ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ
ರಚನೆ: ಪುರಂದರ ದಾಸರು
ತಾರಕ್ಕ
ಬಿಂದಿಗೆ ನಾ ನೀರಿಗೆ ಹೋಗುವೆ
ತಾರೆ ಬಿಂದಿಗೆಯಾ
ಬಿಂದಿಗೆ
ಒಡೆದರೆ ಒಂದೇ ಕಾಸು ತಾರೆ ಬಿಂದಿಗೆಯಾ||
ರಾಮ
ನಾಮ ವೆಂಬ ರಸವುಳ್ಳ ನೀರಿಗೆ ತಾರೆ ಬಿಂದಿಗೆಯಾ
ಕಾಮಿನಿಯರ
ಕೂಡೆ ಏಕಾಂತವಾಡೇನು ತಾರೆ ಬಿಂದಿಗೆಯಾ||1||
ಗೋವಿಂದ
ಎಂಬುವ ಗುಣವುಳ್ಳ ನೀರಿಗೆ ತಾರೆ ಬಿಂದಿಗೆಯಾ
ಆವಾವ
ಪರಿಯಲ್ಲಿ ಅಮೃತದ ನೀರಿಗೆ ತಾರೆ
ಬಿಂದಿಗೆಯಾ||2||
ಬಿಂದು
ಮಾಧವನ ಘಟ್ಟಕ್ಕೆ ಹೋಗುವೆ ತಾರೆ ಬಿಂದಿಗೆಯಾ
ಪುರಂದರ
ವಿಠಲಗೆ ಅಭಿಷೇಕ ಮಾಡುವೆ ತಾರೆ ಬಿಂದಿಗೆಯಾ||3||
................................................................................................................
Also See:
No comments:
Post a Comment