ಹೊತ್ತಿತೋ ಹೊತ್ತಿತು ಕನ್ನಡದ ದೀಪ SONG LYRICS | HOTHITHO HOTHITHU KANNADA DA DEEPA |

 

ಸಾಹಿತ್ಯ : ಡಾ.ಸಿದ್ದಯ್ಯ ಪುರಾಣಿಕ

ಶಕ್ತಿ ಮೂಲವು ನಿನಗೆ ಕನ್ನಡದ ಪ್ರೇಮ
ಕನ್ನಡಿಗ ನೀನಾಗು ಕನ್ನಡದ ಧೀಮ
ಉಸಿರಾಗು ಕನ್ನಡದ ತೇಜ ಸ್ವರೂಪ
ಕನ್ನಡಿಗರೆದೆ ಬೆಳಗೆ ಕನ್ನಡವೇ ದೀಪ

ಹೊತ್ತಿತೋ ಹೊತ್ತಿತು ಕನ್ನಡದ ದೀಪ
ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ
ಹೊತ್ತಿತೋ ಹೊತ್ತಿತೋ ಕನ್ನಡದ ದೀಪ
ಹೊತ್ತಿತೋ.. ಹೊತ್ತಿತು...ಕನ್ನಡದ ದೀಪ



ಕಣ್ಣು ಕುಕ್ಕಿಸುವಂತೆ ಧೇವಿದ್ಯಮಾನ
ಹರ್ಷ ಉಕ್ಕಿಸುವಂತೆ ಶೋಭಾಯಮಾನ
ಕನ್ನಡದ ಮನೆಯಾಗೇ ಜ್ಯೋತಿರ್ನಿಧಾನ
ಕನ್ನಡದ ಪ್ರಾಣ.......... ಕನ್ನಡದ ಮಾನ......
ಕನ್ನಡದ ಪ್ರಾಣ... ಕನ್ನಡದ ಮಾನ
ಹೊತ್ತಿತೋ.. ಹೊತ್ತಿತು...ಕನ್ನಡದ ದೀಪ ||1||

ಉರಿವವರು ಬೇಕಿನ್ನು ಇದರೆಣ್ಣೆಯಾಗಿ
ಸುಡುವವರೂ ಬೇಕಿದನು ನಿಡುಬತ್ತಿಯಾಗಿ
ಧರಿಸುವವರು ಬೇಕಿದನು ಸಿರಿಹಣತೆಯಾಗಿ
ತನ್ನ ಉಸಿರಾಗಿ.........ಧರ್ಮಕ್ಕೆ ಬಾಗಿ......
ತನ್ನ ಉಸಿರಾಗಿ ಧರ್ಮಕ್ಕೆ ಬಾಗಿ
ಹೊತ್ತಿತೋ.. ಹೊತ್ತಿತು...ಕನ್ನಡದ ದೀಪ ||2||

ಚಿರಕಾಲ ಬೆಳಗಲಿ ಕನ್ನಡದ ದೀಪ
ಜಗಕ್ಕೆಲ್ಲ ಬೆಳಕಾಗಿ ಪುಣ್ಯ ಪ್ರದೀಪ
ಭಾರತಕೆ ಬಲವಾಗಿ ಭವ್ಯ ಪ್ರದೀಪ
ಕಳೆಯುತ್ತಾ ತಾಪ............ ಬೆಳೆಸುತ್ತಾ ಸೈಪ
ಕಳೆಯುತ್ತಾ ತಾಪ .....ಬೆಳೆಸುತ್ತಾ ಸೈಪ
ಹೊತ್ತಿತೋ.. ಹೊತ್ತಿತು...ಕನ್ನಡದ ದೀಪ ||3||

..............................................................................................................................................

ಕರುನಾಡೇ ಕೈ ಚಾಚಿದೆ ನೋಡೆ

No comments:

Post a Comment

ಬಾ ಸವಿತಾ.... ಬಾ ಸವಿತಾ... ರಚನೆ : ಮಾಸ್ತಿ ವೆಂಕಟೇಶ ಅಯ್ಯಂಗಾರ್ |Lyrics in Kannada Baa Savitha song

ಹಾಡಲು ಕಲಿಯಿರಿ(CLICK HERE TO LEARN THIS SONG)   ಬಾ ಸವಿತಾ .... ಬಾ ಸವಿತಾ ... ಒಳಗಿನ ಕಣ್ಣನು ಮುಚ್ಚಿಸಿ ಒಮ್ಮೆ , ತಿಳಿವಿಗೆ ಬಣ್ಣವ ಹಚ್ಚಿಸ...