ಹಾಡಲು ಕಲಿಯಿರಿ(CLICK HERE TO LEARN THIS SONG)
ಸಾಹಿತ್ಯ : ವಿಜಯನಾರಸಿಂಹ
ಸಂಗೀತ : ವಿಜಯಭಾಸ್ಕರ್
ಗಾಯನ : ಪಿ.ಸುಶೀಲ
ಹದಿನಾಲ್ಕು ವರ್ಷ ವನವಾಸದಿಂದ
ಮರಳಿ ಬಂದಳು ಸೀತೇ
ಮರಳಿ ಬಂದಳು ಸೀತೆ
ಸಾರ್ವಭೌಮ ಶ್ರೀರಾಮಚಂದ್ರನ
ಪ್ರೇಮದ ಆಸರೆ ಒಂದೇ
ಸಾಕೆಂದಳು ಆ ಮಾತೆ.||
ಅಗ್ನಿಪರೀಕ್ಷೆಯ ಸತ್ವ ಪರೀಕ್ಷೆಗೆ
ಗುರಿಯಾದಳು ಸೀತೆ
ಅಗ್ನಿಯು ದಹಿಸದೆ ಘೋಷಿಸಿದ ಸೀತೆ ಪುನೀತೆ...
ಸೀತೆ ಪುನೀತೆ
ಅಲ್ಪಾಗಸನ ಕಲ್ಪನೆಮಾತಿಗೆ ಅಳುಕಿದ ಶ್ರೀರಾಮ
ಸೀತೆ ಕಲುಷಿತೆ...ಸೀತೆ ದೂಷಿತೆ...
ಎಂದನೆ ರಾಜಾರಾಮಾ...
ಮತ್ತೆ ಸೀತೆಯ ಕಾಡಿಗಟ್ಟಿದ
ನ್ಯಾಯವಾದಿ ರಾಮಾ...||1||
ಪೂರ್ಣ ಗರ್ಭಿಣಿ ಪುಣ್ಯರೂಪಿಣಿಯ ಕಂಡನು ವಾಲ್ಮೀಕಿ
ಲೋಕಮಾತೆಗೆ ಶೋಕ ಸಾಗರವೆ ನಿರ್ದಯಿ ರಾಮಾ..
ನಿರ್ದಯಿ ರಾಮಾ
ಪರ್ಣಕುಟೀರದೆ ಲವಕುಶ ಜನನ
ಸೀತೆಗೆ ಶಾಂತಿನಿಕೇತನ
ಪರಮಪಾವನೇ.. ಪ್ರಾಣವಲ್ಲಭೇ..
ಎನ್ನುತ ರಾಮನ ಆಗಮನಾ
ಸಂಗಮ ಸಮಯದೆ ಭೂಕಂಪನ
ಚಿರವಿರಹವೆ ಜಾನಕಿ ಜೀವನ.....||2||
..........................................
No comments:
Post a Comment