ದಾನವ ಕದಳಿಯ ಕಾನನ ಮುರಿಯುತ
ದಾನವ ಕದಳಿಯ ಕಾನನ ಮುರಿಯುತ, ದಾನವ ಕದಳಿಯ ಕಾನನ ಮುರಿಯುತ
ಆನೆ ಬಂತಾನೆ ಬಂತಾನೆ ಬಂತಮ್ಮಮ್ಮಮ್ಮ||
ಗುಂಗುರುಗುರುಳ ನೀಲಾಂಗ ಚೆಲ್ವಾನೆ
ಕಂಗಳಿಗಹೊಳೆವ ವ್ಯಾಗ್ರಾಂಗುಳಿಯಾನೆ
ಬಂಗಾರದನುಗಂಟೆ ಶೃಂಗಾರ ದಾನೇ
ಮಂಗಳ ತಿಲಕದ ರಂಗಾನೆಂಬಾನೆ||1||
ಕೆಳದಿ ಗೋಪಿಯರೊಳು ಗೆಳೆತನದಾನೆ
ಸುಲಭದಿನ್ದೊಲಿಯುವ ಎಳೆಮರಿಯಾನೆ
ಘಲಿರು ಘಲಿರುರವದಿ ನಲಿದಾಡೋ ಆನೆ
ಮರೆತವರೆದೆಮ್ಯಾಲೆ ತುಲಿದಾಡೋ ಆನೆ||2||
ನಳಿನಜ ಭವರಿಗೆ ಸಿಲುಕದ ಆನೆ
ಒಲವಿಂದ ಭಕುತರ ಸಲಹುವ ಆನೆ
ಹಲವು ಕವಿಗಳಿಗೆ ನಿಲುಕದ ಆನೆ
ಬಲ ಪ್ರಸನ್ನವೆಂಕಟ ನಿಲಯಾನೆಂಬಾನೆ||3||
Also See:
No comments:
Post a Comment