ಮಳೆಯ ದಯಮಾಡೊ ಶ್ರೀರಂಗಾ ನಿಮ್ಮ | Lyrics |ಹೆಳವನಕಟ್ಟೆ ಗಿರಿಯಮ್ಮ | maleya dayamaado shree ranga | helavana katte giriyamma

 ಹಾಡಲು ಕಲಿಯಿರಿ(CLICK HERE TO LEARN THIS SONG)

ಮಳೆಯ ದಯಮಾಡೊ ಶ್ರೀರಂಗಾ ನಿಮ್ಮ |
ಕರುಣ ತಪ್ಪಿದರೆ ಉಳಿಯದೀ ಲೋಕ ||ಪ||

ಪಶುಜಾತಿ ಹುಲ್ಲೆ ಸಾರಂಗ ಮೃಗಗಳು ಬಹಳ |
ಹಸಿದು ಬಾಯಾರಿ ಬತ್ತಿದ ಕೆರೆಗೆ ಬಂದು ||
ತೃಷೆಯಡಗದೆ ತಲ್ಲಣಿಸಿ ಮೂರ್ಛಯೆಗೊಂಡು |
ದೆಸೆದೆಸೆಗೆ ಬಾಯಿ ಬಿಡುತಿಹವಯ್ಯ ಹರಿಯೆ ||1||

ಧಗೆಯಾಗಿ ದ್ರವಗುಂದಿ ಇರುವ ಬಾವಿಯ ನೀರ |
ಮೊಗೆ ಮೊಗೆದು ