ಯಾಕೆ ನಿರ್ದಯನಾದೆ ಎಲೋ ದೇವನೇ SONG LYRICS | PURANDARA DASA SONG LYRICS| YAKE NIRDAYANAADEYO |

CLICK HERE TO LEARN THIS SONG 

ಯಾಕೆ ನಿರ್ದಯನಾದೆ ಎಲೋ ದೇವನೇ

ಶ್ರೀ ಕಾಂತ ಎನಮೇಲೆ ಎಳ್ಳಷ್ಟು ದಯವಿಲ್ಲ ॥


ಕಂಗೆಟ್ಟು ಕಂಬದಲಿ  ಒಡೆದು ಬಳಲಿ ಬಂದು 

ಹಿಂಗದೆ ಪ್ರಹ್ಲಾದನ ಅಪ್ಪಿಕೊಂಡೆ ।

ಮಂಗಳಾ ಪದವಿತ್ತು ಮನ್ನಿಸಿದೆ ಅವ ನಿನಗೆ

ಬಂಗಾರವೆಷ್ಟು ಕೊಟ್ಟನೋ ಪೇಳೋ ಹರಿಯೆ ॥೧॥


ಸಿರಿದೇವಿಗ್ ಹೇಳದೇ ಸೆರಗು ಸಂವರಿಸಿದೆ

ಗರುಡನ ಮೇಲೆ ಗಮನವ ಮಾಡಿದೆ

ಭರದಿಂದ ನೀ ಬಂದು ಕರಿಯನುದ್ದರಿಸಿದೆ

ಕರಿರಾಜ ಎಷ್ಟು ಕನಕವ ಕೊಟ್ಟ ಹರಿಯೆ ॥೨॥


ಅಜಮಿಳನು ಅಣ್ಣನೆ ವಿಬೀಷಣನು ತಮ್ಮನೇ 

ನಿಜದಿ ರುಕ್ಮಾಂಗದನು ನಿನ್ನ ಮೊಮ್ಮಗನೇ ।

ಭಜನೆಗವರೇ ಹಿತರೇ ನಾ ನಿನಗೆ ಅನ್ಯನೇ

ತ್ರಿಜಗ ಪತಿ ಸಲಹಯ್ಯ ಪುರಂದರ ವಿಠಲ ॥೩॥

......................................................................................


No comments:

Post a Comment

ಯಾಕೆ ನಿರ್ದಯನಾದೆ ಎಲೋ ದೇವನೇ SONG LYRICS | PURANDARA DASA SONG LYRICS| YAKE NIRDAYANAADEYO |

CLICK HERE TO LEARN THIS SONG   ಯಾಕೆ ನಿರ್ದಯನಾದೆ ಎಲೋ ದೇವನೇ ಶ್ರೀ ಕಾಂತ ಎನಮೇಲೆ ಎಳ್ಳಷ್ಟು ದಯವಿಲ್ಲ ॥ ಕಂಗೆಟ್ಟು ಕಂಬದಲಿ  ಒಡೆದು ಬಳಲಿ ಬಂದು  ಹಿಂಗದೆ ಪ...