ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ
ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ
ಚಿಂತೆಯನ್ನು ಬಿಟ್ಟು ಶ್ರೀ ಹರಿಯ ನೆನೆ ಮನವೇ||
ದಿವ ರಾತ್ರಿ ಎನ್ನದೆ ವಿಷಯ ಲಂಪಟನಾಗಿ
ಸವಿಯೂಟಗಳನುಂಡು ಭ್ರಮಿಸಬೇಡ
ಅವನ ಕೊಂದಿವನ ಕೊಂದರ್ಥವನ್ನು ಗಳಿಸುವರೇ
ಜವನ ದೂತರು ಬರುವ ಹೊತ್ತ ನೀನರಿಯೆ||1||
ಪುತ್ರ ಹುಟ್ಟಿದ ದಿವಸ ಹಾಲಿನೂಟದ ಹಬ್ಬ
ಪುತ್ರ ಹುಟ್ಟಿದ ದಿವಸ ಹಾಲಿನೂಟದ ಹಬ್ಬ
ಮತ್ತೊಬ್ಬ ಮಗನ ಉಪನಯನ ನಾಳೆ
ಆರ್ತಿ ಆಗಿದೆ ಬದುಕು ಸಾಯಲಾರೆನು ಎನಲು
ಮೃತ್ಯು ಹೆಡೆ ತಲೆಯಲ್ಲಿ ನಗುತಿರ್ಪುದರಿಯೇ||2||
ಅಟ್ಟಡುಗೆಯುಣಲಿಲ್ಲ ಇಷ್ಟ ದರುಶನವಿಲ್ಲ
ಕೊಟ್ಟ ಸಾಲವ ಕೇಳುವ ಹೊತ್ತ ನೀನರಿಯೆ
ಕಟ್ಟಲೆ ತುಂಬಿದ ಮೇಲೆ ಕ್ಷಣ ಮಾತ್ರ ಇರಲಿಲ್ಲ
ಅಷ್ಟರೊಳು ಪುರಂದರ ವಿಠಲನೆನು ಮನವೇ||3||
No comments:
Post a Comment