Aug 15, 2019

DHAVALA HIMADA GIRIYA MELE: ಧವಳ ಹಿಮದ ಗಿರಿಯ ಮೇಲೆ|KANNADA PATRIOTIC SONG LYRICS



ಧವಳ ಹಿಮದ ಗಿರಿಯ ಮೇಲೆ


ಧವಳ ಹಿಮದ ಗಿರಿಯ ಮೇಲೆ ಅರುಣ ಧ್ವಜವ ಹಾರಿಸಿ
ಮುಗಿಲ ಏಣಿ ಏರಿ ನಿಂತು ವಿಜಯ ಭೇರಿ ಬಾರಿಸಿ...||

ಸಿಂಧೂ ಕಣಿವೆ ಒಡಲಿನಿಂದ ವೀರಗಾನ ಮೊಳಗಲಿ
ಧ್ಯೇಯ ರವಿಯ ಕಿರಣತರುಣರೆದೆಯ ಗುಡಿಯ ಬೆಳಗಲಿ
ಎದ್ದು ನಿಲ್ಲು ಭಾರತ... ದಿವ್ಯ ಪ್ರಭೆಯ ಬೀರುತ||1||

ಮನವ ಹಸಿರುಗೊಳಿಸುತಿಹಳು ಭಾವಗಂಗೆ ಅನುದಿನ
ಇಳೆಯ ಕೊಳೆಯ ತೊಳೆಯುತಿಹಳು ತಾಯಿ ತುಂಗೆ ಕ್ಷಣ ಕ್ಷಣ
ನೆಲವಿದೆಮ್ಮ ಪಾವನ…. ಇನಿತು ಧನ್ಯ ಜೀವನ ||2||

ನಾಡ ಗುಡಿಯ ಮೂರು ಕಡೆಯು ಪೊರೆವ ಶಾಂತ ಸಾಗರ
ಹಿಂದೂ ಜನರ ಹೃದಯವಿಂದು ಕ್ಷಾತ್ರ ತೇಜದಾಗರ
ಸ್ಪೂರ್ತಿ ಗೌರಿ ಶಂಕರ.. ಕಾಲ ಯಮನು ಕಿಂಕರ||3||

ಅಸುರತನದಉಸಿರ ನೀಗಿ ಭೇದ ಭಾವ ನೀಗುತ
ಸಾಗು ಮುಂದೆ ಮುಂದೆ ಸಾಗು ಮಾತೆಯನ್ನು ಸ್ಮರಿಸುತ

ನಿನಗೆ ಜಯದ ಆರತಿ … ಹರಸು ತಾಯೆ ಭಾರತಿ||4||



ಹಾಡಲು ಕಲಿಯಿರಿ(LEARN HOW TO SING THIS SONG)

4 comments: