CLICK HERE FOR EXPLANATION FOR THIS SHLOKA
सर्पापसर्प भद्रं ते गच्छ सर्प महाविष।
जनमेजययज्ञान्तॆ आस्तीकवचनं स्मर॥
ಸರ್ಪಾಪಸರ್ಪ ಭದ್ರಂ
ತೇ ಗಚ್ಛ ಸರ್ಪ ಮಹಾವಿಷ।
ಜನಮೇಜಯ ಯಜ್ಞಾಂತೇ
ಆಸ್ತೀಕ ವಚನಂ ಸ್ಮರ॥
ಮಹಾವಿಷವುಳ್ಳ
ಮಹಾಸರ್ಪವೇ , ಅತ್ತ ಸರಿ. ಇಲ್ಲಿಂದ
ಹೊರಟು ಹೋಗು. ನಿನಗೆ ಮಂಗಳವಾಗಲಿ. ಜನಮೇಜಯನು ಮಾಡಿದ ಸರ್ಪ ಯಾಗದ ಅಂತ್ಯದಲ್ಲಿ ಮಹಾಮಹಿಮನಾದ
ಆಸ್ತೀಕನು ನಿನ್ನ ಪೂರ್ವಜರನ್ನು ಕುರಿತು ಏನು ಹೇಳಿದ್ದನೆಂಬುದನ್ನು ಸ್ಮರಿಸು.
ಆಸ್ತೀಕಸ್ಯ ವಚ: ಶ್ರುತ್ವಾ ಯ:ಸರ್ಪೋ ನ ನಿವರ್ತತೇ।
ಶತಧಾ ಭಿದ್ಯತೇ
ಮೂರ್ಧ್ನೀ ಶಿಂಶವೃಕ್ಷಫಲಂ ಯಥಾ॥
ಆಸ್ತೀಕನು ಹೇಳಿದ
ಮಾತುಗಳನ್ನು ಜ್ಞಾಪಕಕ್ಕೆ ತಂದಮೇಲೂ ಯಾವ ಸರ್ಪವು ತನ್ನ ಪಾಡಿಗೆ ತಾನು ಹೊರಟು ಹೋಗುವುದಿಲ್ಲವೋ
ಅಂತಹ ಸರ್ಪದ ತಲೆಯು ಶಿಂಶವೃಕ್ಷದ ಫಲದಂತೆ ನೂರಾರು ಹೋಳಾಗುತ್ತದೆ.
……………………………………………………………………………
ಜರತ್ಕಾರೋಜರತ್ಕಾರ್ವಾಂ
ಸಮುತ್ಪನ್ನೋ ಮಹಾಶಯಾ:।
ಆಸ್ತೀಕ ಸತ್ಯಸಂಧೋ
ಮಾಂ ಪನ್ನಗೆಭ್ಯೋSಭಿರಕ್ಷತು॥
ಜರತ್ಕಾರುವಿನಿಂದ
ಜರತ್ಕಾರುವಿನಲ್ಲಿ ಸಮುತ್ಪನ್ನನಾದ ,ಮಹಾಶಯನಾದ ಸತ್ಯಸಂಧನಾದ ಆಸ್ತೀಕನು ಹಾವುಗಳಿಂದ
ನನ್ನನ್ನು ಸಂರಕ್ಷಿಸಲಿ.
-ಸಂಧ್ಯಾವಂದನೆಯ ಉಪಸ್ಥಾನದಲ್ಲಿ ಹೇಳುವ ಮಂತ್ರ
…………………………………………………………………………
No comments:
Post a Comment