Sep 27, 2019

ಹಿಮಗಿರಿಯ ಶೃಂಗಾ (HIMAGIRIYA SHRINGA) KANNADA PATRIOTIC SONG LYRICS




ಹಿಮಗಿರಿಯ ಶೃಂಗಾ ದೇವನದಿ ಗಂಗಾ

ಹಿಮಗಿರಿಯ ಶೃಂಗಾ  ದೇವನದಿ ಗಂಗಾ  
ಮನದಲಿ ಮೂಡಿಪ ಭಾವ ವಿನೂತನ
ಅನುಪಮ ಉತ್ತುಂಗಾ….ಅನುಪಮ ಉತ್ತುಂಗಾ||
 
ದಿವ್ಯ ಸನಾತನ ಸಂಸ್ಕೃತಿಗೆ ವೇದ ಪುರಾಣವೆ ಸಾಕ್ಷಿಗಳು
ಹಿಂದುವಿನುನ್ನತಿ ಅವನತಿಗೆ ಸಾಕ್ಷಿ ಹಿಮಾದ್ರಿಯ ಶಿಖರಗಳು
ಅಂಜುವ ಎದೆಯಲಿ ಧೈರ್ಯದ ಪಂಜನು ಉರಿಸುವ ಮಂಜಿನ ಮಹಲುಗಳು ||1||
 
ಸುರಲೋಕವ ಮೀರಿಸುವ ನಾಡಿಗೆ ಧುಮುಕಿದ ಭಾಗೀರಥೀ
ಭಾರತ ಮಾತೆಯ ಸಂಗದಲಿ  ಧನ್ಯತೆಯಾನ್ತಿಹ ಭಾಗ್ಯವತಿ
ಹಿಂದೂ ದೇಶದ ಕಣ ಕಣ ಜನ ಮನ ಪಾವನಗೊಳಿಸಿಹ ಪುಣ್ಯವತಿ ||2||
 
ಸೋಲೇ ಗೆಲುವಿನ ಸೋಪಾನ ದುಡುಕದೆ ನಡೆ ನೀ ಜೋಪಾನ
ನೋವಲಿ ನೊಂದಿಹ ಬಂಧುವಿಗೆ ನೀಡುತ ಧೈರ್ಯ ಸಮಾಧಾನ
ಮಾತೆಯ ಗೌರವ ರಕ್ಷಣೆಗಾಗಿ ಮುಡಿಪಾಗಿರಲೆಮ್ಮಯ ಪ್ರಾಣ ||3||


......................................................................................


Also See:

Sep 22, 2019

ಶಾಲಾ ಪ್ರಾರ್ಥನೆ(school prayer): ಓಂ ತತ್ಸತ್ ಶ್ರೀ ನಾರಾಯಣ ನೀ(OM TATSAT SHRI NARAYANA NEE) LYRICS




ಶಾಲಾ ಪ್ರಾರ್ಥನೆ : ಓಂ ತತ್ಸತ್ ಶ್ರೀ ನಾರಾಯಣ ನೀ

ಓಂ ತತ್ಸತ್ ಶ್ರೀ ನಾರಾಯಣ ನೀ ಪುರುಷೋತ್ತಮ ಗುರು ನೀ
ಸಿದ್ಧ ಬುದ್ಧ ನೀ ಸ್ಕಂದ ವಿನಾಯಕ ಸವಿತಾ ಪಾವಕ ನೀ |
ಬ್ರಹ್ಮ ಮಜ್ದ ನೀ ಯಹ್ವ ಶಕ್ತಿ ನೀ ಏಸುಪಿತಾ ಪ್ರಭು ನೀ |
ರುದ್ರ ವಿಷ್ಣು ನೀ ರಾಮ ಕೃಷ್ಣನೀ ರಹೀಮ ತಾವೋನೀ |
ವಾಸುದೇವ ಗೋ ವಿಶ್ವರೂಪ ನೀ ಚಿದಾನಂದ ಹರಿ ನೀ |
ಅದ್ವಿತೀಯ ನೀ ಅಕಾಲ ನಿರ್ಭಯ ಆತ್ಮಲಿಂಗ ಶಿವ ನೀ |


ಹಾಡಲು ಕಲಿಯಿರಿ(LEARN HOW TO SING THIS SONG)



Sep 16, 2019

Easy shlokas for kids -1 (ಸುಲಭ ಶ್ಲೋಕಗಳು, ಅರ್ಥ ಸಹಿತ-1) - with meaning


ಸುಲಭ ಶ್ಲೋಕಗಳು-1




ಬೆಳಗ್ಗೆ ಎದ್ದ ತಕ್ಷಣ:

