Nov 27, 2019

ದೀಪವು ನಿನ್ನದೆ ಗಾಳಿಯು ನಿನ್ನದೆ| DEEPAVU NINNADE GAALIYU NINNADE LYRICS IN KANNADA




ದೀಪವು ನಿನ್ನದೆ ಗಾಳಿಯು

ರಚನೆ : ಕೆ. ಎಸ್. ನರಸಿಂಹಸ್ವಾಮಿ


ದೀಪವು ನಿನ್ನದೆ ಗಾಳಿಯು ನಿನ್ನದೆ ಆರದಿರಲಿ ಬೆಳಕು
ಕಡಲು ನಿನ್ನದೆ ಹಡಗು ನಿನ್ನದೆ ಮುಳುಗದಿರಲಿ ಬದುಕು||

ಬೆಟ್ಟವು ನಿನ್ನದೆ ಬಯಲು ನಿನ್ನದೆ ಹಬ್ಬಿನದಲಿ ಪ್ರೀತಿ
ನೆಳಲೋ ಬಿಸಿಲೋ ಎಲ್ಲವು ನಿನ್ನದೆ, ಇರಲಿ ಏಕ ರೀತಿ||1||

ಆಗೊಂದು ಸಿಡಿಲು ಈಗೊಂದು ಮುಗಿಲು ನಿನಗೆ ಅಲಂಕಾರ
ಅಲ್ಲೊಂದು ಹಕ್ಕಿ ಇಲ್ಲೊಂದು ಮುಗುಳು ನಿನಗೆ ನಮಸ್ಕಾರ||2||

ಅಲ್ಲಿ ರಣದುಂದುಭಿ… ಇಲ್ಲೊಂದು ವೀಣೆ …ನಿನ್ನ ಪ್ರತಿಧ್ವನಿ..
  ಮಹಾ ಕಾವ್ಯ …ಈ ಭಾವಗೀತೆ… ನಿನ್ನ ಪದಧ್ವನಿ ||3||

.............................................................................................




Nov 25, 2019

ಊಟಕ್ಕೆ ಬಂದೆವು ನಾವು| OOTAKKE BANDEVU NAAVU LYRICS| PURANDARA DASARU




ಊಟಕ್ಕೆ ಬಂದೆವು ನಾವು

ರಚನೆ : ಪುರಂದರದಾಸರು

ಊಟಕ್ಕೆ ಬಂದೆವು ನಾವು ನಿಮ್ಮ
 ಆಟಪಾಟವ ಬಿಟ್ಟು ಅಡುಗೆ ಮಾಡಮ್ಮ||

ಕತ್ತಲಿಟ್ಟಾವಮ್ಮ ಕಣ್ಣುಬಾಯಿ
ಬತ್ತಿ ಬರುತಲಿದೆ ಕೈ ಕಾಲು ಝುಮ್ಮ
ಹೊತ್ತು ಹೋಗಿಸಬೇಡವಮ್ಮ
ಒಂದು ತುತ್ತಾದರು ಇತ್ತು ಸಲಹು ನಮ್ಮಮ್ಮ||1||

ಒಡಲೊಳಗೆ ಉಸಿರಿಲ್ಲ ಒಂದು
ಕ್ಷಣವಾದರೆ ಜೀವ ನಿಲ್ಲುವುದಿಲ್ಲ
ಮಡಿದರೆ ದೋಷ ತಟ್ಟುವುದು
ಒಂದು ಹಿಡಿಯಕ್ಕಿಯಿಂದಲೆ ಕೀರ್ತಿ ಬಾಹೋದು||2||

ಹೊನ್ನ ರಾಶಿಯ ತಂದು ಸುರಿಯೆ ಕೋಟಿ
ಕನ್ನಿಕೆಯರ ತಂದು ಧಾರೆಯನೆರೆಯೆ
ಅನ್ನ ದಾನಕ್ಕಿನ್ನು ಸರಿಯೆ ಪ್ರ..
ಸನ್ನ ಪುರಂದರ ವಿಠ್ಠಲ ದೊರೆಯೆ||3||
...........................................................................................................

