ಶತ ಶತಮಾನಗಳೇ ಉರುಳಲಿ SONG LYRICS | KANNADA RAJYOTSAVA SONGS |SHATHA SHATHAMAANAGAlE URULALI SONG LYRICS

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ : ಡಿ. ರಮೇಶ್ ಗುರುದೇವ್

 

ಶತ ಶತಮಾನಗಳೇ ಉರುಳಲಿ ನಾನಳಿದರೂ ನೀನಳಿದರೂ

 ಕೊನೆಗೊಬ್ಬ ಕನ್ನಡಿಗನು ಉಳಿದರೂ

ಕನ್ನಡಮಯವಾಗುವುದು ಕನ್ನಡ ನಾಡೆಲ್ಲಾ

ಆ ಒಬ್ಬ ಕನ್ನಡಿಗ ನೀನಾಗು ಬಾ

ಈ ತಾಯಿಯ ಋಣವಾ ತೀರಿಸು ಬಾ  ||

 

ಕನ್ನಡವೇ ಸತ್ಯ ಕನ್ನಡವೇ ನಿತ್ಯ

 

ಕನ್ನಡವೆಂದರೆ ಬರಿ ನುಡಿಯಲ್ಲ

ಧಮನಿ ಧಮನಿಯಲಿ ಹರಿಯುವ ರಕುತ

ಕನ್ನಡವೆಂದರೆ ಬರಿ ಭಾಷೆಯಲ್ಲ

ಹೃದಯ ಹೃದಯಗಳ ಸಂಗಮ

ಕನ್ನಡನೆಂದರೆ ಬರಿ ನಡೆಯಲ್ಲ

ಹೆಜ್ಜೆ ಹೆಜ್ಜೆಗಳು ಸಾಗಿದ ಗುರುತು

ಕನ್ನಡವೆಂದರೆ ಇತಿಹಾಸವಲ್ಲ

ಇಂದು ನಾಳೆಗಳ ಚಿರಬೆಸುಗೆ

ಕನ್ನಡವೆಂದರೆ ಜನ ಜಾತಿಯಲ್ಲ

ಸರ್ವರನು ಕೈಬೀಸಿ ಕರೆಯುವ ಮಾತೆ ||1||

 

ಕನ್ನಡವೆಂದರೆ ಬಿಳಿ ಮೋಡವಲ್ಲ

ಆಗುಂಬೆಯ ನಿತ್ಯ ವರ್ಷಧಾರೆ

ಕನ್ನಡವೆಂದರೆ ನಿಂತ ನೀರಲ್ಲ

ನಿರಂತರ ಹರಿಯುವ ಅಮೃತಕಾವೇರಿ

ಕನ್ನಡವೆಂದರೆ ಕಲ್ಲುಮನಸಲ್ಲ

ಕರಗಿದ ಬಾದಾಮಿಯ ಮೇಣ ಬಸದಿ

ಕನ್ನಡವೆಂದರೆ ಬರಿ ಧ್ವನಿಯಲ್ಲ

ಪ್ರತಿಧ್ವನಿಸುವ ಗೋಲಗುಮ್ಮಟ

ಕನ್ನಡವೆಂದರೆ ಕೊಂಪೆಯಲ್ಲ

ಗತಕಾಲದ ಸುವರ್ಣ ಹಂಪಿ ||2||

 

ಕನ್ನಡವೆಂದರೆ ನೀಲಾಕಾಶವಲ್ಲ

ಅದರಾಚೆಗೂ ಚಾಚುವ ಅನಂತ ದೂರ

ಕನ್ನಡವೆಂದರೆ ಬರಿ ಪ್ರಪಾತವಲ್ಲ

ಭಾವನೆಗಳ ಆಳಕ್ಕಿಳಿಯುವ ಜೋಗ ಜಲಪಾತ

ಕನ್ನಡವೆಂದರೇ ಬೇರೇ ಏನೂ ಅಲ್ಲ

ಅದು ನನ್ನೊಳಗೂ ಅದು ನಿನ್ನೊಳಗೂ

ಕಣಕಣದೊಳಗೂ ಬೆರೆತಿರುವ ಉಸಿರು

ಕನ್ನಡವೆಂದರೆ ಕೊನೆಯಾಗುವುದಲ್ಲ

ಅದು ಒಬ್ಬನಿಂದ ಕೋಟಿ ಕೋಟಿ ಜೀವ ಜೀವದಲಿ

ಸಂಚರಿಸುವ ಚೇತನ ,ಸಂಚರಿಸುವ ಚೇತನ,ಸಂಚರಿಸುವ ಚೇತನ ||3||

............................................................................................................................................................

No comments:

Post a Comment

ಪಂಢರಾಪುರವೆಂಬ ದೊಡ್ಡ ನಗರ LYRICS IN KANNADA |PANDARAPURAVAMBA DODDA NAGARA |PURANDARA DASA SONGS

  ಹಾಡಲು ಕಲಿಯಿರಿ(CLICK HERE TO LEARN THIS SONG) ಪಂಢರಾಪುರವೆಂಬ ದೊಡ್ಡ ನಗರ ಅಲ್ಲಿ ವಿಠೋಬನೆಂಬ ದೊಡ್ಡ ಸಾಹುಕಾರ || ಪ || ವಿಠೋಬನಿರುವದು ನದಿ...