Aug 16, 2019

SOJUGADA SUJU MALLIGE|ಸೊಜುಗಾದ ಸೂಜಿ ಮಲ್ಲಿಗೆ| SONG ON LORD SHIVA



ಸೊಜುಗಾದ ಸೂಜಿ ಮಲ್ಲಿಗೆ




ಸೊಜುಗಾದ ಸೂಜು ಮಲ್ಲಿಗೆ ಮಾದೇವ ನಿಮ್ಮ

ಮಂಡೆ ಮ್ಯಾಲೆ ದುಂಡು ಮಲ್ಲಿಗೆ||2||


ಅಂದಾವರೆ ಮುಂದಾವರೆ ಮತ್ತೆ ತಾವರೆ ಪುಷ್ಪ

ಚಂದಕ್ಕಿ ಮಾಲೆ ಬಿಲ್ ಪತ್ರೆ ಮಾದೇವ ನಿಮ್ಗೆ

ಚಂದಕ್ಕಿ ಮಾಲೆ ಬಿಲ್ ಪತ್ರೆ ತುಳಸಿ ದಳವ
ಮಾದಪ್ಪ ಪೂಜೆಗೆ ಬಂದು ಮಾದೇವ ನಿಮ್ಮ||1||

 ತಪ್ಪಾಳೆ ಬೆಳಗೀವ್ನಿ ತುಪ್ಪವ ಕಾಯ್ಸೀವ್ನಿ

ಕಿತ್ತಾಳೆ ಹಣ್ಣ ತಂದೀವ್ನಿ ಮಾದೇವ ನಿಮ್ಗೆ
ಕಿತ್ತಾಳೆ ಹಣ್ಣ ತಂದೀವ್ನಿ ಮಾದಪ್ಪ
ಹಿತ್ತಾಡಿ ಬರುವ  ಪರಷೆಗೆ ಮಾದೇವ ನಿಮ್ಮ||2||


ಬೆಟ್ಟ್ ಹತ್ತ್ಕೋಂಡ್ ಹೋಗೋರ್ಗೇ ಹಟ್ಟಿ ಹಂಬಲವ್ಯಾಕ

ಬೆಟ್ಟದ್ ಮಾದೇವ ಗತಿಯೆಂದು ಮಾದೇವ ನೀವೆ
ಬೆಟ್ಟದ್ ಮಾದೇವ ಗತಿಯೆಂದು ಅವರಿಂದು
ಹಟ್ಟಿ ಹಂಬಲವ ಮರೆತ್ತಾರೋ ಮಾದೇವ ನಿಮ್ಮ||3||



ಹಾಡಲು ಕಲಿಯಿರಿ(LEARN HOW TO SING THIS SONG)
Also See:


6 comments: