Aug 30, 2019

PARASHARARCHITA VARA PRADAYAKA LYRICS:ಪರಾಶರಾರ್ಚಿತ ವರ ಪ್ರದಾಯಕ DEVOTIONAL SONG ON lORD GANESHA




ಪರಾಶರಾರ್ಚಿತ ವರ ಪ್ರದಾಯಕ


ಪರಾಶರಾರ್ಚಿತ ವರ ಪ್ರದಾಯಕ ಸುರುನುತ ವಂದಿತ ವಿನಾಯಕ
ಮುರಾರಿ ಸನ್ನುತ ವರ ಪ್ರದಾಯಕ ಕರುಣಾಮಯ ವರ ಗಣಾಧಿಪ ||

 ಸಿದ್ಧಸುರಾಸುರ ವಂದಿತಮುದಿತಮ್
ಸದ್ಧರ್ಮ ರಕ್ಷಕಮ್ ಅದ್ಭುತ ವಿಜಯಮ್
ಸಿದ್ಧಿದಾಯಕಮ್ ಅದ್ವಿತೀಯಮ್ ಗಣಪಮ್
ಸಿದ್ದಿ ವಿನಾಯಕಂ ಸದಾ ನಮಾಮ್ಯಹಂ||1||

 ಸರ್ವ ಸಿದ್ಧಿದಾಯಕಮ್ ವಿಶುದ್ಧ ಬುದ್ಧಿ ತಾರಕಮ್
ಪಾರ್ವತಿ ಸುತಮ್ ಪ್ರಿಯಂ ಪ್ರಾರ್ಥಯಾಮಿ ಸಂತತಂ
ಸಾರ್ವಭೌಮ ಪಾಹಿಮಾಮ್ ಸದಾ ಸುಖಮ್ ಕುರುಮ್ ಪ್ರಭೊ
ನಿರ್ವಿಕಾರ ಸಂಪದಂ ದೇಹಿಮೇ ಗಣೇಶ್ವರ||2||


ಹಾಡಲು ಕಲಿಯಿರಿ(LEARN HOW TO SING THIS SONG)

Aug 23, 2019

ದಾನವ ಕದಳಿಯ ಕಾನನ ಮುರಿಯುತ :daanava kadaliya kaanana song lyrics|KANNADA DEVOTIONAL SONG ON LORD KRISHNA



ದಾನವ ಕದಳಿಯ ಕಾನನ ಮುರಿಯುತ



ದಾನವ ಕದಳಿಯ ಕಾನನ ಮುರಿಯುತ, ದಾನವ ಕದಳಿಯ ಕಾನನ ಮುರಿಯುತ
ಆನೆ ಬಂತಾನೆ ಬಂತಾನೆ ಬಂತಮ್ಮಮ್ಮಮ್ಮ||

ಗುಂಗುರುಗುರುಳ ನೀಲಾಂಗ ಚೆಲ್ವಾನೆ
ಕಂಗಳಿಗಹೊಳೆವ ವ್ಯಾಗ್ರಾಂಗುಳಿಯಾನೆ
ಬಂಗಾರದನುಗಂಟೆ ಶೃಂಗಾರ ದಾನೇ
ಮಂಗಳ ತಿಲಕದ ರಂಗಾನೆಂಬಾನೆ||1||

ಕೆಳದಿ ಗೋಪಿಯರೊಳು ಗೆಳೆತನದಾನೆ
ಸುಲಭದಿನ್ದೊಲಿಯುವ ಎಳೆಮರಿಯಾನೆ
ಘಲಿರು ಘಲಿರುರವದಿ ನಲಿದಾಡೋ ಆನೆ
ಮರೆತವರೆದೆಮ್ಯಾಲೆ ತುಲಿದಾಡೋ ಆನೆ||2||

ನಳಿನಜ ಭವರಿಗೆ ಸಿಲುಕದ ಆನೆ
ಒಲವಿಂದ ಭಕುತರ ಸಲಹುವ ಆನೆ
ಹಲವು ಕವಿಗಳಿಗೆ ನಿಲುಕದ ಆನೆ
ಬಲ ಪ್ರಸನ್ನವೆಂಕಟ ನಿಲಯಾನೆಂಬಾನೆ||3||



ಹಾಡಲು ಕಲಿಯಿರಿ(LEARN HOW TO SING THIS SONG)

Also See:


Aug 22, 2019

ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ |ANTAKANA DOOTARIGE SONG LYRICS





ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ


ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ
ಚಿಂತೆಯನ್ನು ಬಿಟ್ಟು ಶ್ರೀ ಹರಿಯ ನೆನೆ ಮನವೇ||

ದಿವ ರಾತ್ರಿ ಎನ್ನದೆ ವಿಷಯ ಲಂಪಟನಾಗಿ
ಸವಿಯೂಟಗಳನುಂಡು ಭ್ರಮಿಸಬೇಡ
 ಅವನ ಕೊಂದಿವನ ಕೊಂದರ್ಥವನ್ನು ಗಳಿಸುವರೇ
 ಜವನ ದೂತರು ಬರುವ ಹೊತ್ತ ನೀನರಿಯೆ||1||

ಪುತ್ರ ಹುಟ್ಟಿದ ದಿವಸ ಹಾಲಿನೂಟದ ಹಬ್ಬ
ಮತ್ತೊಬ್ಬ ಮಗನ ಉಪನಯನ ನಾಳೆ
ಆರ್ತಿ ಆಗಿದೆ ಬದುಕು ಸಾಯಲಾರೆನು ಎನಲು
ಮೃತ್ಯು ಹೆಡೆ ತಲೆಯಲ್ಲಿ ನಗುತಿರ್ಪುದರಿಯೇ||2||

ಅಟ್ಟಡುಗೆಯುಣಲಿಲ್ಲ ಇಷ್ಟ ದರುಶನವಿಲ್ಲ
 ಕೊಟ್ಟ ಸಾಲವ ಕೇಳುವ ಹೊತ್ತ ನೀನರಿಯೆ
 ಕಟ್ಟಲೆ ತುಂಬಿದ ಮೇಲೆ ಕ್ಷಣ ಮಾತ್ರ ಇರಲಿಲ್ಲ
 ಅಷ್ಟರೊಳು ಪುರಂದರ ವಿಠಲನೆನು ಮನವೇ||3||



ಹಾಡಲು ಕಲಿಯಿರಿ(LEARN HOW TO SING THIS SONG)



Aug 19, 2019

ನಮ್ಮ ನೆಲ ಜಲ ನಮ್ಮದೆಂದಿಗೂ:NAMMA NELA JALA NAMMDENDIGU : PATRIOTIC SONG LYRICS





ನಮ್ಮ ನೆಲ ಜಲ ನಮ್ಮದೆಂದಿಗೂ


ನಮ್ಮ ನೆಲ ಜಲ ನಮ್ಮದೆಂದಿಗೂ
ನಮ್ಮ ಹಿಮಗಿರಿ ನಮ್ಮದೆ ಆಹಾ ನಮ್ಮದೆ

ಅಷ್ಟದಿಗ್ಗಜ ವಾಗು ದೇಶಕೆ ಸಿದ್ಧನಿರು ನೀ ತ್ಯಾಗಕೆ
ತುಂಬು ನವ ಚೇತನವ ರಾಷ್ಟ್ರಕ್ಕೆ
ಚಿಮ್ಮಲದು ಆಕಾಶಕೆ ಆಹಾ ಚಿಮ್ಮಲದು ಆಕಾಶಕೆ||

ಭರತಮಾತೆಯು ಹೊತ್ತ ದೇಹವು ಭರತಮಾತೆಗೆ ದುಡಿಯಲಿ
ಭರತಮಾತೆಯ ದಿವ್ಯ ಪುತ್ರರು 
ಎಂಬ ಕೀರ್ತಿಯ ಗಳಿಸಲಿ ಆಹಾ ಎಂಬ ಕೀರ್ತಿಯ ಗಳಿಸಲಿ||

...............................................



Aug 18, 2019

ಹಿಂದೂಸ್ಥಾನವು ಎಂದೂ ಮರೆಯದ: HINDUSTANAVU ENDU MAREYADA SONG LYRICS: PATRIOTIC SONG




ಹಿಂದೂಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು


ಹಿಂದೂಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು
ಕನ್ನಡ ಹಿರಿಮೆಯ ಮಗನಾಗು ಕನ್ನಡ ನುಡಿಯಾ ಸಿರಿಯಾಗು||

ಭಾರತ ದೇಶದ ಬಡವರ ಕಂಬನಿ ಒರೆಸುವ ನಾಯಕ ನೀನಾಗು
ಭಾರತೀಯರ ವಿಶ್ವ ಪ್ರೆಮವ ಮೆರೆಸುವ ಜ್ಞಾನಿ ನೀನಾಗು
ಭಾರತೀಯರ ಭವ್ಯ ಭವಿಷ್ಯವ ಬೆಳಗುವ ವಿಜ್ಞಾನಿ ನೀನಾಗು||1||

ಭೂ ಮಂಡಲದ ಹಾಹಾಕಾರವ ನೀಗುವ ಶಕ್ತಿಯು ನೀನಾಗು
ಮಾರಕ ಶಕ್ತಿಯ ದೂರಗೈಯುವ ಧೀರ ಶಿರೋಮಣಿ ನೀನಾಗು
ಬ್ರಹ್ಮಾಂಡವನೇ ಬೆಳಗುವ ಶಕ್ತಿಯ ಕಾಣುವ ಯೋಗಿಯು ನೀನಾಗು||2||