ಬೆನಕ ಬೆನಕ ಓ ಬೆನಕ | BENAKA BENAKA O BENAKA SONG LYRICS|LORD GANESHA SONG



ರಚನೆ: ಚಂದ್ರ ಬೈಂದೂರು

ಬೆನಕ ಬೆನಕ ಓ ಬೆನಕ


ಬೆನಕ ಬೆನಕ ಓ ಬೆನಕ  ಸಲಹೋ ನಮ್ಮ ಕೊನೆ ತನಕ|

ದೀನ ದಯಾಳು ನೀನಾಗಿ ಭಕ್ತರ ಬಾಳಿನ ಬೆಳಕಾಗಿ|
ಬೆನಕ ಓ ಬೆನಕ  … ಬೆನಕ ಓ ಬೆನಕ  ||

ವಿಘ್ನ ವಿನಾಶಕ ವಿಘ್ನಕಾರಕ ವಿಘ್ನವ ಪರಿಹರಿಸೊ
ವಿಶ್ವೇಶ್ವರ ಸುತ ವಿಜಯ ವಿನಾಯಕ ಸುಮತಿಯ ದಯಕರಿಸೋ

ಹರ ಸುತ ನೀನು ಹರಸುತ ನಮ್ಮನು ಕರುಣದಿ ಕಾಪಾಡು

ಸ್ಮರಿಸುತ ನಿನ್ನಲಿ ಬೆರೆಯಲು ನಮ್ಮನು ಮೋಕ್ಷವ ನೀ ನೀಡು

ಬೆನಕ ಓ ಬೆನಕ  … ಬೆನಕ ಓ ಬೆನಕ  ||1||

ಭಕ್ತಿಯ ಪುಷ್ಪವ ಅರ್ಪಿಸಿ ನಿನ್ನಲಿ ತನುಮನ ತೋರಿಸುವೆ
ಮುಕ್ತಿಯ ಮಾರ್ಗವ ತೋರದೆ ಎಮ್ಮನು ಏತಕೆ ನೋಯಿಸುವೆ
ಭಕ್ತಿಯು ಮುಕ್ತಿಯು ಏನನು ಅರಿಯದ ಅಸ್ಥಿರ ದೇಹವಿದು
ಚಂಚಲ ಮನಸಿದು ಎಂದಿಗೂ ಮರೆಯದ ನಿನ್ನಯ ಧ್ಯಾನ ಕೊಡು
ಬೆನಕ ಓ ಬೆನಕ  … ಬೆನಕ ಓ ಬೆನಕ  ||2||


.................................................................................................





No comments:

Post a Comment

ಬಾ ಸವಿತಾ.... ಬಾ ಸವಿತಾ... ರಚನೆ : ಮಾಸ್ತಿ ವೆಂಕಟೇಶ ಅಯ್ಯಂಗಾರ್ |Lyrics in Kannada Baa Savitha song

ಹಾಡಲು ಕಲಿಯಿರಿ(CLICK HERE TO LEARN THIS SONG)   ಬಾ ಸವಿತಾ .... ಬಾ ಸವಿತಾ ... ಒಳಗಿನ ಕಣ್ಣನು ಮುಚ್ಚಿಸಿ ಒಮ್ಮೆ , ತಿಳಿವಿಗೆ ಬಣ್ಣವ ಹಚ್ಚಿಸ...