ಹಾಡಲು ಕಲಿಯಿರಿ(CLICK HERE TO LEARN THIS SHLOKAS))
ವಾಗೀಶಾದ್ಯಾ:
ಸುಮನಸ: ಸರ್ವಾರ್ಥಾನಾಮುಪಕ್ರಮೇ।
ಯ೦ ನತ್ವಾ ಕೃತಕೃತ್ಯಾಸ್ಯು: ತ೦ ನಮಾಮಿ ಗಜಾನನ೦॥
ಬ್ರಹ್ಮನೇ ಮೊದಲಾದ
ದೇವತೆಗಳು ಎಲ್ಲಾ ಕೆಲಸಗಳ ಆರಂಭದಲ್ಲಿ ಯಾರನ್ನು ಸ್ತುತಿಸಿ ಕೃತಾರ್ಥರಾಗುತ್ತಾರೋ ಆ ಗಜಾನನನಿಗೆ ನಮಸ್ಕರಿಸುತ್ತೇನೆ.
ಮಾತಾಮಹ ಮಹಾಶೈಲ೦ ಮಹಸ್ತದ ಪಿತಾಮಹ೦ |
ಕಾರಣಂ ಜಗತಾಂ
ವಂದೇ ಕಂಠಾದುಪರಿ ವಾರಣಮ್ ||
ಯಾರ ತಾಯಿಯ ತಂದೆ
ಪರ್ವತರಾಜನೋ, ಯಾರ ತಂದೆಯ ತಂದೆ ಬ್ರಹ್ಮದೇವನೋ, ಯಾರು ಈ ಜಗತ್ತಿನ ಎಲ್ಲಾ ಆಗುಹೋಗುಗಳಿಗೆ ಕಾರಣರೋ
ಹಾಗೂ ಆನೆಯ ಮುಖವನ್ನು ಧರಿಸಿದ ಗಜಾನನನಿಗೆ ನಮಸ್ಕರಿಸುತ್ತೇನೆ
ಆಲಂಬೆ
ಜಗದಾಲಂಬಂ ಲಂಬೋದರ ಪದಾಂಬುಜo |
ಶುಷ್ಯಂತಿ ಯದ್ರಜಸ್ಪರ್ಶಾತ್
ಸದ್ಯ: ಪ್ರತ್ಯೂಹವಾರ್ಧಯ: ||
ಜಗತ್ತಿಗೆ
ಆಧಾರನಾದ, ಯಾರ ಪಾದಧೂಳಿಯ ಸ್ಪರ್ಶಮಾತ್ರದಿಂದ
ವಿಘ್ನಗಳ ಸಾಗರಗಳು ಶುಷ್ಕವಾಗುತ್ತವೆಯೋ ಅಂತಹ ಲಂಬೋದರನ ಪಾದಗಳನ್ನು ಆಶ್ರಯಿಸುತ್ತೇನೆ.
ಏಕದಂತಂ ಮಹಾಕಾಯಂ ಲಂಬೋದರ ಗಜಾನನಂ
ವಿಘ್ನನಾಶಕರಂ ದೇವಂ ಹೇ ರಂಬಂ ಪ್ರಣಮಾಮ್ಯಹಮ್॥
ಒಂದು ಹಲ್ಲಿನ, ಬೃಹತ್ ದೇಹದ, ಉದ್ದ ಹೊಟ್ಟೆಯ, ಆನೆ ಮುಖದ.
ಅಡೆತಡೆಗಳನ್ನು ನಾಶಮಾಡುವ ಆ ದೇವರಾದ ಹೇರಂಬನಿಗೆ ನಾನು ನಮಸ್ಕರಿಸುತ್ತೇನೆ.
(ಹೇರಂಬ ಎನ್ನುವುದು ಗಣಪತಿಯ ಇನ್ನೊಂದು ಹೆಸರು)
..........................................................................
No comments:
Post a Comment