ಶಿರಬಾಗಿ ನಮಿಸುವೆನು ಶಂಕರ ಪದಾಂಬುಜಗೆ |SHIRABAGI NAMISUVENU|SHNKARACHARYA SONG LYRICS

 

ಹಾಡಲು ಕಲಿಯಿರಿ(CLICK HERE TO LEARN THIS SONG)

ತತ್ವಮಸಿ,ಅಯಮಾತ್ಮಾ ಬ್ರಹ್ಮ,ಪ್ರಜ್ಞಾನಂ ಬ್ರಹ್ಮ,

ಅಹಂ ಬ್ರಹ್ಮಾಸ್ಮಿ,ಅಹಂ ಬ್ರಹ್ಮಾಸ್ಮಿ||

(ನೀನೇ ಸತ್ವ, ಈ ಆತ್ಮವೇ ಬ್ರಹ್ಮ, ಜ್ಞಾನವೇ ಬ್ರಹ್ಮ, ನಾನು ಬ್ರಹ್ಮ, ನಾನೇ ಬ್ರಹ್ಮ )

 

ಶಿರಬಾಗಿ ನಮಿಸುವೆನು ಶಂಕರ ಪದಾಂಬುಜಗೆ

 ಪರಮಾತ್ಮನಿರವನ್ನು ತೋರಿದ ಯತಿಗೆ|

ಧರೆಗಿಳಿದು ಬಂದಂಥ ಶಿವನ ಸ್ವರೂಪನಿಗೆ

ಆಧ್ಯಾತ್ಮದರಿವಿತ್ತ ಸದ್ಗುರುವಿಗೆ,ಆಧ್ಯಾತ್ಮದರಿವಿತ್ತ ಸದ್ಗುರುವಿಗೆ,||

 

ಶ್ರೀ ಶಂಕರಾಚಾರ್ಯ ಗುರುವರಗೆ ನಮನ

ಶ್ರೀ ಶಂಕರಾಚಾರ್ಯ ಗುರುವರಗೆ ನಮನ

 

ಜೀವನದ ಗುರಿಯನ್ನು ಬಾಲ್ಯದಲೆ ಅರಿಯುತ್ತ

 ಪರಮಪದಕೆಂದು ಸನ್ಯಾಸ ಪಡೆದು|

ತಿರುತಿರುಗಿ ಭಾರತದ ಉದ್ದಗಲದೊಳಗೆಲ್ಲ

 ಪರತತ್ವದರ್ಥವನು ಬಿತ್ತರಿಸಿದವಗೆ, ಪರತತ್ವದರ್ಥವನು ಬಿತ್ತರಿಸಿದವಗೆ

|| ಶ್ರೀ ಶಂಕರಾಚಾರ್ಯ||

 

ಅನುಭವಿಯು ನೀ ನಡೆದ ಹಾದಿಯೊಳಗಡಿಯಿಡುವ

 ಮನವೆನಗೆ ಕೊಡಿರೆನುತ ಬೇಡುವೆನು ಗುರುವೆ।

ಅನವರತ ನಿನ್ನ ನಾಮಸ್ಮರಣೆ ಬಿಡದಂತೆ

 ಅನುನಯದಿ ನಡೆವಂತೆ ನೀನೆಮ್ಮ ಹರಸು, ಅನುನಯದಿ ನಡೆವಂತೆ ನೀನೆಮ್ಮ ಹರಸು

 ॥ ಶ್ರೀ ಶಂಕರಾಚಾರ್ಯ||

...................................................................................................................................................

Also See:

ಕಾಣದ ಕಡಲಿಗೆ ಹಂಬಲಿಸಿದೆ ಮನ Lyrics| kanada kadalige song lyrics in Kannada| C Ashwath songs lyrics

SONG ON GURU

SUBHASHITA : ಅಮಂತ್ರಮ್ ಅಕ್ಷರಂ ನಾಸ್ತಿ (ಪ್ರತಿಯೊಂದರಲ್ಲೂ ಪ್ರಯೋಜನವಿದೆ)| AMANTRAM AKSHARAM NAASTI WITH MEANING IN KANNADA

 ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


अमन्त्रम् अक्षरं नास्ति नास्ति मूलमनौषधम् |

अयॊग्यो पुरुषो नास्ति योजकस्तत्र दुर्लभः ||

 

