Dec 22, 2019

SHRI VISHNU SHLOKAS IN KANNADA(ಶ್ರೀ ವಿಷ್ಣು ಶ್ಲೋಕಗಳು)



ಶ್ರೀ ವಿಷ್ಣು ಶ್ಲೋಕಗಳು

ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ
ವಿಶ್ವಾಧಾರಂ ಗಗನ ಸದೃಶಂ ಮೇಘವರ್ಣಂ ಶುಭಾಂಗಂ|
ಲಕ್ಷ್ಮೀಕಾಂತಂ ಕಮಲ ನಯನಂ ಯೋಗಿಭಿರ್ಧ್ಯಾನಗಮ್ಯO
ವಂದೇ ವಿಷ್ಣುಂ ಭವ ಭಯ ಹರಂ ಸರ್ವ ಲೋಕೈಕ ನಾಥಂ||
 .....................................................................................
ಸ ಶಂಖ ಚಕ್ರ೦ ಸ ಕಿರೀಟ ಕುಂಡಲ೦
ಸ ಪೀತವಸ್ತ್ರ೦ ಸರಸೀರುಹೇಕ್ಷಣಂ|
ಸಹಾರ ವಕ್ಷಸ್ಥಲ ಕೌಸ್ತುಭ ಶ್ರಿಯ೦
ನಮಾಮಿ ವಿಷ್ಣುಂ ಶಿರಸಾ ಚತುರ್ಭುಜಂ||
 ..........................................................................................
ಕಲ್ಯಾಣಾದ್ಭುತ ಗಾತ್ರಾಯ ಕಾಮಿತಾರ್ಥ ಪ್ರದಾಯಿನೇ
ಶ್ರೀ ಮದ್ ವೆಂಕಟ ನಾಥಾಯ ಶ್ರೀನಿವಾಸಾಯತೇ ನಮ:||



Dec 14, 2019

ಸರಳ ಸುಭಾಷಿತಗಳು – 1| SUBHASHITAS WITH KANNADA MEANING




ಸರಳ ಸುಭಾಷಿತಗಳು – 1

ಪರೋಪಕಾರಾಯ ಫಲಂತಿ ವೃಕ್ಷಾ:
ಪರೋಪಕಾರಾಯ ವಹಂತಿ ನದ್ಯ:
ಪರೋಪಕಾರಾಯ ದುಹಂತಿ ಗಾವ:
ಪರೋಪಕಾರಾರ್ಥಂ ಇದಂ ಶರೀರಂ||
(ಮರಗಳು ಹಣ್ಣನ್ನು ಕೊಡುವುದು, ನದಿಗಳು ಎಲ್ಲ ಕಡೆ ಹರಿಯುವುದು, ಹಸುಗಳು ಹಾಲನ್ನು ಕೊಡುವುದು ಇವೆಲ್ಲ ಪರೋಪಕಾರಕ್ಕಾಗಿ. ಅಂತೆಯೇ, ಮನುಷ್ಯ ಜೀವನವೂ ಕೂಡಾ ಪರೋಪಕಾರಕ್ಕಾಗಿಯೇ ಮೀಸಲಾಗಿರಬೇಕು)

ವಿದ್ಯಾ ದದಾತಿ ವಿನಯಂ ವಿನಯಾದ್ಯಾತಿ ಪಾತ್ರತಾಮ್
ಪಾತ್ರತ್ವಾತ್ ಧನಮಾಪ್ನೋತಿ ಧನಾತ್ಧರ್ಮ ತತತ್ಸುಖಮ್||
(ವಿದ್ಯೆಯು(ಜ್ಞಾನ) ವಿನಯವನ್ನು ನೀಡುತ್ತದೆ, ವಿನಯದಿಂದ ಮನುಷ್ಯನು ಯೊಗ್ಯತೆಯನ್ನು ಪಡೆಯುತ್ತಾನೆ. ಯೋಗ್ಯತೆಯಿಂದ  ಸಂಪತ್ತನ್ನು ಗಳಿಸುತ್ತಾನೆ. ಸಂಪತ್ತಿನಿಂದ ಒಳ್ಳೆಯ ಕಾರ್ಯಗಳನ್ನು ಮಾಡಿ, ಅದರಿಂದ ಸಂತೋಷವನ್ನು ಹೊಂದುತ್ತಾನೆ)