ಹಾಡಲು ಕಲಿಯಿರಿ(LEARN HOW TO SING THIS SONG)

Nov 23, 2019

ಅಮ್ಮ ನಿನ್ನ ಎದೆಯಾಳದಲ್ಲಿ|AMMA NINNA EDEYAALADALLI LYRICS IN KANNADA



ಅಮ್ಮ ನಿನ್ನ ಎದೆಯಾಳದಲ್ಲಿ

ಸಾಹಿತ್ಯ: ಬಿ. ಆರ್. ಲಕ್ಷ್ಮಣ್ ರಾವ್

ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು|
ಕಡಿಯಲೊಲ್ಲೆ ನೀ ಕರುಳ ಬಳ್ಳಿ ಒಲವೂಡುತಿರುವ ತಾಯೆ,
ಬಿಡದ ಭುವಿಯ ಮಾಯೆ||

ನಿನ್ನ ರಕ್ಷೆ ಗೂಡಲ್ಲಿ ಬೆಚ್ಚಗೆ  ಅಡಗಲಿ ಎಷ್ಟು ದಿನ ,
ದೂಡು ಹೊರಗೇ ನನ್ನ|
ಓಟ ಕಲಿವೆ ಒಳನೋಟ ಕಲಿವೆ ನಾ ಕಲಿವೆ ಊರ್ಧ್ವ ಗಮನ
ಓ ಅಗಾಧ ಗಗನ||1||

ಮೇಲೆ ಹಾರಿ ನಿನ್ನಾ ಸೆಳೆತ ಮೀರಿ ನಿರ್ಭಾರ ಸ್ಥಿತಿಗೆ ತಲುಪಿ,
ಬ್ರಹ್ಮಾಂಡವನ್ನೇ ಬೆದಕಿ|
ಇಂಧನ ತೀರಲು ಬಂದೇ ಬರುವೆನು ಮತ್ತೆ ನಿನ್ನ ತೊಡೆಗೆ
ಮೂರ್ತ ಪ್ರೇಮದೆಡೆಗೆ||2||




AMMA NINNA EDEYAALADALLI GAALAKKE SIKKA MEENU
MIDUKAADUTIRUVE NAANU
KADIYALOLLE EE KARULA BALLI
OLAVOODUTIRUVA TAAYE, BIDADA BHUVIYA MAAYE ||

NINNA RAKSHE GOODALLI BECHAGE ADAGALI ESTU DINA
DOODU HORAGE NANNA
OOTA KALIVE OLA NOTA KALIVE
NAA KALIVE OORDHVA GAMAN, O AGHAADHA GAGAN ||1||

MELE HAARI NINNA SELETA MEERI,NIRBHAARA STITHIGE TALUPI,
BRAHMAANDAVANNE BEDAKI
INDHANA THEERALU BANDE BARUVENU, MATHE NINNA TODEGE
MOORTHA PREMADE DEGE ||2||

...................................................................................................................................

Also See:



Nov 21, 2019

ಕಂಬದ ಮ್ಯಾಲಿನ ಗೊಂಬೆಯೇ | KAMBADA MYALINA GOMBEYE LYRICS




ಕಂಬದ ಮ್ಯಾಲಿನ ಗೊಂಬೆಯೇ

ಕಂಬದ ಮ್ಯಾಲಿನ ಗೊಂಬೆಯೇ ನಂಬಲೇನ ನಿನ್ನ ನಗಿಯನ್ನಾ
ಭಿತ್ತಿಯ ಮ್ಯಾಲಿನ ಚಿತ್ತಾರವೇ ಚಿತ್ತಗೊಟ್ಟಹೇಳೆ ಉತ್ತಾರವ |

ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನು
 ಮಬ್ಬು ಹರಿಯುವದೇನ ಹಬ್ಬವಾಗುವುದೇನ||

ನೀರೊಲೆಯ ನಿಗಿ ಕೆಂಡ ಸತ್ಯವೇ
ಈ ಅಭ್ಯಂಜನವಿನ್ನು ನಿತ್ಯವೇ|
ಒಳ್ಳೆ ಘಮಗುಡುತಿಯಲ್ಲೆ ಸೀಗೆಯೆ
ನಿನ್ನ ವಾಸನೀ ಹರಡಿರಲೀ ಹೀಗೆಯೇ|

ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನು
 ಮಬ್ಬು ಹರಿಯುವದೇನ ಹಬ್ಬವಾಗುವುದೇನ||1||

ಒಪ್ಪಿಸುವೇ ಹೂ - ಹಣ್ಣು ಭಗವಂತ
ನೆಪ್ಪೀಲೇ ಹರಸು ನಗೀ ಇರಲಂತ|
ಕಪ್ಪುರವ ಬೆಳಗುವೆ ದೇವನೇ
ತಪ್ಪದೇ ಬರಲೆನ್ನ ಗುಣವಂತ|

ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನು
 ಮಬ್ಬು ಹರಿಯುವದೇನ ಹಬ್ಬವಾಗುವುದೇನ||2||




Nov 19, 2019

ಶ್ರೀ ವಾಣಿ ಕಲ್ಯಾಣ ಗುಣಮಣಿ |SHRI VANI KALYANA GUNAMANI SONG LYRICS|KANNADA| SCHOOL PRAYER LYRICS




ಶ್ರೀ ವಾಣಿ ಕಲ್ಯಾಣ ಗುಣಮಣಿ

ಶ್ರೀ ವಾಣಿ ಕಲ್ಯಾಣ ಗುಣಮಣಿ ಲೋಕ ಜನನಿಗೆ ನಮಿಸುವೆವು|
ಕೋಕಿಲ ವಾಣಿ ಫಣಿ ಸಮ ವೇಣಿ ವೀಣಾ ಪುಸ್ತಕ ಪಾಣಿಯೆ||

ವಿದ್ಯಾಧೀಶ್ವರಿ ವಿಧಿಪ್ರಾಣೇಶ್ವರಿ ವಿದ್ಯಭಯಾಹರಿ ಶಂಕರಿ
ವಿದ್ಯಾ ಬುದ್ಧಿಗಳನು ನೀ ಕರುಣಿಸು ಮುದ್ದು ಕುಮಾರರ ರಕ್ಷಿಸು||1||

ಮಯೂರ ವಾಹನ ಮರಾಳ ಗಮನ ಸುರ ನರ ಕಿನ್ನರ ಮುಖ ಚರಣೇ
ತೋಯಜ ನಯನೆ ಸುರನರ ವದನೆ ಭಾರತಿ ಶಂಕರಿ ಸ್ತುತಿ ಸದನೆ||2||

.........................................................................................................................


Nov 17, 2019

ಹಕ್ಕಿಯ ಹಾಡಿಗೆ ತಲೆದೂಗುವ ಹೂ (HAKKIYA HAADIGE TALEDUGUVA LYRICS)




ಹಕ್ಕಿಯ ಹಾಡಿಗೆ ತಲೆದೂಗುವ ಹೂ


ಸಾಹಿತ್ಯ: ಕೆ.ಎಸ್.ನರಸಿಂಹಸ್ವಾಮಿ


ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ
ಹಸುವಿನ ಕೊರಳಿನ ಗೆಜ್ಜೆಯ ದನಿಯು ನಾನಾಗುವ ಆಸೆ||

ಹಬ್ಬಿದ ಕಾಮನ ಬಿಲ್ಲಿನ ಮೇಲಿನ ಮುಗಿಲಾಗುವ ಆಸೆ  (2ಸಲ)
ಚಿನ್ನದ ಬಣ್ಣದ ಜಿಂಕೆಯ ಕಣ್ಣಿನ ಮಿಂಚಾಗುವ ಆಸೆ||1||

ತೋಟದ ಕಂಪಿನ ಉಸಿರಲಿ ತೇಲುವ ಜೇನಾಗುವ ಆಸೆ (2ಸಲ)
ಕಡಲಿನ ನೀಲಿಯ ನೀರಲಿ ಬಳುಕುವ ಮೀನಾಗುವ ಆಸೆ ||2||

ಸಿಡಿಲನು ಕಾರುವ ಬಿರುಮಳೆಗಂಜದೆ  ಮುನ್ನಡೆಯುವ ಆಸೆ (2ಸಲ)
ನಾಳೆಯ ಬದುಕಿನ ಇರುಳಿನ ತಿರುವಿಗೆ ದೀಪವನಿಡುವಾಸೆ ||3||

...........................................................................................................

HAKKIYA HAADIGE TALEDOOGUVA HOO NAANAAGUVA  AASE,
HASUVINA KORALINA GEJJEYA DANIYU NAANAAGUVA  AASE||

HABBIDA KAAMANA BILLINA MELINA MUGILAAGUVA  AASE
CHINNADA BANNADA JINKEYA KANNINA MINCHAAGUVA AASE||1||

THOTADA KAMPINA USIRALI TELUVA JENAAGUVA AASE
KADALINA NEELIYA NEERALI BALUKUVA MEENAAGUVA AASE||2||

SIDILANU KAARUVA BIRUMALEGANJADE MUNNADEYUVA AASE
NAALEYA BADUKINA IRULINA THIRUVIGE DEEPAVA NIDUVAASE ||3||
.................................................................................................................................



