Aug 14, 2019

ಹಸಿರು ಗಾಜಿನ ಬಳೆಗಳೇ| HASIRU GAJINA BALEGALE |KANNADA FILM SONG LYRICS




ಹಸಿರು ಗಾಜಿನ ಬಳೆಗಳೇ



ಹಸಿರು ಗಾಜಿನ ಬಳೆಗಳೇ ಸ್ತ್ರೀ ಕುಲದ ಶುಭ ಸ್ವರಗಳೇ
ಕೈಗಳಿಗೆ ಶೃಂಗಾರವೇ ನೀವ್ ಘಲ್ಲೆಂದರೆ ಸಂಗೀತವೇ
ನಿಲ್ಲದ ಗಾನ ನಿಮ್ಮದಮ್ಮಾ||

ತೊಟ್ಟಿಲಿನ ಕೂಸಿಗೆ ದೃಷ್ಟಿ ಇದು ತಾನೇ
ಮೊಡವೆಯ ವಯಸಿಗೆ ಒಡವೆ ಇದು ತಾನೇ
ಕಾಮನ ಬಿಲ್ಲಿಗೂ ಇದರ ಸಾಟಿ ನಿಲ್ಲದು
ಋಷಿಗಳ ಸಂಯಮ ಇದರ ಮುಂದೆ ನಿಲ್ಲದು
ಸ್ತ್ರೀ ಕುಲದ ಸೌಭಾಗ್ಯವೇ ನಿಮ್ಮ ರೂಪವು
ಲಾ ಲಾ ಲಾ||1||

ಋತುಗಳ ಜೊತೆಯಲಿ ಬದುಕು ನಡೆವಾಗ
ಬದುಕಿನ ನೆರಳಲಿ ಹೆಣ್ಣು ನಡೆವಾಗ
ಪ್ರೇಮದ ಪ್ರಣಯದ ನಡುವೆ ನಿನ್ನ ನಗುವಿದೆ
ಸಾವಿನ ನೋವಿನ ನಡುವೆ ನಿನ್ನ ಅಳುವಿದೆ
ಸ್ತ್ರೀ ಕುಲದ ಸೌಭಾಗ್ಯವೇ ನಿಮ್ಮ ರೂಪವು
ಲಾ ಲಾ ಲಾ||2||

............................................................


Also See:

No comments:

Post a Comment