ಚೋರ ಹಾರ್ಯ೦ ರಾಜ ಹಾರ್ಯ೦
  ಭ್ರಾತ್ರ್ ಭಾಜ್ಯ೦ ಭಾರ ಕಾರ್ಯೇ
ವ್ಯಯೇ ಕ್ರತೇ ವರ್ಧತ್ ಏವ ನಿತ್ಯ೦
ವಿದ್ಯಾ ಧನ೦ ಸರ್ವ ಧನ ಪ್ರಧಾನಮ್||
(ವಿದ್ಯೆ ಎನ್ನುವ ಸಂಪತ್ತನ್ನು ಯಾರೂ ಕದಿಯಲು ಸಾಧ್ಯವಿಲ್ಲ, ರಾಜನು ಅದನ್ನು ತೆಗೆದು ಕೊಳ್ಳಲು ಸಾಧ್ಯವಿಲ್ಲ. ಸಹೋದರರಿಗೆ ಅದರಲ್ಲಿ ಯಾವುದೇ ಭಾಗವನ್ನು ಕಸಿಯಲಾಗದು.ಬೇರೆ ಸಂಪತ್ತಿನಂತೆ ಅದನ್ನು ಸಾಗಿಸಲು ತುಂಬ ಭಾರವಿಲ್ಲ. ನಾವು ಅದನ್ನು ವ್ಯಯಿಸಿದಷ್ಟುಅದು ಜಾಸ್ತಿಯಾಗುತ್ತದೆ. ವಿದ್ಯೆ ಎನ್ನುವ ಸಂಪತ್ತು ಬೇರೆ ಎಲ್ಲಾ ಸಂಪತ್ತಿಗಿಂತಲೂ ಮಿಗಿಲಾದದ್ದು)



Related Topics:


Dec 12, 2019

ಈ ಆಗಸ ಈ ತಾರೆ (EE AAGASA EE TAARE SONG LYRICS IN KANNADA)




ಆಗಸ ತಾರೆ


ಆಗಸ ತಾರೆ ಜುಳು ಜುಳನೆ ಹರಿವ ಜಲಧಾರೆ
ಮುಗಿಲ ಮಳೆಯ ಸಾಲೆ ಆಹಾ ಯಾರದೊ ಬಗೆ ಲೀಲೆ||


ಬೆಳಕ ಕಾಯ್ವ ಹಿಮವು ಹಿಮವ
ಮೆಲ್ಲನೆ ಮೀಯುವ ತಮವು
ತಮವ ಕಳೆದು ಹಿಮ ಹಾಯುವ
 ಮುಗಿಲಿನ ಬೆಚ್ಚನೆ ಕ್ರಮವು ||1||

ಹೆಣ್ಣಿನ ಕಣ್ಣಿನ ದೀಪ
ಉರಿಸದೆ ದೀಪ ರೂಪ ಪ್ರತಾಪ
ರೂಪ ದೀಪದಾಲಾಪದೀ
 ಪರಿಮಳಿಸಿದೆ ರಾಗದ ಧೂಪ||2||



ಹಾಡಲು ಕಲಿಯಿರಿ(LEARN HOW TO SING THIS SONG)

Dec 6, 2019

ಗಜಮುಖನೆ ಗಣಪತಿಯೆ ನಿನಗೆ ವಂದನೆ(GAJAMUKHANE GANAPATHIYE LYRICS IN KANNADA)




ಗಜಮುಖನೆ ಗಣಪತಿಯೆ ನಿನಗೆ ವಂದನೆ



ಗಜಮುಖನೆ ಗಣಪತಿಯೆ ನಿನಗೆ ವಂದನೆ
ನಂಬಿದವರ ಬಾಳಿನ ಕಲ್ಪತರು ನೀನೆ||

ಭಾದ್ರಪದ ಶುಕ್ಲದ ಚೌತಿಯಂದು
ನೀ ಮನೆ ಮನೆಗೂ ದಯಮಾಡಿ ಹರಸು ಎಂದು
ನಿನ್ನ ಸನ್ನಿಧಾನಕೆ ತಲೆಬಾಗಿ ಕೈಯ್ಯ ಮುಗಿದು
ಬೇಡುವ ಭಕ್ತರಿಗೆ ನೀ ದಯಾ ಸಿಂಧು||1||

ಈರೇಳು ಲೋಕದ ಅಣು ಅಣುವಿನ
ಇಹ ಪರದ ಸಾಧನಕೆ ನೀನೇ ಕಾರಣ
ನಿನ್ನೊಲುಮೆ ನೋಟ ಒಂದು ಹೊನ್ನ ಕಿರಣ
ನೀಡಿದರೆ ಸಾಕಯ್ಯ ಜನ್ಮ ಪಾವನ||2||

ಪಾರ್ವತಿ ಪರಶಿವನ ಪ್ರೇಮ ಪುತ್ರನೆ
ಪಾಲಿಸುವ ಪರದೈವ ಬೇರೆ ಕಾಣೆ
ಪಾಪದ ಪಂಕದಲಿ ಪದುಮನೆನಿಸು ಎನ್ನ
ಪಾದಸೇವೆಯೊಂದೇ ಧರ್ಮ ಸಾಧನ||3||

...............................................

ಹಾಡಲು ಕಲಿಯಿರಿ(LEARN HOW TO SING THIS SONG)

Dec 4, 2019

ಈ ಭೂಮಿ ಬಣ್ಣದ ಬುಗುರಿ(EE BHOOMI BANNADA BUGURI SONG LYRICS)




ಭೂಮಿ ಬಣ್ಣದ ಬುಗುರಿ


ಓ ಒಹೊ ಒಹೊ .. ಓ ಒಹೊ ಒಹೊ... ಓ ಒಹೊ ಒಹೊ

ಭೂಮಿ ಬಣ್ಣದ ಬುಗುರಿ…. ಶಿವನೇ ಚಾಟಿ ಕಣೋ
ಬಾಳು ಸುಂದರ ನಗರಿ…. ನೀನಿದರ ಮೇಟಿ ಕಣೋ
ನಿಂತಾಗ ಬುಗುರಿಯ ಆಟ…. ಎಲ್ಲಾರು ಒಂದೆ ಓಟ
ಕಾಲ ಕ್ಷಣಿಕ ಕಣೋ….. ||

ಮರಿಬೇಡ ತಾಯಿಯ ಋಣವ.... ಮರಿಬೇಡ ತಂದೆಯ ಒಲವ
ಹಡೆದವರೇ ದೈವ ಕಣೊ|
ಸುಖವಾದ ಬಾಷೆಯ ಕಲಿಸೊಸರಿಯಾದ ದಾರಿಗೆ ನಡೆಸೋ
ಸಂಸ್ಕೃತಿಯೇ ಗುರುವು ಕಣೋ|
ಮರೆತಾಗ ಜೀವನ ಪಾಠ… ಕೊಡುತಾನೆ ಚಾತಿಟಿ ಏಟ
ಕಾಲ ಕ್ಷಣಿಕ ಕಣೋ….. ||1||

ಮರಿಬೇಡ ಮಗುವಿನ ನಗುವ .. ಕಳಿಬೇಡ ನಗುವಿನ ಸುಖವ
ಭರವಸೆಯೇ ಮಗುವು ಕಣೆ|
ಕಳಬೇಡ ಕೊಲ್ಲಲು ಬೇಡ ನೀ ಹಾಡು ಶಾಂತಿಯ ಹಾಡ
ಜೀವನವೇ ಪ್ರೀತಿ ಕಣೋ|
ನಿಂತಾಗ ಬುಗುರಿಯ ಆಟ…. ಎಲ್ಲಾರು ಒಂದೆ ಓಟ
ಕಾಲ ಕ್ಷಣಿಕ ಕಣೋ….. ||2||




Dec 2, 2019

ಲಿಂಗಾಷ್ಟಕಮ್ (ಬ್ರಹ್ಮ ಮುರಾರಿ ಸುರಾರ್ಚಿತ) LINGASHTAKAM LYRICS IN KANNADA | BRAHMA MURARI LYRICS




ಲಿಂಗಾಷ್ಟಕಮ್


ಬ್ರಹ್ಮ ಮುರಾರಿ ಸುರಾರ್ಚಿತ ಲಿಂಗಂ ನಿರ್ಮಲ ಭಾಷಿತ ಶೋಭಿತ ಲಿಂಗಂ
ಜನ್ಮಜ ದುಃಖ ವಿನಾಶಕ ಲಿಂಗಂ ತತ್ಪ್ರಣಮಾಮಿ ಸದಾಶಿವ ಲಿಂಗಂ||1||

ದೇವ ಮುನಿಪ್ರವ ರಾರ್ಚಿತ ಲಿಂಗಂ ಕಾಮದಹನ ಕರುಣಾಕರ ಲಿಂಗಂ
ರಾವಣ ದರ್ಪ ವಿನಾಶಕ ಲಿಂಗಂ ತತ್ಪ್ರಣಮಾಮಿ ಸದಾಶಿವ ಲಿಂಗಂ||2||

ಸರ್ವಸುಗಂಧಸುಲೇಪಿತ ಲಿಂಗಂ ಬುದ್ಧಿವಿವರ್ಧನ ಕಾರಣ ಲಿಂಗಂ
ಸಿದ್ಧ ಸುರಾಸುರ ವಂದಿತ ಲಿಂಗಂ ತತ್ಪ್ರಣಮಾಮಿ ಸದಾಶಿವ ಲಿಂಗಂ||3||

ಕನಕ ಮಹಾಮಣಿ ಭೂಶಿತ ಲಿಂಗಂ ಫಣಿ ಪತಿ ವೇಷ್ಟಿತ ಶೋಭಿತ ಲಿಂಗಂ
ದಕ್ಷ ಸುಯಜ್ಞ ವಿನಾಶಕ ಲಿಂಗಂ ತತ್ಪ್ರಣಮಾಮಿ ಸದಾಶಿವ ಲಿಂಗಂ||4||

ಕುಂಕುಮ ಚಂದನ ಲೇಪಿತ ಲಿಂಗಂ ಪಂಕಜ ಹಾರ ಸುಶೋಭಿತ ಲಿಂಗಂ
ಸಂಚಿತ ಪಾಪ ವಿನಾಶಕ ಲಿಂಗಂ ತತ್ಪ್ರಣಮಾಮಿ ಸದಾಶಿವ ಲಿಂಗಂ||5||

ದೇವ ಗಣಾರ್ಚಿತ ಸೇವಿತ ಲಿಂಗಂ ಭಾವೈರ್ಭಕ್ತಿಭಿರೇವಚ ಲಿಂಗಂ
ದಿನಕರ ಕೋಟಿ ಪ್ರಭಾಕರ ಲಿಂಗಂ ತತ್ಪ್ರಣಮಾಮಿ ಸದಾಶಿವ ಲಿಂಗಂ||6||

ಅಷ್ಟದಲೋಪರಿವೇಷ್ಟಿತ ಲಿಂಗಂ ಸರ್ವಸಮುಧ್ಭವಕಾರಣ ಲಿಂಗಂ
ಅಷ್ಟ ದರಿದ್ರ ವಿನಾಶಕ ಲಿಂಗಂ ತತ್ಪ್ರಣಮಾಮಿ ಸದಾಶಿವ ಲಿಂಗಂ||7||

ಸುರಗುರು ಸುರವರ ಪೂಜಿತ ಲಿಂಗಂ ಸುರವನ ಪುಷ್ಪ ಸದಾರ್ಚಿತ ಲಿಂಗಂ
ಪರಮ ಪದಂ ಪರಮಾತ್ಮಕ ಲಿಂಗಂ ತತ್ಪ್ರಣಮಾಮಿ ಸದಾಶಿವ ಲಿಂಗಂ||8||

..................................................................................





Nov 27, 2019

ದೀಪವು ನಿನ್ನದೆ ಗಾಳಿಯು ನಿನ್ನದೆ| DEEPAVU NINNADE GAALIYU NINNADE LYRICS IN KANNADA




ದೀಪವು ನಿನ್ನದೆ ಗಾಳಿಯು

ರಚನೆ : ಕೆ. ಎಸ್. ನರಸಿಂಹಸ್ವಾಮಿ


ದೀಪವು ನಿನ್ನದೆ ಗಾಳಿಯು ನಿನ್ನದೆ ಆರದಿರಲಿ ಬೆಳಕು
ಕಡಲು ನಿನ್ನದೆ ಹಡಗು ನಿನ್ನದೆ ಮುಳುಗದಿರಲಿ ಬದುಕು||

ಬೆಟ್ಟವು ನಿನ್ನದೆ ಬಯಲು ನಿನ್ನದೆ ಹಬ್ಬಿನದಲಿ ಪ್ರೀತಿ
ನೆಳಲೋ ಬಿಸಿಲೋ ಎಲ್ಲವು ನಿನ್ನದೆ, ಇರಲಿ ಏಕ ರೀತಿ||1||

ಆಗೊಂದು ಸಿಡಿಲು ಈಗೊಂದು ಮುಗಿಲು ನಿನಗೆ ಅಲಂಕಾರ
ಅಲ್ಲೊಂದು ಹಕ್ಕಿ ಇಲ್ಲೊಂದು ಮುಗುಳು ನಿನಗೆ ನಮಸ್ಕಾರ||2||

ಅಲ್ಲಿ ರಣದುಂದುಭಿ… ಇಲ್ಲೊಂದು ವೀಣೆ …ನಿನ್ನ ಪ್ರತಿಧ್ವನಿ..
  ಮಹಾ ಕಾವ್ಯ …ಈ ಭಾವಗೀತೆ… ನಿನ್ನ ಪದಧ್ವನಿ ||3||

.............................................................................................