ಹಾಡಲು ಕಲಿಯಿರಿ(CLICK HERE TO LEARN THIS SONG)
ಬಾರೋ
ಕೃಷ್ಣಯ್ಯ ನಿನ್ನ ಭಕ್ತರ ಮನೆಗೀಗ
ರಂಗಯ್ಯ ಬಾರೋ ಕೃಷ್ಣಯ್ಯ|
ಬಾರೋ
ನಿನ್ನ ಮುಖ ತೋರೋ ನಿನ್ನ
ಸರಿ ಯಾರೋ ಜಗದೊಡೆಯ ಶೀಲನೆ
||
ಅಂದುಗೆ
ಪಾದಗಳ ಕಾಲಂದುಗೆ ಕಿರುಗೆಜ್ಜೆ
ಧಿಮ್ ಧಿಮಿ ಧಿಮಿ
ಧಿಮಿ ಧಿಮಿರೆನ್ನುತ।
ಪೊಂಗೊಳಲನೂದುತ
ಬಾರಯ್ಯ ಪೊಂಗೊಳಲನೂದುತ ಬಾರಯ್ಯ||1||
ಕಂಕಣ
ಕರದಲ್ಲಿ ಹೊನ್ನುಂಗುರ ಹೊಳೆಯುತ
ಕಿಂಕಿಣಿ ಕಿಣಿ ಕಿಣಿ ಕಿಣಿರೆನ್ನುತ|
ಪೊಂಗೊಳಲೂದುತ
ಬಾರಯ್ಯ ... ಬಾರೋ ಕೃಷ್ಣಯ್ಯ||2||
ವಾಸ
ಉಡುಪಿಲಿ ನೆಲೆಯಾದಿ ಕೇಶವನೆ
ದಾಸ
ನಿನ್ನ ಪದ ದಾಸ।
ದಾಸ
ನಿನ್ನ ಪದ ದಾಸ ನಿನ್ನ ಪದ
ದಾಸ (3 ಸಲ)
ಸಲಹಲು ಬಾರಯ್ಯ||3||
..........................................................................................
Also See:
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ AMMA NAANU DEVARANE SONG LYRICS IN KANNADA| LORD KRISHNA SONG
No comments:
Post a Comment