ಅರವಿಂದಾಲಯೇ ತಾಯೇ
ಅರವಿಂದಾಲಯೇ ತಾಯೇ ಅರವಿಂದಾಲಯೇ ತಾಯೇ
ಸಿರಿ ರಮಣನ ಪ್ರಿಯೇ ಜಗನ್ಮಾತೆ ||
ಕಮಲ ಸುಗಂಧಿಯೇ ಕಮಲದಳ ನೇತ್ರೆಯೆ ಕಮಲವಿಮಲೆ ಶೋಭಿತೇ
ಕಮನೀಯ ಪಾದೆ ಕಮಲವಿರಾಜಿತೇ ಕಮಲೇ ಕಾಯೇ ಎನ್ನನು ||೧||
ಹರಿ ನಿನ್ನ ಉರದಲ್ಲಿ ಧರಿಸಿದನೆಂಬಂತ ಗರ್ವದಿ ಮೆರೆಯದಿರೆ
ನಿರತ ನಿನ್ನಯ ಮುದ್ದು ಪುರಂದರವಿಠ್ಠಲನ ಚರಣಕಮಲವ ತೋರಿಸೆ||೨||
No comments:
Post a Comment