ಹೇಗೆ ಅರ್ಚಿಸಲಿ ಹೇಗೆ ಮೆಚ್ಚಿಸಲಿ| POET ಆರ್. ಕೆ. ಪದ್ಮನಾಭ R.K PADMANABHA |SONG LYRICS IN KANNADA

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಹೇಗೆ ಅರ್ಚಿಸಲಿ ಹೇಗೆ ಮೆಚ್ಚಿಸಲಿ

ಹೇಗೆ ಪ್ರಾರ್ಥಿಸಲಿ ಗುರುವೇ ಸದ್ಗುರುವೇ॥

 

ಜ್ಞಾನ ಸಂಪತ್ತಿಲ್ಲ ಗಾನದಲಿ ಗುಣವಿಲ್ಲ

ಮಾತಿನಲಿ ಮಂದ್ರವಿಲ್ಲ ತತ್ವದಲಿ ತಾರವಿಲ್ಲ॥೧॥

 

ಸ್ವರ ಷಡ್ಜಕೆ ಎಂದೂ ನೆಮ್ಮದಿ ಕೊಡಲಿಲ್ಲ

ಸ್ವರ ಪಂಚಮದಂತೆ ಸ್ಠಿರವಿಲ್ಲ ಚಿಂತನೆಯು

ರಾಗಾಲಾಪದಂತೆ ದಿವ್ಯ ರೂಪವಿಲ್ಲ

ರೆಕ್ಕೆಯಿಲ್ಲದ ಪಕ್ಷಿ ಪದಮನಾಭ ದಾಸ ನಾ॥೨॥

..................................................................................


ಶ್ರೀ ಶಾರದಾ ದೇವಿ ಸ್ತುತಿ | STHOTRA ON LOR SHARADA DEVI | LYRICS IN KANNADA|

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಯಾ ಕುಂದೇಂದು ತುಷಾರಹಾರ ಧವಲಾ ಯಾ ಶುಭ್ರ ವಸ್ತ್ರಾನ್ವಿತಾ।

ಯಾ ವೀಣಾ ವರದಂಡ ಮಂಡಿತಕರಾ ಯಾ ಶ್ವೇತ ಪದ್ಮಾಸನಾ।

ಯಾ ಬ್ರಹ್ಮಾಚ್ಯುತ ಶಂಕರಪ್ರಭೃತಿಭಿ: ದೇವೈ: ಸದಾ ಪೂಜಿತಾ।

ಸಾ ಮಾಂ ಪಾತು ಸರಸ್ವತೀ ಭಗವತೀ ನಿ:ಶೇಷಜಾಡ್ಯಾಪಹಾ॥ ೧॥

 

ಓಂ ಶುಕ್ಲಾಂ ಬ್ರಹ್ಮ ವಿಚಾರ ಸಾರ ಪರಮಾಮಾದ್ಯಾಂ ಜಗದ್ವ್ಯಾಪಿನೀಂ।

ವೀಣಾ ಪುಸ್ತಕ ಧಾರಿಣೀಮಭಯದಾಂಜಾಡ್ಯಾಂಧಕಾರಾಪಹಾಂ।

ಹಸ್ತೇ ಸ್ಪಾಟಿಕ ಮಾಲಿಕಾಂವಿದಧತೀಂ ಪದ್ಮಾಸನೇ ಸಂಸ್ಠಿತಾಮ್।

ವಂದೇ ತಾಂ ಪರಮೇಶ್ವರೀಂ ಭಗವತೀಂ ಬುದ್ಢಿಪ್ರದಾಂ ಶಾರದಾಮ್॥೨॥

 

ಹ್ರೀಂ ಹ್ರೀಂ ಹ್ರೀಂ ಹೃದ್ಯಬೀಜೇ ಶಶಿರುಚಿವಿಮಲೇ ಕಲ್ಪವಿಸ್ಪಷ್ಟ ಶೋಭೇ।

ಭವ್ಯೇ ಭವ್ಯಾನುಕೂಲೇಕುಮತಿವನದಹೇ ವಿಶ್ವವಂದ್ಯಾಂಘ್ರಿಪದ್ಮೇ।

ದಿವ್ಯೇ ಪದ್ಮೋಪವಿಷ್ಟೇ ಪ್ರಣತಜನಮನೋಮೋದಸಂಪಾದಯತ್ರೀ।

ಪ್ರೋತ್ಫುಲ್ಲಜ್ಞಾನಕೂಟೇಹರಿಜನಿದಯಿತೇ ದೇವಿ ಸಂಸಾರಸಾರೇ॥೩॥

 

ಐಂ ಐಂ ಐಂ ಜಾಪ್ಯತುಷ್ಟೇಹಿಮರುಚಿ ಮಕುಟೇ ವಲ್ಲಕೀ ವ್ಯಗ್ರಹಸ್ತೇ।

ಮಾತರ್ಮಾತರ್ನಮಸ್ತೇ ದಹ ದಹ ಜಡತಾಂ ದೇಹಿ ಬುದ್ಧಿಂ ಪ್ರಶಸ್ತಾಮ್।

ವಿದ್ಯೇ ವೇದಾಂತಗೀತೇ ಶ್ರುತಿಪರಿಪಠಿತೇ ಮೋಕ್ಷದೇ ಮುಕ್ತಿಮಾರ್ಗೇ।

ಮಾರ್ಗಾತೀತ ಸ್ವರೂಪೇ ಭವ ಮಮ ವರದೇ ಶಾರದೇ ಶುಭ್ರವರ್ಣೇ॥೪॥

 

ಧೀಂ ಧೀಂ ಧೀಂ ಧಾರಣಾಖ್ಯೇ ಧೃತಿ ಮತಿ ನುತಿ ಭಿರ್ನಾಮಭಿ: ಕೀರ್ತನೀಯೇ।

ನಿತ್ಯೇ ನಿತ್ಯಾನುನೀತೇ ಮುನಿವರನಮಿತೇ ನೂತನೇ ವೈ ಪುರಾಣೇ।

ಪುಣ್ಯೇ ಪುಣ್ಯಪ್ರವಾಹೇ ಹರಿಹರನಮಿತೇ ಪೂರ್ಣತತ್ವೇ ಸುವರ್ಣೇ।

ಮಾತರ್ಮಾತ್ರರ್ಥ ತತ್ವೇ ಮತಿ ಮತಿ ಮತಿ ದೇ ಮಾಧವೇ ಪ್ರೀತಿಯುಕ್ತೇ॥೫॥

 

ಕ್ಲೀಂ ಕ್ಲೀಂ ಕ್ಲೀಂ ಸ್ವಸ್ವರೂಪೇ ದಹ ದಹ ದುರಿತಂ ಪುಸ್ತಕ ವ್ಯಗ್ರಹಸ್ತೇ।

ಸಂತುಷ್ಟಾಕಾರ ಚಿತ್ತೇ ಸ್ಮಿತಮುಖಿ ಶುಭದೇ ಜೃಂಭಣಿ ಸ್ತಂಭ ವಿದ್ಯೇ।

ಮುಗ್ಧೇ ಮೋದೇ ಪ್ರಮೋದೇ ಮಮ ಕುರು ಕುಮತಿ ಧ್ವಾಂತ ವಿಧ್ವಂಸ ಮೀಡ್ಯೇ।

ಗೀರ್ಗೌರ್ವಾಗ್ಭಾರತೀ ತ್ವಂ ಕವಿವರ ರಸನೇ ಸಿದ್ಧಿದೇ ಸಿದ್ಧವಿದ್ಯೇ॥೬॥

 

ಸೌಂ ಸೌಂ ಸೌಂ ಶಕ್ತಿಬೀಜೇ ಕಮಲಭವಮುಖಾಂಭೋಜಭಾನುಸ್ವರೂಪೇ।

ರೂಪೇ ರೂಪಪ್ರಕಾಶೇ ಸಕಲಗುಣಮಯೇ ನಿರ್ಗುಣೇ ನಿರ್ವಿಕಾರೇ।

ನ ಸ್ಥೂಲೇ ನೈವ ಸೂಕ್ಷ್ಮೇS ಪ್ಯವಿದಿತ ವಿಭವೇ ಜಾಪ್ಯ ವಿಜ್ಞಾನ ತತ್ವೇ।

ವಿಶ್ವೇ ವಿಶ್ವಾಂತರಾಲೇ ಸುರವರನಮಿತೇ ನಿಷ್ಕಲೇ ನಿತ್ಯ ಶುದ್ಧೇ॥೭॥

 

