Jan 30, 2023

ಸುಭಾಷಿತಗಳ ಮಹತ್ವ - SHLOKAS ON IMPORTANCE OF SUBHASHITAS WITH MEANING IN KANNADA |

 

CLICK HERE TO LEARN TO CHANT THESE SHLOKAS

पृथिव्यां त्रीणि रत्नानि जलमन्नं सुभाषितम्।

मूढै: पाषाणखन्डेषु रत्न संज्ञा विधीयते॥

 

ಪೃಥಿವ್ಯಾಂ ತ್ರೀಣಿ ರತ್ನಾನಿ ಜಲಮನ್ನಂ ಸುಭಾಷಿತಂ

ಮೂಢೈ: ಪಾಷಾಣ ಖಂಡೇಷು ರತ್ನ ಸಂಜ್ಞಾ ವಿಧೀಯತೆ||

 

ಈ ಪ್ರಪಂಚದಲ್ಲಿ ಇರುವ ನಿಜವಾದ ರತ್ನ ಗಳೆಂದರೆ ಜಲ ಅನ್ನ ಹಾಗೂ ಸುಭಾಷಿತಗಳು .ಆದರೆ ಮೂರ್ಖರು ಬಂಡೆಯ ಕಲ್ಲುಗಳ ಚೂರುಗಳನ್ನು ಎಂದು ರತ್ನವೆಂದು ಭ್ರಮಿಸುತ್ತಾರೆ.

 ........................................................................................................................

 

द्राक्षा म्लानमुखी जाता शर्करा चाष्मतां गता |

सुभाषित रसस्याग्रे सुधा भीता दिवं गता ||

 

ದ್ರಾಕ್ಷಾ ಮ್ಲಾನಮುಖೀ ಜಾತಾ ,ಶರ್ಕರಾ ಚಾಷ್ಮತಾ೦ ಗತಾ।

ಸುಭಾಷಿತ ರಸಸ್ಯಾಗ್ರೇ, ಸುಧಾ ಭೀತಾ ದಿವ೦ ಗತಾ॥

 

ಸುಭಾಷಿತದ ರಸವನ್ನು ಕಂಡು ದ್ರಾಕ್ಷಿಹಣ್ಣಿನ ಮುಖ ಬಾಡಿಹೋಯಿತು ,ಸಕ್ಕರೆ(ಶರ್ಕರಾ) ಕಲ್ಲಿನಂತೆ ಗಟ್ಟಿಯಾಯಿತು ಹಾಗೂ ಅಮೃತವೂ(ಸುಧಾ) ಭಯಗೊಂಡು  ಸ್ವರ್ಗಕ್ಕೆ(ದಿವ೦) ಹೋಯಿತು.

 .....................................................................................................

नायं प्रयाति विकृतिं विरसो ​: स्यात्

क्षीयते बहु जनैर्नितरां निपीत:|

जाड्यं निहन्ति रुचिमेति करोति तृप्तिम्

नूनं सुभाषितरसॊन्यरसातिशायी ||

 

ನಾಯ೦ ಪ್ರಯಾತಿ ವಿಕೃತಿ೦ ವಿರಸೋ : ಸ್ಯಾತ್

ಕ್ಷೀಯತೇ ಬಹು ಜನೈರ್ನಿತರಾ೦ ನಿಪೀತ:

ಜಾಡ್ಯ೦ ನಿಹಂತಿ ರುಚಿಮೇತಿ ಕರೋತಿ ತೃಪ್ತಿ೦

ನೂನ೦ ಸುಭಾಷಿತರಸೋನ್ಯರಸಾತಿಶಾಯೀ॥

 

ಸುಭಾಷಿತವೆನ್ನುವ ರಸವು ಇತರ ರಸಗಳ೦ತೆ ಕೆಟ್ಟು ಹೋಗುವುದಿಲ್ಲ ,ಸತ್ವವನ್ನು ಕಳೆದುಕೊಳ್ಳುವುದಿಲ್ಲ  ಹಾಗೂ ಬೇಸರವನ್ನು ಮೂಡಿಸುವುದಿಲ್ಲ. ಎಷ್ಟೇ ಜನರು  ಹೆಚ್ಚು ಹೆಚ್ಚು ಸೇವಿಸಿದಾಗಲೂ ಕ್ಷಯಿಸುವುದಿಲ್ಲ. ಇದು ಆಲಸ್ಯವನ್ನು ಹೋಗಲಾಡಿಸುತ್ತದೆ,ರುಚಿಕರವಷ್ಟೇ ಅಲ್ಲದೇ, ತೃಪ್ತಿಯನ್ನೂ ಕೊಡುತ್ತದೆ. ಸುಭಾಷಿತವೆನ್ನುವ ರಸವು ಎಲ್ಲಾ ರಸಗಳನ್ನೂ ಮೀರಿಸುತ್ತದೆ.

 ..........................................................................................................

