Nov 11, 2019

ಶ್ರೀ ಕೃಷ್ಣ ಸ್ತೋತ್ರ |SHRI KRISHNA SHLOKAS WITH MEANING IN KANNADA




ಶ್ರೀ ಕೃಷ್ಣ ಸ್ತೋತ್ರ

ವಸುದೇವ ಸುತಂ ದೇವಂ ಕಂಸ ಚಾಣೂರ ಮರ್ದನಮ್
ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ||
(ವಸುದೇವ ದೇವಕಿಯರ ಮಗನಾದ, ಕಂಸ ಚಾಣೂರ ಮೊದಲಾದ ರಾಕ್ಷಸರನ್ನು ವಧಿಸಿದಂತಹ, ತಾಯಿಯಾದ ದೇವಕಿಗೆ ಯಾವಾಗಲು ಆನಂದವನ್ನು ಕೊಡುವಂತಹ, ಜಗದ್ಗುರುವಾದ ಶ್ರೀ ಕೃಷ್ಣನಿಗೆ ವಂದಿಸುತ್ತೇನೆ)


ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಮ್
ಯತ್ಕೃಪಾ ತಮಹಂ ವಂದೇ ಪರಮಾನಂದ ಮಾಧವಂ||
(ಮೂಕನನ್ನುವಾಚಾಳಿಯನ್ನಾಗಿಸಿ, ಕುಂಟನಿಗೆ ಪರ್ವತವನ್ನುಏರುವಂಥ ಶಕ್ತಿಯನ್ನು ದಯಪಾಲಿಸಬಲ್ಲ,ಸರ್ವೋಚ್ಚ ಆನಂದದ ಮೂಲವಾದ ಮಾಧವನಿಗೆ ನಾನು ವಂದಿಸುತ್ತೇನೆ)


ಕರಾರವಿಂದೇನ ಪದಾರವಿಂದಂ
ಮುಖಾರವಿಂದೇ ವಿನಿವೇಶಯಂತಮ್
ವಟಸ್ಯ ಪತ್ರಸ್ಯ ಪುಟೇಶಯಾನಮ್
ಬಾಲO ಮುಕುಂದO ಮನಸಾ ಸ್ಮರಾಮಿ||
(ಯಾರು ತನ್ನ ಕಮಲದಂತ ಕೈಗಳಿಂದ, ಕಮಲದಂತ ಕಾಲನ್ನು ಹಿಡಿದುಕೊಂಡು, ತನ್ನ ಕಮಲದ ಆಕಾರದ ಮುಖದ ಹತ್ತಿರವಿಟ್ಟುಕೊಂಡು, ಆಲದ ಎಲೆಯ ಮೇಲೆ ಮಲಗಿರುತ್ತಾನೋ ಅಂತಹ ಬಾಲ ಮುಕುಂದನಿಗೆ ಮನಸಾರೆ ವಂದಿಸುತ್ತೇನೆ)

..............................................................................................................................................

No comments:

Post a Comment