ಇದೇ ನಾಡು ಇದೇಭಾಷೆ song lyrics in kannada | IDE NAADU IDE BHASHE KANANDA SONG LYRICS |

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ: ಆರ್.ಎನ್. ಜಯಗೋಪಾಲ್

ಇದೇ ನಾಡು ಇದೇಭಾಷೆ ಎಂದೆಂದೂ ನಮ್ಮದಾಗಿರಲಿ

 ಎಲ್ಲೇ ಇರಲಿ ಹೇಗೇ ಇರಲಿ ಕನ್ನಡವೇ ನಮ್ಮ ಉಸಿರಲ್ಲಿ

 

ಕರುನಾಡು ಸ್ವರ್ಗದ ಸೀಮೆ, ಕಾವೇರಿ ಹುಟ್ಟಿದ ನಾಡು

ಕಲ್ಲಲ್ಲಿ ಕಲೆಯನು ಕಂಡ ಬೇಲೂರು ಶಿಲ್ಪದ ಬೀಡು

 ಬಸವೇಶ್ವರ ರನ್ನ-ಪಂಪರ ಕವಿ ವಾಣಿಯ ನಾಡು ||1||

 

ಚಾಮುಂಡಿ ರಕ್ಷೆಯು ನಮಗೆ ಗೊಮ್ಮಟೇಶ ಕಾವಲು ಇಲ್ಲಿ

 ಶೃಂಗೇರಿ ಶಾರದೆ ಲೀಲೆ ರಸ ತುಂಗೆ ಆಗಿದೆ ಇಲ್ಲಿ

 ವಿಶ್ವಖ್ಯಾತಿಯ ವಿಶ್ವೇಶ್ವರಯ್ಯ ಜನಿಸಿದ ಈ ನಾಡು ||2||

 

ಏಳೇಳು ಜನ್ಮವೇ ಬರಲಿ ಈ ಮಣ್ಣಲಿ ನಾನು ಹುಟ್ಟುವೆ

ಏನೇನು ಕಷ್ಟವೇ ಇರಲಿ ಸಿರಿಗನ್ನಡ ತಾಯ್ಗೆ ದುಡಿಯುವೆ

ತನು ಕನ್ನಡ ನುಡಿ ಕನ್ನಡ ಮನ ಕನ್ನಡವಾಗಿರಲಿ ||3||

……………………………………………………………………………….


No comments:

Post a Comment

ಹೂವು ಚೆಲುವೆಲ್ಲ ನಂದೆಂದಿತು SONG LYRICS | HOOVU CHELUVELLA NANDENDITHU | ಹಣ್ಣೆಲೆ ಚಿಗುರಿದಾಗ MOVIE SONG

ಹಾಡಲು ಕಲಿಯಿರಿ(CLICK HERE TO LEARN THIS SONG)   ಹೂವು ಚೆಲುವೆಲ್ಲ ನಂದೆಂದಿತು ಹೆಣ್ಣು ಹೂವ ಮುಡಿದು ಚೆಲುವೇ ತಾನೆಂದಿತು ಹೂವು ಚೆಲುವೆಲ್ಲ ನಂದೆಂದಿ...