ಅಮಂತ್ರಮ್ ಅಕ್ಷರಂ ನಾಸ್ತಿ ,ನಾಸ್ತಿ ಮೂಲಮನೌಷಧಮ್ |

ಅಯೋಗ್ಯೋ ಪುರುಷೋ ನಾಸ್ತಿ, ಯೋಜಕಸ್ತತ್ರ ದುರ್ಲಭ: ||

 

ಮಂತ್ರಗಳಲ್ಲಿ ಉಪಯೋಗಿಸಲಾದದಂತಹ ಯಾವ ಅಕ್ಷರಗಳೂ ಇಲ್ಲ ,ಔಷಧೀಯ ಗುಣವಿಲ್ಲದ ಯಾವ ಗಿಡಮೂಲಿಕೆಗಳೂ ಇಲ್ಲ, ಹಾಗೆಯೇ ಅಪ್ರಯೋಜಕನಾದ ಮನುಷ್ಯನೂ ಇಲ್ಲ . ಆದರೆ ಇವುಗಳನ್ನು ಸರಿಯಾದ ರೀತಿಯಲ್ಲಿ ಗುರುತಿಸಿ ಉಪಯೋಗಿಸಿಕೊಳ್ಳುವವರು ಬಹಳ ವಿರಳ.

........................................................................................................................................

Also See:

ಭೋ ಶಂಭೋ ಶಿವ ಶಂಭೋ ಸ್ವಯಂಭೋ | Bho Shambho Shiva Shambho song lyrics in Kannada and English

SUBHASHITA: ಕ್ಷಣಶಃ ಕಣಶಶ್ಚೈವ (ವಿದ್ಯೆ & ಧನವನ್ನು ಹೇಗೆ ಗಳಿಸಬೇಕು) WITH MEANING IN KANNADA

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


क्षणशः कणशश्चैव विद्यामर्थं च साधयॆत् |

क्षणत्यागे कुतो विद्या कणत्यागे कुतो धनम् ||

 

ಕ್ಷಣಶಃ ಕಣಶಶ್ಚೈವ ವಿದ್ಯಾಮರ್ಥಂ ಚ ಸಾಧಯೇತ್

ಕ್ಷಣ ತ್ಯಾಗೇ ಕುತೋ ವಿದ್ಯಾ  ಕಣ ತ್ಯಾಗೇ ಕುತೋ ಧನಂ||

  

ಅರ್ಥ: ವಿದ್ಯೆ ಹಾಗೂ ಧನವನ್ನು ಸ್ವಲ್ಪ ಸ್ವಲ್ಪವಾಗಿ ಎಲ್ಲಾ ಕಡೆಯಿಂದಲೂ ಗಳಿಸುತ್ತ ಹೋಗಬೇಕು. (ಹಾಗೆಯೇ ತೆನೆ ತೆನೆ ಕೂಡಿದರೆ ರಾಶಿ). ಒಂದೊಂದು ಕ್ಷಣವನ್ನು ವ್ಯರ್ಥವಾಗಿ ಕಳೆದರೆ ವಿದ್ಯೆ ಪ್ರಾಪ್ತವಾಗುವುದಿಲ್ಲ. ಅದೇ ರೀತಿ ಚೂರು ಚೂರೆಂದು ವ್ಯರ್ಥ ಖರ್ಚು ಮಾಡುತ್ತಾ ಹೋದರೆ ಸಿರಿವಂತಿಕೆ ಹೇಗೆ ಬಂದೀತು?

......................................................................................................................

Also See:

ಗುರುವಿನ ಗುಲಾಮನಾಗುವ ತನಕ ಸಾಹಿತ್ಯ| GURUVINA GULAMA NAAGUVA TANAKA LYRICS IN KANNADA| PURANDARA DASA SONGS


SUBHASHITA: ಬಹವೋ ಯತ್ರ ನೇತಾರ:(ಸಂಸ್ಥೆಯ ನಾಶಕ್ಕೆ ಕಾರಣ)|BAHAVO YATRA NETARAHA SUBHASHITA WITH MEANING IN KANNADA

 ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


बहवो यत्र नेतारः ,सर्वे पण्डित मानिनः |

सर्वे महत्वमिछन्ति तद् व्रन्दमवसीदति ||

 

ಬಹವೋ ಯತ್ರ ನೇತಾರ:, ಸರ್ವೇ ಪಂಡಿತ ಮಾನಿನ:

ಸರ್ವೇ ಮಹತ್ವಮಿಚ್ಛ೦ತಿ, ತದ್ ವೃಂದಮವಸೀದತಿ||

 

ಯಾವ ಸಂಸ್ಥೆಯಲ್ಲಿ ಒಂದಕ್ಕಿಂತ ಹೆಚ್ಚು ನಾಯಕರು ಗಳು ಇರುತ್ತಾರೆ ಹಾಗೆಯೇ ಎಲ್ಲರೂ ತಮ್ಮನ್ನು ತಾವು ಬುದ್ಧಿವಂತರು, ಪಂಡಿತರು ಎಂದು ಭಾವಿಸಿರುತ್ತಾರೋ ,ಎಲ್ಲರೂ ತಮ್ಮ ಪ್ರತಿಷ್ಠೆಯನ್ನು ಬಯಸುತ್ತಾರೋ ಆ ಸಂಸ್ಥೆ/ಸಂಘವು ಬಹಳ ಬೇಗ ನಶಿಸಿಹೋಗುತ್ತದೆ.

...................................................................................................................

Also See:

ಅಮ್ಮ ನಿನ್ನ ಎದೆಯಾಳದಲ್ಲಿ|AMMA NINNA EDEYAALADALLI LYRICS IN KANNADA

ಸುಭಾಷಿತಗಳ ಮಹತ್ವ| IMPORTANCE OF SUBHASHITAS



ಗುರುವಿನ ಗುಲಾಮನಾಗುವ ತನಕ ಸಾಹಿತ್ಯ| GURUVINA GULAMA NAAGUVA TANAKA LYRICS IN KANNADA| PURANDARA DASA SONGS

 ಹಾಡಲು ಕಲಿಯಿರಿ(CLICK HERE TO LEARN THIS SONG)


ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ|

ಪರಿ ಪರಿ ಶಾಸ್ತ್ರವನೋದಿದರೇನು ವ್ಯರ್ಥವಾಯಿತು ಭಕುತಿ||

 

ಆರು ಶಾಸ್ತ್ರವನೋದಿದರೇನು ನೂರಾರು ಪುರಾಣವ ಮುಗಿಸಿದರೇನು

ಸಾಧು ಸಜ್ಜನರ ಸಂಗವ ಮಾಡದೆ ಧೀರನೆಂದು ತಾ ತಿರುಗಿದರೇನು||1||

 

ಕೊರಳೊಳು ಮಾಲೆ ಧರಿಸಿದರೇನು ಬೆರಳೊಳು ಜಪಮಣಿ ಎಣಿಸಿದರೇನು

ಮರಳಿ ಮರಳಿ ತಾ ಹೊರಳಿ ಬೂದಿಯೊಳು ಮರುಳನಂತಾಗಿ ತಿರುಗಿದರೇನು ||2||

 

ನಾರಿಯ ಭೋಗ ಅಳಿಸಿದರೇನು ಶರೀರ ಸುಖವನು ಬಿಡಿಸಿದರೇನು

ಮಾರಜನಕ ಶ್ರೀ ಪುರಂದರವಿಠಲನ ಸೇರಿಕೊಂಡು ತಾ ಪಡೆಯುವ ತನಕ||3||

......................................................................................................

Also See:

ಕೂಸಿನ ಕಂಡೀರಾ | KUSINA KANDIRA SONG LYRICS IN KANNADA


SUBHASHITA: ದ್ರಾಕ್ಷಾ ಮ್ಲಾನಮುಖೀ ಜಾತಾ DRAKSHA MLANAMUKHI WITH MEANING IN KANNADA|IMPORTANCE OF SUBHASHITA

 ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


द्राक्षा म्लानमुखी जाता शर्करा चाष्मतां गता |

सुभाषित रसस्याग्रे सुधा भीता दिवं गता ||

 

ದ್ರಾಕ್ಷಾ ಮ್ಲಾನಮುಖೀ ಜಾತಾ ,ಶರ್ಕರಾ ಚಾಷ್ಮತಾ೦ ಗತಾ।

ಸುಭಾಷಿತ ರಸಸ್ಯಾಗ್ರೇ, ಸುಧಾ ಭೀತಾ ದಿವ೦ ಗತಾ॥

 

