ಹಾಡಲು ಕಲಿಯಿರಿ(CLICK HERE TO LEARN THIS SONG)
ರಚನೆ :ಚನ್ನವೀರಕಣವಿ
ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಸೋ ಎಂದು ಶ್ರುತಿ ಹಿಡಿದು ಸುರಿಯುತಿತ್ತು
ಅದಕೆ ಹಿಮ್ಮೇಳವನೆ ಸೂಸಿಪಹ ಸುಳಿ ಗಾಳಿ
ತೆಂಗು ಗರಿಗಳ ನಡುವೆ ನುಸುಳುತಿತ್ತು ||
ಎಳೆವೆಣ್ಣು ಮೈದೊಳೆದು ಮಕರಂದ ಅರಿಶಿನದಿ
ಹೂ ಮುಡಿದು ಮಧು ಮಗಳ ಹೋಲುತಿತ್ತು
ಮೂಡಣದಿ ನೇಸರನ ನಗೆಮೊಗದ ಶ್ರೀ ಕಾಂತಿ
ಬಿಳಿಯ ಮೋಡದ ಹಿಂದೆ ಹೊಳೆಯುತ್ತಿತ್ತು||1||
ಹುಲ್ಲೆಸಳು ಹೂಪಕಳೆ ಮುತ್ತು ಹನಿಗಳ
ಮಿಂಚು
ಸೊಡರಿನಲಿ ಆರತಿಯ ಬೆಳಗುತಿತ್ತು
ಕೊರಲುಕ್ಕಿ ಹಾಡುತಿಹ ಚಿಕ್ಕ ಪಕ್ಕಿಯ
ಬಳಗ
ಶುಭಮಸ್ತು ಶುಭಮಸ್ತು ಎನ್ನುತಿತ್ತು||2||
ತಳಿರ ತೋರಣದಲ್ಲಿ ಬಳ್ಳಿ ಮಾಡಗಳಲ್ಲಿ
ದುಂಬಿಗಳ ಓಂಕಾರ ಹೊಮ್ಮುತಿತ್ತು
ಹಚ್ಚ ಹಸುರಿನ ಪಚ್ಚೆ ನೆಲಗಟ್ಟಿನಂದಳದಿ
ಚಿಟ್ಟೆ ವೆಂಗಣ ಕುಣಿತ ಹಾಕುತಿತ್ತು||3||
ಉಷೆಯ ನುಂಗದಿಬೆದಲಿ ಹರ್ಷ
ಪಾರ್ಶ್ವಗಳಂತೆ
ಮರದ ಹನಿ ತಟ ಪಟನೆ ಉದು ರುತಿತ್ತು
ಸೃಷ್ಟಿ ಲೀಲೆಯಲೆಂತು ತಲ್ಲೀನವಾದ ಮನ
ಹೊಸಬಾಳ ಸವಿಗನಸು ನೆನೆಯುತಿತ್ತು||4||
No comments:
Post a Comment