ಶ್ರೀಂ ಶ್ರೀಂ ಶ್ರೀಂ ಬೀಜರೂಪೇ ಮಮ ಖಲು ರಸನಾಂ ಮಾ ಕದಾಚಿತ್ ಯಜ ತ್ವಂ।

ಮಾ ಮೇ ಬುದ್ಧಿರ್ವಿರುದ್ಧಾ ಭವತು ಮಮ ಮನೋ ಪಾತು ಮಾಂ ದೇವಿ ಪಾಪಾತ್।

ಮಾ ಮೇ ದು:ಖಂ ಕದಾಚಿತ್ ಕ್ವಚಿದಪಿ ಸಮಯೇ ಪುಸ್ತಕೇನಾಕುಲತ್ವಂ।

ಶಾಸ್ತ್ರೇ ವಾದೇ ಕವಿತ್ವೇ ಪ್ರಸರತು ಮಮ ಧೀರ್ಮಾಸ್ತು ಕುಂಠಾ ಕದಾಪಿ॥೮॥

 

ಇತ್ಯೇತ್ಯೈ: ಶ್ಲೋಕಮುಖ್ಯೈ: ಪ್ರತಿದಿನಮುಷಸಿ ಸ್ತೌತಿ ಯೋ ಭಕ್ತಿ ನಮ್ರೋ।

ವಾಣ್ಯಾ ವಾಚಸ್ಪತೇರಪ್ಯತಿಶಯತಿವಿಭು: ವಾಕ್ಪಟುತ್ವಂ ಚ ಶೀಘ್ರಮ್।

ಸಸ್ಯಾದೀಷ್ಟಾರ್ಥಲಾಭೀ ಸುತಮಿವ ಸತತಂ ಶಾರದಾ ಪಾತು ದೇವೀ।

ಸೌಭಾಗ್ಯಂ ತಸ್ಯ ಲೋಕೇ ಪ್ರಸರತು ಕವಿತಾ ವಿಘ್ನಮಸ್ತಂ ಪ್ರಯಾತು॥೯॥

 

ನಿರ್ವಿಘ್ನಂ ತಸ್ಯ ವಿದ್ಯಾ ಪ್ರಭವತು ಸತತಂ ಪ್ರಸ್ತುತ ಗ್ರಂಥ ಬೋಧ:।

ಕೀರ್ತಿಸ್ತ್ರೈಲೋಕ್ಯ ಮಧ್ಯೇ ನಿವಸತು ವದನೇ ಶಾರದಾ ತಸ್ಯ ಸಾಕ್ಷಾತ್।

ದೀರ್ಘಾಯುರ್ಲೋಕ ಪೂಜ್ಯೋಗುಣನಿಧಿರನಿಶಂ ರಾಜಮಾನ್ಯೋವದಾನ್ಯೋ।

ವಾಗ್ದೇವ್ಯಾ: ಸಂಪ್ರಸಾದಾತ್ತ್ರಿಜಗತಿ ವಿಜಯೀ ಜಾಯತೇ ಸತ್ಸಭಾಸು॥೧೦॥

…………………………………………………………………………………………………………

 


ಸರಳ ಸುಭಾಷಿತ - "ನಾರಾಯಣ" ಶಬ್ದದ ಅರ್ಥ| MEANING OF THE WORD "NARAYANA" |SANSKRIT SUBHASHITA

 

CLICK HERE TO LEARN THIS SUBHASHITA


आपो नारा इति प्रॊक्ता आपो वै नरसूनव:।

ता यदस्यायनं पूर्वं तेन नारायण: स्मृत:॥

ಆಪೋ ನಾರಾ ಇತಿ ಪ್ರೋಕ್ತಾ ಆಪೋ ವೈ ನರ ಸೂನವ:।

ತಾ ಯದಸ್ಯಾಯನಂ ಪೂರ್ವಂ ತೇನ ನಾರಾಯಣ: ಸ್ಮೃತ:॥

 

ನೀರಿಗೆ 'ನಾರಾ' ಎಂದೂ ಕರೆಯುತ್ತಾರೆ. ಜೀವಿಗಳೆಲ್ಲ ಈ ನೀರಿನಿಂದಲೇ ಹುಟ್ಟುತ್ತವೆ. ಈ ಜಲವೇ ಪೂರ್ವ ಕಾಲದಲ್ಲಿ ಭಗವಂತನ ಆಶ್ರಯ ಸ್ಥಾನವಾಗಿದ್ದರಿಂದ ಭಗವಂತನಿಗೆ ನಾರಾಯಣ ಎಂದು ಕರೆಯುತ್ತಾರೆ.

Water is also called  'Nara'. All living things are born from this water. As this water was the refuge of the Lord in ancient times, the Lord is called Narayana.

........................................................................................

ಲೋಕಮಾತೆ ವಿಮಲ ಚರಿತೆ | POPULAR SONG ON GODESS SARASWATHI LYRICS| LOKA MAATHE VIMALA CHARITHE

 

ಹಾಡಲು ಕಲಿಯಿರಿ(CLICK HERE TO LEARN THIS SONG)


ಲೋಕಮಾತೆ ವಿಮಲ ಚರಿತೆ ದೇವಿ ಶಾರದಾಂಬೆಯೇ

ಪಾಕಶಾಸನಾದಿ ವಂದ್ಯೇಕಮಲ ಭವನ ಮಡದಿಯೇ||

 

ಕಮಲ ನೇತ್ರೆ ಇಂದು ವದನೆ ಕೋಮಲಾಂಗಿ ಸುಂದರಿ

ಭ್ರಮರವೇಣಿ ಹಂಸಗಮನೆ ಕೀರವಾಣಿ ಗುಣಮಣಿ||1||

 

ವಿದ್ಯೆಗಳಿಗೆ ಜನನಿಯಾದೆ ಮುದ್ದು ನವಿಲನೇರಿದೆ

ವಿದ್ಯೆಗಳನು ಕರುಣಿಸಮ್ಮ ದೀನನಾಗಿ ಬೇಡುವೆ ||2||

 

ಶೃಂಗ ಗಿರಿಯ ಪುರನಿವಾಸಿ ಪಾಹಿ ಶಾರದಾಂಬೆಯೇ

ಸೆರಗನೊಡ್ಡಿ ಬೇಡಿಕೊಳ್ಳುವೆ ಪಾದ ಪದ್ಮಕೆರಗುವೆ ||3||

............................................................................................................................................

ದೇವ ನಿನ್ನ ಬೇಡುವೆ ಕಾಯೋ ದೂರ ಮಾಡದೆ song lyrics in kannada | kannada savigana lyrics | kannada school prayer

 

ಹಾಡಲು ಕಲಿಯಿರಿ(CLICK HERE TO LEARN THIS SONG)

ದೇವ ನಿನ್ನ ಬೇಡುವೆ ಕಾಯೋ ದೂರ ಮಾಡದೆ

ಶಕ್ತಿ ನೀಡು ಬಾಳುವಂತೆ ಸತ್ಯ ಧರ್ಮ ಮೀರದೆ ||

 

ಸೂರ್ಯನಾಗಿ ಮೇಲೆ ಚರಿಸಿ ಕತ್ತಲನ್ನು ಸರಿಸುವೆ

ಮೋಡವಾಗಿ ನೀರು ಸುರಿಸಿ ಲೋಕಕನ್ನ ಉಣಿಸುವೆ |

ಪ್ರಾಣವಾಯುವಾಗಿ ಸುಳಿದು ಕಾಣದಂತೆ ಕಾಯುವೆ

ತಂದೆ ನಿನ್ನ ಕರುಣೆಯ ಹೇಗೆ ನಾನು ಮರೆಯುವೆ ||1||

 

ಹಸಿರಿನಲ್ಲೂ ಹೂವಿನಲ್ಲೂ ನಿನ್ನ ಹೆಜ್ಜೆ ಗುರುತಿದೆ

ಕೋಟಿ ಹಕ್ಕಿ ಕಂಠದಲ್ಲಿ ನಿನ್ನ ಸ್ತೋತ್ರ ಚಿಮ್ಮಿದೆ |

ಎಲೆ ಎಲೆಯೂ ನಿನ್ನ ಚಿತ್ರ ಕಲೆಯ ಘನತೆ ಸಾರಿದೆ

ಎಲ್ಲೆಲ್ಲೂ ನೀನೇ ದೇವ ನಿನ್ನದಲ್ಲದೇನಿದೆ ||2||

 

ಈ ಲೋಕ ನೀನು ಇರುವ ಸುಂದರ ದೇವಾಲಯ

ಒಳಗೆ ಕೂತು ಮಿಡುವೆಯಂತೆ ಇದರ ಎಲ್ಲ ನಾಡಿಯ |

ಇದರ ಸೇವೆ ನಿನ್ನ ಸೇವೆ ಎಂಬ ಋಷಿ ವಾಣಿಯ

ನಂಬಿದೆವು ಹರಸು ನಮ್ಮ ನಾವು ಕಲಿತ ಶಾಲೆಯ ||3||

............................................................................................................................................

ನಾಕು ತಂತಿ (ಡಾ॥ ದ. ರಾ ಬೇಂದ್ರೆ ) SONG LYRICS IN KANNADA | NAAKU THANTHI SONG

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಆವು ಈವಿನ  ನಾವು ನೀವಿಗೆ ಆನು ತಾನದ ತನನನಾS

 ನಾನು ನೀನಿನ ಈ ನಿನಾನಿಗೆ ಬೇನೆ ಏನೋ ಜಾಣಿ ನಾ |

  

ಚಾರು ತಂತ್ರಿಯ ಚರಣ ಚರಣದ ಘನಘನಿತ ಚತು--ರಸ್ವನಾ

ಹತವೊ ಹಿತವೋ ಆ ಅನಾಹತಾ ಮಿತಿಮಿತಿಗೆ ಇತಿ ನನನನಾ

ಬೆನ್ನಿನಾನಿಕೆ ಜನನ ಜಾನಿಕೆ ಮನನವೇ ಸಹಿ- ತಸ್ತನಾ.||

 

ಚಿತ್ತೀಮಳಿ, ತತ್ತೀ ಹಾಕತಿತ್ತು ಸ್ವಾತಿ ಮುತ್ತಿನೊಳಗ

ಸತ್ತಿSಯೊ ಮಗನ ಅಂತ ಕೂಗಿದರು

ಸಾವೀ ಮಗಳು, ಭಾವೀ ಮಗಳು ಕೂಡಿ…..|

ಈ ಜಗ, ಅಪ್ಪಾ, ಅಮ್ಮನ ಮಗ

ಅಮ್ಮನೊಳಗ ಅಪ್ಪನ ಮೊಗ

ಅಪ್ಪನ ಕತ್ತಿಗೆ ಅಮ್ಮನ ನೊಗ

ನಾ ಅವರ ಕಂದ ಶ್ರೀ ಗುರುದತ್ತ ಅಂದ.||

 

ನಾನು ನೀನು ಆನು ತಾನು ( 4 ಸಲ)

ನಾಕು  ನಾಕೆ ತಂತಿ,


ಸೊಲ್ಲಿಸಿದರು  ನಿಲ್ಲಿಸಿದರು ಓಂ ಓಂ ದಂತಿ

ಗಣನಾಯಕ ಮೈ ಮಾಯಕ ಸೈ ಸಾಯಕ ಮಾಡಿ

ಗುರಿಯ ತುಂಬಿ ಕುರಿಯ ಕಣ್ಣು

ಧಾತು ಮಾತು (3 ಸಲ)

ಕೂಡಿ. ………||

 ನಾನು ನೀನು ಆನು ತಾನು ( 4 ಸಲ)

ನಾಕು  ನಾಕೆ ತಂತಿ

 .....................................................................................................................