ಕನಕದಾಸನ ಮೇಲೆ ದಯಮಾಡಲು ವ್ಯಾಸ | PURANDARA DASA SONGS |KANADASANA MELE DAYA MAADALU

 

ಕನಕದಾಸನ ಮೇಲೆ ದಯಮಾಡಲು ವ್ಯಾಸ 

ಮುನಿಮಠದ ಜನರೆಲ್ಲ ದೂರಿ ಕೊಂಬುವರು||


ತೀರ್ಥವನು ಕೊಡುವಾಗ ಕನಕನ್ನ ಕರೆಯೆನಲು

 ದೂರ್ತರಾಗಿದ್ದ ವಿದ್ವಾಂಸರೆಲ್ಲ

 ಸಾರ್ಥಕಾಯಿತು ಇವರ ಸನ್ಯಾಸಿತನವೆಲ್ಲ

 ಪೂರ್ತ್ಯಾಗಲೆಂತೆನಲು ಯತಿಯು ನಗುತಿಹನು||1||


ಮರುದಿನ ಅವರವರ ಪರಿಕಿಸಲಿಬೇಕೆಂದು

 ಕರೆದು ವಿದ್ವಾಂಸರನು ಕನಕನ್ನ ಬಿಡದೆ

ಕರದಲ್ಲಿ ಕದಳಿಯ ಫಲಗಳನೆ ಕೊಟ್ಟು

 ಯಾರಿರದ ಸ್ಥಳದಲ್ಲಿ ಮೆದ್ದು ಬನ್ನಿರೆನಲು||2||


ಊರ ಹೊರಗೆಹೋಗಿ ಬೇರೆ ಬೇರೆ ಕುಳಿತು 

ತೋರದಲೆ ಎಲ್ಲರೂ ಮೆದ್ದು ಬರಲು |

ತೋರಲಿಲ್ಲವು ಎನಗೆ ಏಕಾಂತ ಸ್ಥಳವೆನುತ 

ಸಾರಿ ಕದಳೀ ಫಲವ ತಂದು ಮುಂದಿಟ್ಟ||3||


ಡಿಂಬದೊಳು ಶಬ್ದವಾಗಾದಿ ಶ್ರೋತ್ರಗಳಲ್ಲಿ

 ಇಂಬಾಗಿ ತತ್ವೇಶರೆಲ್ಲ ತುಂಬಿಹರೊ |

ತಿಂಬುವುದು ಹೇಗೆನುತ ವ್ಯಾಸರಾಯರ ಕೇಳೆ 

ಸಂಭ್ರಮದವರೆಲ್ಲ ಕುಳಿತು ಕೇಳಿದರು ॥4||


ಮಾಣಿಕವು ಕೋಡಗನ ಕೈಯ್ಯಲ್ಲಿ ಇದ್ದಂತೆ

ಕೋಣನೆದುರಿಗ ಕಿನ್ನರಿಯ ಮೀಟಿದಂತೆ

ವೇಣುಧ್ವನಿ ಬಧಿರನ ಬಳಿ ಮಾಡಿದಂತೆ

ಕಣ್ಣು ಕಾಣದವನಿಗೆ ಕನ್ನಡಿಯ ತೋರಿದಂತೆ॥5||


ನೋಡಿದರೆ ಈ ಕನಕನಾಡುವ ಮಾತುಗಳ

ಮೂಡಜನರರಿಯಬಲ್ಲರೆ ಮಹಿಮೆಯಾ।

ನಾಡಾಡಿಯಂತೆಯೇ ಮಾಡಿ ಬಿಟ್ಟರು ಇವಗೆ

ನಾಡೆಲ್ಲ ಹುಡುಕಿದರು ಈಡಾರ ಕಾಣೆ ॥6||


ತಮ್ಮ ಕೈ ಮುಷ್ಟಿಯನು ಪಿಡಿದು ಕೇಳಲು ಯತಿಯು

ತಮ ತಮಗೆ ತೋರಿದ್ದು ಪೇಳೆ ಬ್ರಾಹ್ಮಣರು

ಗಮ್ಮನೆ ಕನಕ ಸಿರಿ ವಾಸುದೇವನೆ ಪರ

ಬೊಮ್ಮ ಪುರಂದರ ವಿಟ್ಟಲನೆನುತ ಸಾರಿದನು ॥7||

..............................................................................................................

No comments:

Post a Comment

ಓಂ ನಮ: ಶಿವಾಯ್ ಓಂ ನಮ: ಶಿವಾಯ್ OM NAMA SHIVAY SONG LYRICS IN KANNADA |LORD SHIVA STOTRA LYRICS

ಹಾಡಲು ಕಲಿಯಿರಿ(CLICK HERE TO LEARN THIS SONG)   ಓಂ ನಮ: ಶಿವಾಯ್ ಓಂ ನಮ: ಶಿವಾಯ್  ಹರ ಹರ ಭೋಲೇ ನಮ: ಶಿವಾಯ್ ಓಂ ನಮ: ಶಿವಾಯ್ ಓಂ ನಮ: ಶಿವಾಯ್  ಹರ ಹರ ಭ...