संसार विषवृक्षस्य द्वे फले अमृतॊपमे |

सुभाषित रस्सास्वादः संगति: सुजनै: सह ||

 

ಸಂಸಾರ ವಿಷ ವೃಕ್ಷಸ್ಯ ದ್ವೇ ಫಲೇ ಅಮೃತೋಪಮೇ।

ಸುಭಾಷಿತ ರಸಾಸ್ವಾದ: ಸಂಗತಿ: ಸುಜನೈ: ಸಹ॥

 

ಸಂಸಾರವೆನ್ನುವ ವಿಶ್ವ ವೃಕ್ಷದಲ್ಲಿ ಅಮೃತಕ್ಕೆ ಸಮಾನವಾದ ಎರಡು ಹಣ್ಣುಗಳಿವೆ ಅವುಗಳೆಂದರೆ ಸುಭಾಷಿತಗಳ ರಸವನ್ನು ಆಸ್ವಾದಿಸುವುದು ಹಾಗೂ ಸಜ್ಜನರ ಸಹವಾಸ.

.............................................................................................................................

Jan 29, 2023

ತ್ವಮೇವ ಮಾತಾ ಚ ಪಿತಾ |twameva maatha cha shloka with meaning in Kannada|

 


ತ್ವಮೇವ ಮಾತಾ ಪಿತಾ ತ್ವಮೇವ

ತ್ವಮೇವ ಬಂಧುಶ್ಚ ಸಖಾ ತ್ವಮೇವ|

ತ್ವಮೇವ ವಿದ್ಯಾ ದ್ರವಿಣಂ ತ್ವಮೇವ

 ತ್ವಮೇವ ಸರ್ವಂ ಮಮ ದೇವ ದೇವ||


Twameva maathaa cha pithaa twameva

Twameva bandhushcha sakhaa twameva|

Twameva vidyaa dravinam twameva

Twameva sarvam mama deva deva||

ತ್ವಮೇವ = ನೀನೇ , ಮಾತಾ = ತಾಯಿ, ಪಿತಾ= ತಂದೆ , ಸಖಾ = ಗೆಳೆಯ, ವಿದ್ಯಾ= ಜ್ಞಾನ, ದ್ರವಿಣಂ = ಸಂಪತ್ತು, ಸರ್ವ೦ = ಎಲ್ಲಾ, ಮಮ = ನನ್ನ

ಎಲೈ ಪುರುಷೋತ್ತಮನೇ, ನೀನೆ ನನ್ನ ತಾಯಿ, ತಂದೆ, ಬಂಧು, ಗೆಳೆಯ, ನನ್ನಲ್ಲಿರುವ ಅಲ್ಪ ಜ್ಞಾನ, ಸಂಪತ್ತು, ನಿನ್ನಿಂದಲೆ, ನೀನೇ ನನ್ನ ಸರ್ವಸ್ವ.




Jan 18, 2023

ಶುಭಂ ಕರೋತಿ ಕಲ್ಯಾಣಂ | shubham karoti kalyanam| ಶ್ಲೋಕ ,ಅರ್ಥ |shloka with meaning in Kannada

 


ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನ ಸಂಪದ: |

ಶತ್ರು ಬುದ್ಧಿ ವಿನಾಶಾಯ ದೀಪ ಜ್ಯೋತಿ ನಮೋಸ್ತುತೆ||

 

Shubham karoti kalyaanam aarogyam dhana sampadaha|

Shatru buddi vinaashaaya deepa jyoti namostute||

 

ಶುಭವನ್ನು, ಮಂಗಳವನ್ನು ಉಂಟುಮಾಡುವ,ಆರೋಗ್ಯ ಹಾಗೂ ಧನ ಸಂಪತ್ತನ್ನು ದಯಪಾಲಿಸುವ, ನಮ್ಮೊಳಗೆ ಬರುವ ಕೆಟ್ಟ ವಿಚಾರಗಳನ್ನು ,ಶಕ್ತಿಗಳನ್ನು ನಾಶ ಪಡಿಸುವಂತಹ ದೀಪ ಜ್ಯೋತಿಗೆ ನಮಸ್ಕರಿಸುತ್ತೇನೆ.

...........................................................................................................

Also See:

ಸರಳ ಸುಭಾಷಿತ - ಶ್ರೂಯತಾಂ ಧರ್ಮ ಸರ್ವಸ್ವಂ (ಧರ್ಮ ಪಾಲನೆ) LYRICS |SUBHASHITA : SHRUYATAM DHARMA SARVASWAM

ಪೂಜ್ಯಾಯ ರಾಘವೇಂದ್ರಾಯ| poojyaya raghavendraya | ಶ್ಲೋಕ ,ಅರ್ಥ | shloka with meaning in Kannada

 

ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ।

ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ॥

Poojyaaya raaghavendraaya

Satya dharma rataaya cha|

Bhajataam kalpavrakshaaya

Namataam kaamadhenave||

 

ಪೂಜ್ಯರಾದ, ಸತ್ಯ ಧರ್ಮಗಳಲ್ಲಿ ನಿರತರಾಗಿರುವ, ಭಕ್ತಿಯಿಂದ ಪೂಜಿಸುವವರಿಗೆ ಕೇಳಿದ್ದನ್ನು ಕೊಡುವ ಕಲ್ಪವೃಕ್ಷ, ಕಾಮಧೇನುವಿನಂತಿರುವ ರಾಘವೇಂದ್ರ ಸ್ವಾಮಿಗಳಿಗೆ ನಮಸ್ಕರಿಸುತ್ತೇನೆ.

