ಹಾಡಲು ಕಲಿಯಿರಿ(CLICK HERE TO LEARN THIS SONG)
ಮಾತೆ
ಪೂಜಕ ನಾನು ಎನ್ನಯ ಶಿರವನಿಡುವೆನು
ಅಡಿಯಲಿ
ನಿನ್ನ
ಕೀರ್ತಿಯು ಜಗದಿ ಮೆರೆಯಲಿ ಒಂದೇ
ಆಸೆಯು ಮನದಲಿ||
ಎಡರು
ತೊಡರುಗಳೆಲ್ಲ ತುಳಿಯುತ ಮುಂದೆ ನುಗ್ಗುವೆ ಭರದಲಿ
ನಿನ್ನ
ನಾಮ ನಿನಾದವಾಗಲಿ ಶ್ರಮಿಪೆ ನಾ ಪ್ರತಿ ಕ್ಷಣದಲಿ|
ನಿನ್ನ
ಗೌರವಕೆದುರು ಬರುವ ಬಲವ ಮುರಿವೆನು
ಛಲದಲಿ
ಜಗದ
ಜನನೀ ಭಾರತ ಇದ ಕೇಳಿ
ನಲಿಯುವೆ ಮನದಲಿ||1||
ನಗುತ
ನಲಿಯುವ ನಿನ್ನ ವದನವ ನೋಡಿ ನಲಿಯುವುದೆನ್ನೆದೆ
ನಿನ್ನ
ದು:ಖಿತ ವದನವೀಕ್ಷಿಸೆ
ಸಿಡಿವುದೆನ್ನಯ ಹೃದಯವು
ನಿನ್ನ
ಮುಖದಲಿ ಗೆಲುವು ತರಲು ನೀರುಗೈಯುವೆ ರಕ್ತವ
ಎನ್ನ
ಕಣಕಣ ತೇದು ಬಸಿಯುವೆ ಪೂರ್ಣ
ಜೀವನ ಶಕ್ತಿಯ||2||
ನಿನ್ನ
ತೇಜವ ಜಗವು ನೋಡಲಿ ಉರಿವ
ದೀಪದ ತೆರದಲಿ
ಎನ್ನ
ಶಕ್ತಿಯ ಘೃತವು ಸತತವು ಎರೆಯುತಿರುವೆನು ಭರದಲಿ
ಮಾತೃ
ಮಂದಿರ ಬೆಳಗುತಿರಲಿ ನಾನೇ ನಂದಾದೀವಿಗೆ
ಬತ್ತಿ ತೆರದೀ
ದೇಹ ಉರಿಯಲಿ ಸಾರ್ಥಕತೆ ಈ ಬಾಳಿಗೆ||3||
ರುದ್ರನಾಗಿ ವಿರೋಧಿ
ವಿಷವನು ಭರದಿ ನಾನದ ನುಂಗುವೆ
ಜಗವ ಮೆಚ್ಚಿಸಿ
ಅದರ ಹೃದಯವ ನಿನ್ನೆಡೆಗೆ ನಾ ಸೆಳೆಯುವೆ
ಸೃಜಿಪೆ ಜಗದಲಿ
ನಿನ್ನ ಪೂಜಿಪ ಕೋಟಿ ಕೋಟಿ ಭಕ್ತರ
ಕೀರ್ತಿ ಶಿಖರದಿ
ಮಾತೆ ಮಂಡಿಸು ಅರ್ಪಿಸುವೆ ನಾ ಸರ್ವವ||4||
......................................................................................................................
Also See:
ತಾಯಿ ಶಾರದೆ ಲೋಕ ಪೂಜಿತೆ(TAYI SHARADE LOKA PUJITE) SONG ON LORD SARASWATI- SCHOOL PRAYER LYRICS
No comments:
Post a Comment