ಸುಭಾಷಿತದ ರಸವನ್ನು ಕಂಡು ದ್ರಾಕ್ಷಿಹಣ್ಣಿನ ಮುಖ ಬಾಡಿಹೋಯಿತು ,ಸಕ್ಕರೆ(ಶರ್ಕರಾ) ಕಲ್ಲಿನಂತೆ ಗಟ್ಟಿಯಾಯಿತು ಹಾಗೂ ಅಮೃತವೂ(ಸುಧಾ) ಭಯಗೊಂಡು  ಸ್ವರ್ಗಕ್ಕೆ(ದಿವ೦) ಹೋಯಿತು.

...........................................................................................................................

Also See:

ಶಂಕರ ಶಶಿಧರ ಗಜಚರ್ಮಾಂಬರ SONG LYRICS IN KANNADA |SHANKARA SHASHIDHARA SONG LYRICS|

 ಹಾಡಲು ಕಲಿಯಿರಿ(CLICK HERE TO LEARN THIS SONG)


ಶಂಕರ ಶಶಿಧರ ಗಜಚರ್ಮಾಂಬರ ಗಂಗಾಧರ ಹರನೆ

ಸುಂದರ ಸ್ಮರಹರ ಗೌರಿ ಮನೋಹರ ಜಯ ಪರಮೇಶ್ವರನೇ

 ಜಯ ಜಯ ಶಂಕರನೇ ಜಯ ವಿಶ್ವೇಶ್ವರನೇ ||

 

ಈಶ ಗಿರೀಶ ಮಹೇಶ ಉಮೇಶ ಜಯ ವಿಶ್ವೇಶ್ವರನೇ

ಶೂಲಿ ಕಪರ್ದಿ ತ್ರಿನೇತ್ರ ತ್ರಯಂಬಕ ಜಯ ಮೃತ್ಯುಂಜಯನೇ

ಜಯ ಮೃತ್ಯುಂಜಯನೇ|

ಭಕುತಿಗೆ ಬೇಗನೆ ಒಲಿಯುವ ದೇವನೇ ಜಯ ತ್ರಿಪುರಾಂತಕನೇ

ಬೇಡಿದ ವರಗಳ ಕ್ಷಣ ನೀಡುವ ಸಾಂಬಸದಾಶಿವನೆ|

ಜಯ ಜಯ ಶಂಕರನೇ ಜಯ ವಿಶ್ವೇಶ್ವರನೇ ||

 

ಋಷಿಗಳ ಹೃದಯದಿ ಮನೆಯನು ಮಾಡಿದ ತ್ರಿಭುವನ ಪಾಲಕನೇ

ಲೋಕವ ರಕ್ಷಿಸೆ ವಿಷವನೆ ಕುಡಿದ ಕರುಣಾಸಾಗರನೇ, ಕುಡಿದ ಕರುಣಾಸಾಗರನೇ|

ಶಂಕರ ಶಶಿಧರ ಗಜಚರ್ಮಾಂಬರ ಗಂಗಾಧರ ಹರನೆ

ಸುಂದರ ಸ್ಮರಹರ ಗೌರಿ ಮನೋಹರ ಜಯ ಪರಮೇಶ್ವರನೇ

 ಜಯ ಜಯ ಶಂಕರನೇ ಜಯ ವಿಶ್ವೇಶ್ವರನೇ ||

.................................................................................................................

Also see:

ನೀಡು ಶಿವ ನೀಡದಿರು ಶಿವ(NEEDU SHIVA NEEDADIRU SHIVA) SONG LYRICS IN KANNADA

ಪಂಢರಾಪುರವೆಂಬ ದೊಡ್ಡ ನಗರ LYRICS IN KANNADA |PANDARAPURAVAMBA DODDA NAGARA |PURANDARA DASA SONGS

  ಹಾಡಲು ಕಲಿಯಿರಿ(CLICK HERE TO LEARN THIS SONG) ಪಂಢರಾಪುರವೆಂಬ ದೊಡ್ಡ ನಗರ ಅಲ್ಲಿ ವಿಠೋಬನೆಂಬ ದೊಡ್ಡ ಸಾಹುಕಾರ || ಪ || ವಿಠೋಬನಿರುವದು ನದಿ...