...................................................................................................................................

Also See:

ಗಣೇಶ ಶ್ಲೋಕಗಳು ಅರ್ಥ ಸಹಿತ lyrics with meaning| ganesha shloka with meaning

Jan 11, 2023

ಜಯ ವಿವೇಕಾನಂದ ಗುರುವರ | JAYA VIVEKANANDA GURUVARA SONG LYRICS |

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಜಯ ವಿವೇಕಾನಂದ ಗುರುವರ ಭುವನಮಂಗಲಕಾರಿ ||

 ಚಿರಸಮಾಧಿಯ ಗಿರಿಶಿಖರದಿಂ ನರರ ಸೇವೆಗೆ ಇಳಿದ ನರವರ ||

 

 ಸುಪ್ತದೈವರೇ ಏಳಿರೇಳಿ ಲುಪ್ತಪದವಿಯ ಮರಳಿ ತಾಳಿ ||

ಸಪ್ತ ಭುವಿಗಳ ಆಳಿರೆನುತ ದೀಪ್ತವಾಣಿಯ ಜಗದಿ ಮೊಳಗಿಹೆ || 1||

 

ವಿಶ್ವವ್ಯಾಪಕ ಪ್ರೇಮಮೂರ್ತಿಯೇ ವಿಶ್ವದ್ಯೋತಕ ಪರಮಜ್ಞಾನಿಯೇ ||

ವಿಶ್ವಮುಕ್ತಿ ಸಮರ್ಪಿತಾತ್ಮನೆ ವಿಶ್ವವಂದ್ಯನೆ ಜಯತು ಜಯತು ||2||

..........................................................................



Jan 2, 2023

ಅಚ್ಯುತಂ ಕೇಶವಂ ಕೃಷ್ಣ :ಸಾಹಿತ್ಯ | ACHUTAM KESHAVAM SONG LYRICS IN KANNADA

 


ಅಚ್ಯುತಂ ಕೇಶವಂ ಕೃಷ್ಣ ದಾಮೋದರಂ,
ರಾಮ ನಾರಾಯಣಂ ಜಾನಕೀ ವಲ್ಲಭಮ್ ||

 

ಕೌನ್ ಕೆಹೆತಾ ಹೆ ಭಗವಾನ್ ಆತೇ ನಹೀ,
ತುಮ್ ಮೀರಾ ಕೇ ಜೈಸೇ ಬುಲಾತೇ ನಹೀ ||

 

ಕೌನ್ ಕೆಹೆತಾ ಹೆ ಭಗವಾನ್ ಖಾತೇ ನಹೀ,
ಬೇರ್ ಶಬರೀ ಕೇ ಜೈಸೇ ಖಿಲಾತೇ ನಹೀ ||

 

ಕೌನ್ ಕೆಹೆತಾ ಹೆ ಹೈ ಭಗವಾನ್ ಸೋತೇ ನಹೀ,
ಮಾ ಯಶೋದಾ ಕೇ ಜೈಸೇ ಸುಲಾತೇ ನಹೀ ||

 

ಕೌನ್ ಕೆಹೆತಾ ಹೆ ಭಗವಾನ್ ನಾಚತೇ ನಹೀ,
ಗೋಪಿಯೋಂ ಕೀ ತರಹ ತುಮ್ ನಚಾತೇ ನಹೀ ||

 

ನಾಮ ಜಪತೇ ಚಲೋ ಕಾಮ್ ಕರತೇ ಚಲೋ,
ಹರ್ ಸಮಯ್ ಕೃಷ್ಣ ಕಾ ಧ್ಯಾನ ಕರತೇ ಚಲೋ ||

 

ಯಾದ ಆಯೇಗೀ ಉನಕೋ ಕಭೀ ನಾ ಕಭೀ,
ಕೃಷ್ಣ ದರ್ಶನ್ ತೋ ದೇಂಗೇ ಕಭೀ ನಾ ಕಭೀ ||


...............................................................

Also See:

ಬಾರೋ ಕೃಷ್ಣಯ್ಯ ನಿನ್ನ ಭಕ್ತರ ಮನೆಗೀಗ (ಸಾಹಿತ್ಯ /LYRICS)| BAARO KRISHNAYYA |SONG ON LORD KRISHNA