ಕರಾಗ್ರೇ ವಸತೇ ಲಕ್ಷ್ಮಿ ಕರಮಧ್ಯೇ ಸರಸ್ವತಿ
ಕರಮೂಲೇ ಸ್ಥಿತೇ ಗೌರಿ ಪ್ರಭಾತೇ ಕರ ದರ್ಶನಮ್||

(ನಮ್ಮ ಅಂಗೈಯ ಅಗ್ರಭಾಗದಲ್ಲಿ ಲಕ್ಷ್ಮಿ, ಮಧ್ಯ ಭಾಗದಲ್ಲಿ ಸರಸ್ವತಿ ಮತ್ತು ಮೂಲದಲ್ಲಿಗೌರಿಯು ನೆಲೆಸಿರುತ್ತಾರೆ. ಆದ್ದರಿಂದ ಬೆಳಿಗ್ಗೆ ಎದ್ದ ತಕ್ಷಣ ನಮ್ಮ ಕೈಗಳನ್ನು ನೋಡಿಕೊಳ್ಳಬೇಕು)



ಹಾಸಿಗೆ ಬಿಟ್ಟು ಏಳುವಾಗ:

ಸಮುದ್ರ ವಸನೇ ದೇವಿ ಪರ್ವತ ಸ್ತನ ಮಂಡಲೇ
ವಿಷ್ಣುಪತ್ನಿ ನಮಸ್ತುಭ್ಯಂ ಪಾದ ಸ್ಪರ್ಶಮ್ ಕ್ಷಮಸ್ವಮೇ||

(ಸಮುದ್ರವನ್ನೇ ವಸ್ತ್ರವನ್ನಾಗಿ ಉಳ್ಳವಳು, ಪರ್ವತ ಶ್ರೇಣಿಗಳನ್ನೇ ತನ್ನ ಸ್ತನಗಳಾಗಿ ಉಳ್ಳವಳು, ವಿಷ್ಣುಪತ್ನಿ ಯೂ ಆಗಿರುವಂತಹ ಹೇ ಭೂ ಮಾತೆಯೇ ನಿನಗೆ ನಮಸ್ಕಾರ. ದಯವಿಟ್ಟು ನನ್ನ ಪಾದ ಸ್ಪರ್ಶ ವನ್ನು ಕ್ಷಮಿಸಿಬಿಡು)



ಸ್ನಾನ ಮಾಡುವಾಗ:

ಗಂಗೇ ಯಮುನೇ ಚೈವ ಗೋದಾವರಿ ಸರಸ್ವತಿ
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಮ್ ಕುರು||

(( ಪವಿತ್ರರಾದ ಗಂಗೆ, ಯಮುನೆ, ಗೋದಾವರಿ, ಸರಸ್ವತಿ, ನರ್ಮದೇ, ಸಿಂಧು ಮತ್ತುಕಾವೇರಿ ನದಿಗಳೇ  ದಯಮಾಡಿ ನೀವು ಈ ನೀರಿನಲ್ಲಿ ಬಂದು ನೆಲೆಸಿ)



ದೇವರಿಗೆ ಪ್ರಾರ್ಥನೆ:

ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಮ್ ಮಮ
ತಸ್ಮಾತ್ ಕಾರುಣ್ಯ ಭಾವೇನ ರಕ್ಷಮಾಮ್ ಪುರುಷೋತ್ತಮ||

(ಓ ಪುರುಷೋತ್ತಮ, ನನಗೆ ಬೇರೆ ಆಶ್ರಯವಿಲ್ಲ, ನೀನು ನನ್ನ ಏಕೈಕ ಆಶ್ರಯ. ಆದುದರಿಂದ ನೀನು ನನ್ನನ್ನು ಕರುಣಾ ಭಾವದಿಂದ ರಕ್ಷಿಸು)



ಆಹಾರ ಸೇವಿಸುವಾಗ:

ಅನ್ನಪೂರ್ಣೇ ಸದಾಪೂರ್ಣೇ ಶಂಕರ ಪ್ರಾಣವಲ್ಲಭೇ
ಜ್ಞಾನ ವೈರಾಗ್ಯ ಸಿಧ್ಯರ್ಥಂ ಭಿಕ್ಷಾಮ್ ದೇಹಿಚ ಪಾರ್ವತಿ||

(ಅನ್ನಪೂರ್ಣೇಯೂ, ಸದಾಪೂರ್ಣೆಯೂ,ಶಿವನ ಪ್ರಾಣ ವಲ್ಲಭೆಯೂ ಆಗಿರುವಂತಹ ಓ ಪಾರ್ವತೀ ದೇವಿ, ನನಗೆ ಜ್ಞಾನ ಮತ್ತು ವೈರಾಗ್ಯ ಸಿದ್ಧಿಗಾಗಿ ಭಿಕ್ಷೆಯನ್ನು ನೀಡಿ)


ಸಂಜೆ ದೀಪ ಹೊತ್ತಿಸುವಾಗ:

ದೀಪ ಜ್ಯೋತಿ ಪರಬ್ರಹ್ಮ ದೀಪ ಜ್ಯೋತಿ ಜನಾರ್ದನ:
ದೀಪೋ ಹರತಿ ಪಾಪಾನಿ ಸಂಧ್ಯಾ ದೀಪಮ್ ನಮೋಸ್ತುತೆ||

(ದೀಪದ ಬೆಳಕೇ ಪರಬ್ರಹ್ಮ,ದೀಪದ ಬೆಳಕೇ ಸ್ವಯಂ ಜನಾರ್ದನ. ದೀಪದ ಬೆಳಕು ನಮ್ಮ ಎಲ್ಲಾ ಪಾಪಗಳನ್ನು ಪರಿಹರಿಸುತ್ತದೆ, ಅಂತಹ ದೀಪಕ್ಕೆ ನಮಸ್ಕಾರಗಳು)


ರಾತ್ರಿ ಮಲಗುವ ಮುನ್ನ:

ರಾಮಂ ಸ್ಕಂದಂ ಹನೂಮಂತಂ ವೈನತೇಯಂ ವೃಕೋದರಮ್
ಶಯನೇ ಯ: ಸ್ಮರೇನ್ನಿತ್ಯಂ ದುಸ್ವಪ್ನಮ್ ತಸ್ಯ ನಶ್ಯತಿ||
(ಪ್ರತಿದಿನ ಮಲಗುವ ಮುನ್ನ ಶ್ರೀ ರಾಮ, ಸ್ಕಂದ, ಹನುಮಂತ,ಗರುಡ ಹಾಗು ಭೀಮನನ್ನು  ಯಾರು ನೆನೆಯುತ್ತಾರೋ  ಅವರಿಗೆ ಕೆಟ್ಟ ಕನಸು ಗಳು ಬೀಳುವುದಿಲ್ಲ)


ಹಾಡಲು ಕಲಿಯಿರಿ(LEARN HOW TO SING THIS SONG)






Sep 10, 2019

GAAYAKANE HAADAYYA|ಗಾಯಕನೆ ಹಾಡಯ್ಯ| KANNADA BHAVAGEETE LYRICS



ಗಾಯಕನೆ ಹಾಡಯ್ಯ ಭಾವಗೀತೆಯನೊಂದು


ಗಾಯಕನೆ ಹಾಡಯ್ಯ ಭಾವಗೀತೆಯನೊಂದು
ನಯವಿರಲಿ ನಾದದಲಿ ಭಾವ ತುಂಬಿರಲಿ||
 
ಮನದ ಮಲಿನತೆಯೆಲ್ಲ ನಾಶವಾಗುವ ತೆರದಿ
ನಿನ್ನಿದಿರು ಕುಳಿತವರು ಮನತುಮ್ಬಿ ಸುಖಿಪಂತೆ||1||
 
ಯಾರಿಗಾಗಿಯೊ ಎಂದು ಹಾಡದಿರು ಎಂದೆಂದೂ
ಅರಿತು ನೀ ನಿನ್ನೊಳಗೆ ಆಲಿಪರ ತಣಿಸುತಿರು||2||
 
ಕನ್ನಡದೊಳೇನಿಹುದೊ ಎಂದು  ಹಳಿವವರೆಲ್ಲ
ಕನ್ನಡದೊಳೆನ್ನತಿಹುದೊ ಎಂದು  ಬೆರಗಪ್ಪಂತೆ||3||



ಹಾಡಲು ಕಲಿಯಿರಿ(LEARN HOW TO SING THIS SONG)

 


Sep 5, 2019

GURU STOTRAM: ಗುರು ಸ್ತೋತ್ರಮ್ |SHLOKAS WITH MEANING



ಗುರು ಸ್ತೋತ್ರಮ್


ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ|
 ಗುರು: ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ
(ಗುರುವೇ ಬ್ರಹ್ಮ, ಗುರುವೇ ವಿಷ್ಣು,ಗುರುವೇ ದೇವನಾದ ಮಹೇಶ್ವರ
ಗುರುವೇ ಸಾಕ್ಷಾತ್ ಪರಬ್ರಹ್ಮ ಅಂತಹ ಶ್ರೀ ಗುರುವಿಗೆ ನಮಸ್ಕಾರ)


 ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮ: ||
(ಅಜ್ಞಾನವೆಂಬ ಕತ್ತಲೆಯಿಂದ ಅಂಧನಾದವನ ಕಣ್ಣನ್ನು ಜ್ಞಾನವೆಂಬ
 ಅಂಜನ ಶಲಾಕೆಯಿಂದ ಬಿಡಿಸಿದ ಶ್ರೀ ಗುರುವಿಗೆ ನಮಸ್ಕಾರ)


ಅಖಂಡ ಮಂಡಲಾಕಾರಂ ವ್ಯಾಪ್ತಮ್ ಯೇನ ಚರಾಚರಮ್
ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀ ಗುರವೇ ನಮ: ||
(ಅಖಂಡ ಮಂಡಲಾಕಾರವಾದ ಚರಾಚರ ಜಗತ್ತನ್ನು ವ್ಯಾಪಿಸಿರುವ ತತ್ವವು
 ಯಾರಿಂದ ತೋರಿಸಲ್ಪಟ್ಟಿತೋ ಅಂತಹ ಶ್ರೀ ಗುರುವಿಗೆ ನಮಸ್ಕಾರ)

.........................................................................................


Also See:

ಭಗವದ್ಗೀತೆ ಶ್ಲೋಕಗಳು - 1 (WITH MEANING IN KANNADA)

Sep 2, 2019

ಕುದುರೇನ ತಂದೀವ್ನಿ ಜೀನಾವ ಬಿಗಿಸಿವ್ನಿ :KUDURENA THANDIVNI JEEVANA BIGISIVNI SONG LYRICS




ಕುದುರೇನ ತಂದೀವ್ನಿ ಜೀನಾವ ಬಿಗಿಸಿವ್ನಿ



ಕುದುರೇನ ತಂದೀವ್ನಿ ಜೀನಾವ ಬಿಗಿಸಿವ್ನಿ ಬರಬೇಕು ತಂಗಿ ಮದುವೇಗೆ
ಬರಬೇಕು ತಂಗಿ ಮದುವೇಗೆ||

ಅಂಗ್ಲ ಗುಡಿಸೋರಿಲ್ಲ ಗಂಗ್ಲಾ ತೊಳೆಯೋರಿಲ್ಲ ಹೆಂಗೆ ಬರಲಣ್ಣ ಮದುವೆಗೆ
ಅಂಗ್ಲಕ್ಕೆ ಆಳಿಡುವೆ ಗಂಗ್ಲಾಕ್ಕೆ ತೊಟ್ಟಿಡುವೆ ಬರಬೇಕು ತಂಗಿ ಮದುವೆಗೆ
ಬರಬೇಕು ತಂಗಿ ಮದುವೆಗೆ||1||

ಮಳೆಯಾರ ಬಂದಿತ್ತು ಹೊಳೆಯಾರ ತುಂಬಿತ್ತು ಹೆಂಗೆ ಬರಲಣ್ಣ ಮದುವೆಗೆ
ಚಿನ್ನದ ಹರಿಗೋಲ್ಗೆ ರನ್ನದ ಹುಟ್ಟುಹಾಕಿ ಜೋಪಾನವಾಗಿ ಕರೆದೊಯ್ಯುವೆ
ಜೋಪಾನವಾಗಿ ಕರೆದೊಯ್ಯುವೆ||2||

ರನ್ನದ ಮಗುವಣ್ಣ ರಗಳೆಯ ಮಾಡಿತ್ತು ಹೆಂಗೆ ಬರಲಣ್ಣ ಮದುವೆಗೆ
ರನ್ನದ ಮಗುವಿಗೆ ಚಿನ್ನದ ಬಳೆ ಇಡುವೆ ಬರಬೇಕು ತಂಗಿ ಮದುವೇಗೆ
ಬರಬೇಕು ತಂಗಿ ಮದುವೇಗೆ||3||

ಅಮ್ಮನಿಲ್ಲದ ಮನೆಗೆ ನಾ ಹ್ಯಾಂಗ ಬರಲಣ್ಣ ಅಮ್ಮನಿಲ್ಲದ ತವರಿಗೆ
ಅಮ್ಮನ ಸ್ಥಾನದಲ್ಲಿ ನಾನಿಲ್ಲವೇನು ಬರಬೇಕು ತಂಗಿ ಮದುವೇಗೆ
ಬರಬೇಕು ತಂಗಿ ಮದುವೇಗೆ||4||

.....................................................................................................................

Also See: