ಹಕ್ಕಿಯ ಹಾಡಿಗೆ ತಲೆದೂಗುವ ಹೂ
ಸಾಹಿತ್ಯ: ಕೆ.ಎಸ್.ನರಸಿಂಹಸ್ವಾಮಿ
ಹಕ್ಕಿಯ
ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ
ಹಸುವಿನ
ಕೊರಳಿನ ಗೆಜ್ಜೆಯ ದನಿಯು ನಾನಾಗುವ ಆಸೆ||
ಹಬ್ಬಿದ
ಕಾಮನ ಬಿಲ್ಲಿನ ಮೇಲಿನ ಮುಗಿಲಾಗುವ ಆಸೆ (2ಸಲ)
ಚಿನ್ನದ
ಬಣ್ಣದ ಜಿಂಕೆಯ ಕಣ್ಣಿನ ಮಿಂಚಾಗುವ ಆಸೆ||1||
ತೋಟದ ಕಂಪಿನ
ಉಸಿರಲಿ ತೇಲುವ ಜೇನಾಗುವ ಆಸೆ (2ಸಲ)
ಕಡಲಿನ
ನೀಲಿಯ ನೀರಲಿ ಬಳುಕುವ ಮೀನಾಗುವ ಆಸೆ ||2||
ಸಿಡಿಲನು
ಕಾರುವ ಬಿರುಮಳೆಗಂಜದೆ ಮುನ್ನಡೆಯುವ ಆಸೆ (2ಸಲ)
ನಾಳೆಯ
ಬದುಕಿನ ಇರುಳಿನ ತಿರುವಿಗೆ ದೀಪವನಿಡುವಾಸೆ ||3||
...........................................................................................................
HAKKIYA HAADIGE TALEDOOGUVA HOO NAANAAGUVA AASE,
HASUVINA KORALINA GEJJEYA DANIYU NAANAAGUVA AASE||
HABBIDA KAAMANA BILLINA MELINA MUGILAAGUVA AASE
CHINNADA BANNADA JINKEYA KANNINA MINCHAAGUVA AASE||1||
THOTADA KAMPINA USIRALI TELUVA JENAAGUVA AASE
KADALINA NEELIYA NEERALI BALUKUVA MEENAAGUVA AASE||2||
SIDILANU KAARUVA BIRUMALEGANJADE MUNNADEYUVA AASE
NAALEYA BADUKINA IRULINA THIRUVIGE DEEPAVA NIDUVAASE ||3||
.................................................................................................................................
No comments:
Post a Comment