Nov 15, 2019

ಬೆನಕ ಬೆನಕ ಓ ಬೆನಕ | BENAKA BENAKA O BENAKA SONG LYRICS|LORD GANESHA SONG




ಬೆನಕ ಬೆನಕ ಬೆನಕ


ಬೆನಕ ಬೆನಕ ಬೆನಕ  ಸಲಹೋ ನಮ್ಮ ಕೊನೆ ತನಕ|

ದೀನ ದಯಾಳು ನೀನಾಗಿ ಭಕ್ತರ ಬಾಳಿನ ಬೆಳಕಾಗಿ|
ಬೆನಕ ಬೆನಕ  … ಬೆನಕ ಬೆನಕ  ||

ವಿಘ್ನ ವಿನಾಶಕ ವಿಘ್ನಕಾರಕ ವಿಘ್ನವ ಪರಿಹರಿಸೊ
ವಿಶ್ವೇಶ್ವರ ಸುತ ವಿಜಯ ವಿನಾಯಕ ಸುಮತಿಯ ದಯಕರಿಸೋ
ಹರಸುತ ನೀನು ಹರಸುತ ಎಮ್ಮನು ಕರುಣದಿ ಕಾಪಾಡು
ಸ್ಮರಿಸುತ ನಿನ್ನಲಿ ತನುವನು ಎಮ್ಮನು ಮೋಕ್ಷವ ನೀ ನೀಡು
ಬೆನಕ ಬೆನಕ  … ಬೆನಕ ಬೆನಕ  ||1||

ಭಕ್ತಿಯ ಪುಷ್ಪವ ಅರ್ಪಿಸಿ ನಿನ್ನಲಿ ತನುಮನ ತೋರಿಸುವೆ
ಮುಕ್ತಿಯ ಮಾರ್ಗವ ತೋರದೆ ಎಮ್ಮನು ಏತಕೆ ನೋಯಿಸುವೆ
ಭಕ್ತಿಯು ಮುಕ್ತಿಯು ಏನನು ಅರಿಯದ ಅಸ್ಥಿರ ದೇಹವಿದು
ಚಂಚಲ ಮನಸಿದು ಎಂದಿಗೂ ಮರೆಯದ ನಿನ್ನಯ ಧ್ಯಾನ ಕೊಡು
ಬೆನಕ ಬೆನಕ  … ಬೆನಕ ಬೆನಕ  ||2||


.................................................................................................





Nov 13, 2019

TARAKKA BINDIGE LYRICS | ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ ಸಾಹಿತ್ಯ|




ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ


ರಚನೆ: ಪುರಂದರ ದಾಸರು

ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ ತಾರೆ ಬಿಂದಿಗೆಯಾ
ಬಿಂದಿಗೆ ಒಡೆದರೆ ಒಂದೇ ಕಾಸು ತಾರೆ ಬಿಂದಿಗೆಯಾ||

ರಾಮ ನಾಮ ವೆಂಬ ರಸವುಳ್ಳ ನೀರಿಗೆ ತಾರೆ ಬಿಂದಿಗೆಯಾ
ಕಾಮಿನಿಯರ ಕೂಡೆ ಏಕಾಂತವಾಡೇನು ತಾರೆ ಬಿಂದಿಗೆಯಾ||1||

ಗೋವಿಂದ ಎಂಬುವ ಗುಣವುಳ್ಳ ನೀರಿಗೆ ತಾರೆ ಬಿಂದಿಗೆಯಾ
ಆವಾವ ಪರಿಯಲ್ಲಿ ಅಮೃತದ ನೀರಿಗೆ ತಾರೆ ಬಿಂದಿಗೆಯಾ||2||

ಬಿಂದು ಮಾಧವನ ಘಟ್ಟಕ್ಕೆ ಹೋಗುವೆ ತಾರೆ ಬಿಂದಿಗೆಯಾ
ಪುರಂದರ ವಿಠಲಗೆ ಅಭಿಷೇಕ ಮಾಡುವೆ ತಾರೆ ಬಿಂದಿಗೆಯಾ||3||
................................................................................................................

Also See: