ದೀಪವು ನಿನ್ನದೆ ಗಾಳಿಯು
ರಚನೆ : ಕೆ. ಎಸ್. ನರಸಿಂಹಸ್ವಾಮಿ
ದೀಪವು ನಿನ್ನದೆ ಗಾಳಿಯು ನಿನ್ನದೆ ಆರದಿರಲಿ ಬೆಳಕು
ಕಡಲು ನಿನ್ನದೆ ಹಡಗು ನಿನ್ನದೆ ಮುಳುಗದಿರಲಿ ಬದುಕು||
ಬೆಟ್ಟವು ನಿನ್ನದೆ ಬಯಲು ನಿನ್ನದೆ ಹಬ್ಬಿನದಲಿ ಪ್ರೀತಿ
ನೆಳಲೋ ಬಿಸಿಲೋ ಎಲ್ಲವು ನಿನ್ನದೆ, ಇರಲಿ ಏಕ ರೀತಿ||1||
ಆಗೊಂದು ಸಿಡಿಲು ಈಗೊಂದು ಮುಗಿಲು
ನಿನಗೆ ಅಲಂಕಾರ
ಅಲ್ಲೊಂದು ಹಕ್ಕಿ ಇಲ್ಲೊಂದು ಮುಗುಳು ನಿನಗೆ ನಮಸ್ಕಾರ||2||
ಅಲ್ಲಿ ರಣದುಂದುಭಿ… ಇಲ್ಲೊಂದು ವೀಣೆ …ನಿನ್ನ ಪ್ರತಿಧ್ವನಿ..
ಆ ಮಹಾ ಕಾವ್ಯ …ಈ ಭಾವಗೀತೆ… ನಿನ್ನ ಪದಧ್ವನಿ ||3||
.............................................................................................
No comments:
Post a Comment