Aug 28, 2020

ಶೃಂಗಾರ ರೂಪನು ಷಣ್ಮುಖನು(SONG ON LORD KARTHIKEYA)SONG LYRICS IN KANNADA - SHRINGARA RUPANU SHANMUKHANU

 

ಶೃಂಗಾರ ರೂಪನು ಷಣ್ಮುಖನು



ಶೃಂಗಾರ ರೂಪನು ಷಣ್ಮುಖನು

ಶೃಂಗಾರ ರೂಪನು ಷಣ್ಮುಖನು

ಬಂಗಾರದೊಡಲಿನ ಕರುಣಾಂತರಂಗನು

ದಂಡಾಯುಧವನು ಧರಿಸಿದ ಸ್ವಾಮಿಯು

ಧರ್ಮವ ಕಾಯುವ ಕಂಕಣ ಬದ್ಧನು|| 


ಪಾರ್ವತಿ ಪ್ರೇಮದಿ ಹರಸಿದ ಕುವರನು

ಪರಶಿವ ಮೆಚ್ಚಿದ ಪಂಡಿತನು

ಪಾಪವ ನೀಗುವ ಪರಮ ಪುನೀತನು

ಬಡವರ ಕಷ್ಟವ ಬಲ್ಲವನೀತನು||1||


ಗಂಗೆಯು ಸಹಿಸದ ಬೆಂಕಿಯ ಬಡಲು

ಅಂತರಂಗವಿದು ಪ್ರೇಮದ ಕಡಲು

ಆನಂದ ಮೂರುತಿ ನಗುನಗುತಿರಲು

ಕೈಲಾಸ ಭುವಿಯಲ್ಲಿ ಯಾವಾಗಲೂ||2||

.................................................................................................................................

Also See:

Aug 22, 2020

ಓ೦ ಗ೦ ಗಣಪತೆ ನಮಿಪೆ (OM GAM GANAPATE NAMIPE) SONG LYRICS IN KANNADA SONG ON LORD GANESHA

ಓ೦ ಗ೦ ಗಣಪತೆ ನಮಿಪೆ(SONG O LORD GANESHA)


ಓ೦ ಗ೦ ಗಣಪತೆ ನಮಿಪೆ

ಸಿದ್ಧಿ ಬುದ್ಧಿ ಸಮೃದ್ಧಿದಾಯಕ||

 ವಿನಾಯಕ ಮೋದಕ ಸುಜನಕೆ ವರ ಜಗನ್ನಾಯಕ

ಮೂಲ ಕುಂಡಲ ಪ್ರಭಾ ಪ್ರಸನ್ನ||1||

 ಗಜಾನನ ಮೋಹನ ಮುನಿಜನ ಶರಣ ಸಂಜೀವನ

ಆದಿ ಮೂಲ ಬಲ ಮಹೇಶ ಬಾಲ||2||

.........................................


Also see:

     



 


Aug 10, 2020

ಶಿಶುಗೀತೆ: ಪುಟ್ಟ ಪುಟ್ಟ ಕೃಷ್ಣ (LYRICS OF PUTTA PUTTA KRISHNA, KANNADA RHYMES)

 

ಶಿಶುಗೀತೆ: ಪುಟ್ಟ  ಪುಟ್ಟ ಕೃಷ್ಣ 


ಪುಟ್ಟ  ಪುಟ್ಟ ಕೃಷ್ಣ ಪುಟಾಣಿ ಕೃಷ್ಣ

ಭಲಾರೆ ಗಡಿಗೆ ದೊಡ್ಡ ಬೆಣ್ಣೆ ಮುದ್ದೆ

ತೆಗೆದ, ನೆಕ್ಕಿದ ತೆಗೆದ, ನೆಕ್ಕಿದ

ಕೈಯೆಲ್ಲ ಬೆಣ್ಣೆ , ಮುಖವೆಲ್ಲ ಬೆಣ್ಣೆ

ತುಂಟ ಕೃಷ್ಣ ನಮ್ಮ ಕೃಷ್ಣ

ಸುರಬುರ ಸುರಬುರ ಮಜ್ಜಿಗೆ ಕಡೆದು

ಹೂವನೆಲ್ಲ ಕಟ್ಟಿ ಮಾಲೆಯ ಮಾಡಿ

ಕೃಷ್ಣಂಗೆ ಹಾಕಿ ವಂದನೆ ಮಾಡಿ

............................................

ಹಾಡಲು ಕಲಿಯಿರಿ(LEARN HOW TO SING THIS SONG)

Also see:

baagi baagi bangara toogi( ಬಾಗಿ ಬಾಗಿ ಬಂಗಾರ ತೂಗಿ)

kannada-kaliswaras-with-image(ಕನ್ನಡ ವರ್ಣಮಾಲೆ :ಸ್ವರಗಳು)


Aug 9, 2020

ಈ ಹಿಂದೂ ದೇಶವು ನಮ್ಮ ಮನೆ| EE HINDU DESHAVU NAMMA MANE SONG LYRICS IN KANNADA|PATRIOTIC SONG

 

ದೇಶಭಕ್ತಿ ಗೀತೆ


ಹಿಂದೂ ದೇಶವು ನಮ್ಮ ಮನೆ

ನಮ್ಮ ಮನೆ ಇದು ನಮ್ಮ ಮನೆ||

 

ಉತ್ತರದಲ್ಲಿ ಭಾರಿ ಹಿಮಾಲಯ

 ದಕ್ಷಿಣದಲ್ಲಿಕನ್ಯಾಕುಮಾರಿ

ಪೂರ್ವಪಶ್ಚಿಮದಲಿ ನೀಲ ಸಮುದ್ರ

 ಪಡುವಣ ಮೂಡಣ ಬೆಟ್ಟದ ಸಾಲು||1||

 

ತಾಯಿ ಕಾವೇರಿ ಕೃಷ್ಣ ಗೋದಾವರಿ

ನರ್ಮದ ತಪತಿ ತುಂಗಾಭದ್ರೆ

ಗಂಗಾ ತಾಯಿ ಸಿಂಧೂ ರಾಣಿ

ಚಂದದಿ ಹರಿಯುವ ನಂದನ ನಾಡು||2||

 

ಮೈಸೂರು ಕೇರಳ ಮದರಾಸು ಆಂಧ್ರ

ಬೊಂಬಾಯಿ ಅಸ್ಸಾಂ ಉತ್ಕಲ ವಂಗ

ರಾಜಸ್ಥಾನ ಪಂಜಾಬ್ ಕಾಶ್ಮೀರ

ಉತ್ತರ ಮಧ್ಯ ಹಿಮಾಲಯ ಪ್ರಾಂತ್ಯ||3||

 

ಗೀತ ಸಂದೇಶದ ಆದೇಶದಂತೆ

ಕಾತುರರಾಗಿ ಕಾದಿರಿ ನೀವು

ಗೀತಾಚಾರ್ಯರ ಗೀತೆಯ ನೆನೆಯುತ

ಮಾತೆಯ ಕಾಯು ಬೇಗನೆ ಬನ್ನಿ||4||


..............................

ಹಾಡಲು ಕಲಿಯಿರಿ(LEARN HOW TO SING THIS SONG)

Also see:

banasiri-prakritiya-varadana-lyrics(ಪರಿಸರ ಗೀತೆ: ಬನಸಿರಿ ಪ್ರಕೃತಿಯ ವರದಾನ )

hindustaanavu-endu-mareyada-song-lyrics(ಹಿಂದೂಸ್ಥಾನವು ಎಂದೂ ಮರೆಯದ)