮೀಟಿದಂತೆ
ವೇಣುಧ್ವನಿ ಬಧಿರನ ಬಳಿ ಮಾಡಿದಂತೆ
ಕಣ್ಣು ಕಾಣದವನಿಗೆ ಕನ್ನಡಿಯ ತೋರಿದಂತೆ॥5||
ನೋಡಿದರೆ ಈ ಕನಕನಾಡುವ ಮಾತುಗಳ
ಮೂಡಜನರರಿಯಬಲ್ಲರೆ ಮಹಿಮೆಯಾ।
ನಾಡಾಡಿಯಂತೆಯೇ ಮಾಡಿ ಬಿಟ್ಟರು ಇವಗೆ
ನಾಡೆಲ್ಲ ಹುಡುಕಿದರು ಈಡಾರ ಕಾಣೆ ॥6||
ತಮ್ಮ ಕೈ ಮುಷ್ಟಿಯನು ಪಿಡಿದು ಕೇಳಲು ಯತಿಯು
ತಮ ತಮಗೆ ತೋರಿದ್ದು ಪೇಳೆ ಬ್ರಾಹ್ಮಣರು
ಗಮ್ಮನೆ ಕನಕ ಸಿರಿ ವಾಸುದೇವನೆ ಪರ
ಬೊಮ್ಮ ಪುರಂದರ ವಿಟ್ಟಲನೆನುತ ಸಾರಿದನು ॥7||
..............................................................................................................
ಎನಿತು ಇನಿದು ಈ ಕನ್ನಡ ನುಡಿಯು SONG LYRICS | ಬೆಟಗೇರಿ ಕೃಷ್ಣಶರ್ಮ| ENITHU INIDU EE KANNADA NUDIYU SONG LYRICS
ಹಾಡಲು ಕಲಿಯಿರಿ(CLICK HERE TO LEARN THIS SONG)
ರಚನೆ: ಬೆಟಗೇರಿ ಕೃಷ್ಣಶರ್ಮ
ಎನಿತು ಇನಿದು ಈ ಕನ್ನಡ ನುಡಿಯು
ಮನವನು ತಣಿಸುವ ಮೋಹನ ಸುಧೆಯು
ಗಾನವ ಬೆರೆಯಿಸಿ ವೀಣೆಯ ದನಿಯೊಳು
ವಾಣಿಯು ನೇವುರ ನುಡಿಸುತಲಿ
ವಾಣಿಯು ನೇವುರ ನುಡಿಸುತೆ ಕುಣಿಯಲು
ಮಾಣದೆ ಮೆರೆಯುವ ಮಂಜುಲ ರವವೋ ||1||
ರಂಗನ ಮುರಳಿಯ ಹಿಂಗದ ಸ್ವರದಲಿ
ಹೆಂಗಳೆಯರು ಬೆಳದಿಂಗಳಲಿ
ಹೆಂಗಳೆಯರು ಬೆಳದಿಂಗಳ ಇರುಳಲಿ
ಸಂಗೀತವನೊರೆದಂಗವಿದೇನೋ ||2||
ಗಿಳಿಗಳು ಉಲಿಯುವ ಮೆಲುಮಾತುಗಳೋ
ಕಳಕಂಠಗಳಾ ಚೆಲುವಿನ ಕುಕಿಲೋ
ಅಳಿಗಳ ಬೆಳಗಿನ ಉಲಿಯೋ ಉಲಿಯೋ
ಮನವನು ತಣಿಸುವ ಮೋಹನ ಸುಧೆಯೋ ||3||
ಉಗಾಭೋಗ : ಅಪಾಯ ಕೋಟಿಗಳಿಗೆ ಉಪಾಯ ಒಂದೇ |APAYA KOTI |PURANDARA DASA | UGABHOGA
ಹಾಡಲು ಕಲಿಯಿರಿ(CLICK HERE TO LEARN THIS SONG)
ಅಪಾಯ ಕೋಟಿಗಳಿಗೆ ಉಪಾಯ ಒಂದೇ
ಹರಿಭಕ್ತರು ತೋರಿಕೊಟ್ಟ ಉಪಾಯ ಒಂದೇ
ಪುರಂದರವಿಟ್ಠಲನೆಂದು ಭೋರಿಟ್ಟು
ಕರೆವ ಉಪಾಯವೊಂದೇ॥
..............................................................................
ಒಂದೇ ಒಂದೇ ಒಂದೇ ಕರ್ನಾಟಕ ಒಂದೇ SONG LYRICS | ONDE ONDE ONDE KARNATAKA ONDE SONG LYRICS | ದ. ರಾ. ಬೇಂದ್ರೆ
ಹಾಡಲು ಕಲಿಯಿರಿ(CLICK HERE TO LEARN THIS SONG)
ರಚನೆ: ದ. ರಾ. ಬೇಂದ್ರೆ
ಒಂದೇ ಒಂದೇ ಒಂದೇ ಕರ್ನಾಟಕ ಒಂದೇ
ಹಿಂದೆ ಮುಂದೇ ಎಂದೇ ಕರ್ನಾಟಕ ಒಂದೇ||
ಇದೇ ನಾಡು ಇದೇಭಾಷೆ song lyrics in kannada | IDE NAADU IDE BHASHE KANANDA SONG LYRICS |
ಹಾಡಲು ಕಲಿಯಿರಿ(CLICK HERE TO LEARN THIS SONG)
ರಚನೆ: ಆರ್.ಎನ್. ಜಯಗೋಪಾಲ್
ಇದೇ ನಾಡು ಇದೇಭಾಷೆ ಎಂದೆಂದೂ ನಮ್ಮದಾಗಿರಲಿ
ಎಲ್ಲೇ ಇರಲಿ ಹೇಗೇ ಇರಲಿ ಕನ್ನಡವೇ ನಮ್ಮ ಉಸಿರಲ್ಲಿ
ಕರುನಾಡು ಸ್ವರ್ಗದ ಸೀಮೆ, ಕಾವೇರಿ ಹುಟ್ಟಿದ ನಾಡು
ಕಲ್ಲಲ್ಲಿ ಕಲೆಯನು ಕಂಡ ಬೇಲೂರು ಶಿಲ್ಪದ ಬೀಡು
ಬಸವೇಶ್ವರ ರನ್ನ-ಪಂಪರ ಕವಿ ವಾಣಿಯ ನಾಡು ||1||
ಚಾಮುಂಡಿ ರಕ್ಷೆಯು ನಮಗೆ ಗೊಮ್ಮಟೇಶ ಕಾವಲು ಇಲ್ಲಿ
ಶೃಂಗೇರಿ ಶಾರದೆ ಲೀಲೆ ರಸ ತುಂಗೆ ಆಗಿದೆ ಇಲ್ಲಿ
ವಿಶ್ವಖ್ಯಾತಿಯ ವಿಶ್ವೇಶ್ವರಯ್ಯ ಜನಿಸಿದ ಈ ನಾಡು ||2||
ಏಳೇಳು ಜನ್ಮವೇ ಬರಲಿ ಈ ಮಣ್ಣಲಿ ನಾನು ಹುಟ್ಟುವೆ
ಏನೇನು ಕಷ್ಟವೇ ಇರಲಿ ಸಿರಿಗನ್ನಡ ತಾಯ್ಗೆ ದುಡಿಯುವೆ
ತನು ಕನ್ನಡ ನುಡಿ ಕನ್ನಡ ಮನ ಕನ್ನಡವಾಗಿರಲಿ ||3||
……………………………………………………………………………….
ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು ರಾಘವೇಂದ್ರಾ SONG LYRICS | Dr.Rajkumar movie songs | ರಾಘವೇಂದ್ರ songs lyrics
ಹಾಡಲು ಕಲಿಯಿರಿ(CLICK HERE TO LEARN THIS SONG)
ಹಾಲಲ್ಲಾದರು
ಹಾಕು ನೀರಲ್ಲಾದರು ಹಾಕು ರಾಘವೇಂದ್ರಾ
ಹಾಲಲ್ಲಿ
ಕೆನೆಯಾಗಿ ನೀರಲ್ಲಿ ಮೀನಾಗಿ
ಹಾಯಗಿರುವೆ ರಾಘವೇಂದ್ರ …. ||
ಮುಳ್ಳಲ್ಲಾದರು
ನೂಕು ಕಲ್ಲಲ್ಲಾದರು ನೂಕು ರಾಘವೇಂದ್ರಾ……
ಮುಳ್ಳಲ್ಲಾದರು
ನೂಕು ಕಲ್ಲಲ್ಲಾದರು ನೂಕು ರಾಘವೇಂದ್ರಾ
ಮುಳ್ಳಲ್ಲಿ
ಮುಳ್ಳಾಗಿ ಕಲ್ಲಲ್ಲಿ ಕಲ್ಲಾಗಿ
ಒಂದಾಗಿರುವೇ
ರಾಘವೇಂದ್ರ
ಬಿಸಿಲಲ್ಲೇ
ಒಣಗಿಸು ನೆರಳಲ್ಲೇ ಮಲಗಿಸು ರಾಘವೇಂದ್ರಾ
ಬಿಸಿಲಲ್ಲಿ
ಕೆಂಪಾಗಿ ನೆರಳಲ್ಲಿ ತಂಪಾಗಿ
ನಗುನಗುತ ಇರುವೇ ರಾಘವೇಂದ್ರ ||1||
ಸುಖವನ್ನೆ
ನೀಡೆಂದು ಎಂದೂ ಕೇಳೆನು ನಾನು ರಾಘವೇಂದ್ರಾ
ಸುಖವನ್ನೆ
ನೀಡೆಂದು ಎಂದೂ ಕೇಳೆನು ನಾನು ರಾಘವೇಂದ್ರಾ
ಮುನ್ನ ಮಾಡಿದ
ಪಾಪ ಯಾರ ತಾತನ ಗಂಟು
ಮುನ್ನ ಮಾಡಿದ
ಪಾಪ ಯಾರ ತಾತನ ಗಂಟು
ನೀನೇ ಹೇಳು
ರಾಘವೇಂದ್ರಾ
ಎಲ್ಲಿದ್ದೆರೇನು
ನಾ ಹೇಗಿದ್ದರೇನು ನಾ ರಾಘವೇಂದ್ರ
ನಿನ್ನಲ್ಲಿ
ಶರಣಾಗಿ ನೀ ನನ್ನ ಉಸಿರಾಗಿ
ಬಾಳಿದರೆ ಸಾಕೂ
ರಾಘವೇಂದ್ರಾ ||2||
ಮಳೆಯ ದಯಮಾಡೊ ಶ್ರೀರಂಗಾ ನಿಮ್ಮ | Lyrics |ಹೆಳವನಕಟ್ಟೆ ಗಿರಿಯಮ್ಮ | maleya dayamaado shree ranga | helavana katte giriyamma
ಹಾಡಲು ಕಲಿಯಿರಿ(CLICK HERE TO LEARN THIS SONG) ಮಳೆಯ ದಯಮಾಡೊ ಶ್ರೀರಂಗಾ ನಿಮ್ಮ | ಕರುಣ ತಪ್ಪಿದರೆ ಉಳಿಯದೀ ಲೋಕ ||ಪ|| ಪಶುಜಾತಿ ಹುಲ್ಲೆ ಸಾರಂಗ ಮೃಗಗಳು ಬ...
-
ಕಮಲದ ಮೊಗದೋಳೆ ಕಮಲದ ಕಣ್...
-
ಹಾಡಲು ಕಲಿಯಿರಿ(CLICK HERE TO LEARN THIS SONG) ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ ಮಳೆ ಸುರಿಸಿ ಹಗುರಾದ ಮುಗಿಲಿನಂತೆ || ...
-
ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೊ ಆಮ್ಮ ನೀನೆ ದೈವ ಅಂತ ಕಾಲು ಮುಗಿದರೊ ಬಾಳಿಗೆ ಒಂದೆ ಮನೆ ಬಾಳೆಗೆ ಒಂದೆ ಗೊನೆ ಭೂಮಿಗೆ ದೈವ ಒಂದೇನೆ...