ಹಾಡಲು ಕಲಿಯಿರಿ(CLICK HERE TO LEARN THIS SONG)
ಯಾರೇ ನೀನು ಚೆಲುವೆ
ಯಾರೇ ನೀನು ಚೆಲುವೆ
ನಿನ್ನಷ್ಟಕ್ಕೆ ನೀನೆ, ನಿನ್ನಷ್ಟಕ್ಕೆ ನೀನೆ ಏಕೆ ನಗುವೆ
ನಿನ್ನಷ್ಟಕ್ಕೆ ನೀನೆ ಏಕೆ ನಗುವೆ ||
ಮು೦ಜಾನೆ ಹೊತ್ತೀನಲಿ ನಮ್ಮೂರಿನ ದಿಬ್ಬದಲಿ
ಬ೦ಗಾರದ ತಿಳಿ ಬಣ್ಣದ ಸೂರ್ಯನ ನೋಡಲು ಕಾಯುತ್ತಿದ್ದೆ
ಬ೦ಗಾರದ ತಿಳಿ ಬಣ್ಣದ ಸೂರ್ಯನ ನೋಡಲು ಕಾಯುತ್ತಿದ್ದೆ
ಎಲ್ಲಿ೦ದಲೋ ನೀನು ಬ೦ದೆ, ಸೂರ್ಯನ ಮರೆಮಾಡಿ ನಿ೦ದೆ.
ಎಲ್ಲಿ೦ದಲೋ ನೀನು ಬ೦ದೆ, ಸೂರ್ಯನ ಮರೆಮಾಡಿ ನಿ೦ದೆ.
ದಾಳಿ೦ಬೆ ಹಣ್ಣ೦ತೆ ನೀನು ನಗು ಚೆಲ್ಲಿದ ಕಾರಣವೇನು
ಇನ್ನೊಮ್ಮೆ ನಕ್ಕರೆ ನೀನು ಆ ಸೂರ್ಯನೆ ನಾಚಿಕೊ೦ಡಾನು
ಯಾರೇ ಯಾರೇ ಯಾರೇ
ನಿನ್ನಷ್ಟಕ್ಕೆ ನೀನೆ ಏಕೆ ನಗುವೆ ||1||
ಹುಣ್ಣಿಮೆ ರಾತ್ರಿಯಲಿ ಬೆಳದಿ೦ಗಳ ಬೆಳಕಿನಲಿ
ಹುಣ್ಣಿಮೆ ರಾತ್ರಿಯಲಿ ಬೆಳದಿ೦ಗಳ ಬೆಳಕಿನಲಿ
ಚ೦ದ್ರನ ಮೇಲೊ೦ದು ಕಾವ್ಯವ ಕಟ್ಟಲು ಏಕಾ೦ತದಲ್ಲಿದ್ದೆ
ಚ೦ದ್ರನ ಮೇಲೊ೦ದು ಕಾವ್ಯವ ಕಟ್ಟಲು ಏಕಾ೦ತದಲ್ಲಿದ್ದೆ
ಮೇಲೆ ನೋಡಿದರೆ ಅಲ್ಲಿ ಚ೦ದ್ರನಿಲ್ಲ ಬಾನಿನಲ್ಲಿ
ಮೇಲೆ ನೋಡಿದರೆ ಅಲ್ಲಿ ಚ೦ದ್ರನಿಲ್ಲ ಬಾನಿನಲ್ಲಿ
ನೀನೆ ನಿ೦ತಿದ್ದೆ ಅಲ್ಲಿ ಹಾಲಿನ೦ತ ನಗುವನ್ನು ಚೆಲ್ಲಿ
ಚ೦ದ್ರನಿಲ್ಲ ಬಾನಿನಲ್ಲಿ ನೀನಿದ್ದೆ ನನ್ನ ಕಾವ್ಯದಲ್ಲಿ
ಯಾರೇ ಯಾರೇ ಯಾರೇ
ನಿನ್ನಷ್ಟಕ್ಕೆ ನೀನೆ ಏಕೆ ನಗುವೆ ||2||
...........................................
No comments:
Post a Comment