ಹಾಡಲು ಕಲಿಯಿರಿ(CLICK HERE TO LEARN THIS SONG)
ತತ್ವಮಸಿ,ಅಯಮಾತ್ಮಾ
ಬ್ರಹ್ಮ,ಪ್ರಜ್ಞಾನಂ ಬ್ರಹ್ಮ,
ಅಹಂ ಬ್ರಹ್ಮಾಸ್ಮಿ,ಅಹಂ
ಬ್ರಹ್ಮಾಸ್ಮಿ||
(ನೀನೇ ಸತ್ವ,
ಈ ಆತ್ಮವೇ ಬ್ರಹ್ಮ, ಜ್ಞಾನವೇ ಬ್ರಹ್ಮ, ನಾನು ಬ್ರಹ್ಮ, ನಾನೇ ಬ್ರಹ್ಮ )
ಶಿರಬಾಗಿ
ನಮಿಸುವೆನು ಶಂಕರ ಪದಾಂಬುಜಗೆ
ಪರಮಾತ್ಮನಿರವನ್ನು ತೋರಿದ ಯತಿಗೆ|
ಧರೆಗಿಳಿದು
ಬಂದಂಥ ಶಿವನ ಸ್ವರೂಪನಿಗೆ
ಆಧ್ಯಾತ್ಮದರಿವಿತ್ತ
ಸದ್ಗುರುವಿಗೆ,ಆಧ್ಯಾತ್ಮದರಿವಿತ್ತ ಸದ್ಗುರುವಿಗೆ,||
ಶ್ರೀ
ಶಂಕರಾಚಾರ್ಯ ಗುರುವರಗೆ ನಮನ
ಶ್ರೀ
ಶಂಕರಾಚಾರ್ಯ ಗುರುವರಗೆ ನಮನ
ಜೀವನದ
ಗುರಿಯನ್ನು ಬಾಲ್ಯದಲೆ ಅರಿಯುತ್ತ
ಪರಮಪದಕೆಂದು ಸನ್ಯಾಸ ಪಡೆದು|
ತಿರುತಿರುಗಿ
ಭಾರತದ ಉದ್ದಗಲದೊಳಗೆಲ್ಲ
ಪರತತ್ವದರ್ಥವನು ಬಿತ್ತರಿಸಿದವಗೆ, ಪರತತ್ವದರ್ಥವನು ಬಿತ್ತರಿಸಿದವಗೆ
|| ಶ್ರೀ
ಶಂಕರಾಚಾರ್ಯ||
ಅನುಭವಿಯು
ನೀ ನಡೆದ ಹಾದಿಯೊಳಗಡಿಯಿಡುವ
ಮನವೆನಗೆ ಕೊಡಿರೆನುತ ಬೇಡುವೆನು ಗುರುವೆ।
ಅನವರತ
ನಿನ್ನ ನಾಮಸ್ಮರಣೆ ಬಿಡದಂತೆ
ಅನುನಯದಿ ನಡೆವಂತೆ ನೀನೆಮ್ಮ ಹರಸು, ಅನುನಯದಿ ನಡೆವಂತೆ ನೀನೆಮ್ಮ ಹರಸು
॥ ಶ್ರೀ ಶಂಕರಾಚಾರ್ಯ||
Also See:
ಕಾಣದ ಕಡಲಿಗೆ ಹಂಬಲಿಸಿದೆ ಮನ Lyrics| kanada kadalige song lyrics in Kannada| C Ashwath songs lyrics
No comments:
Post a Comment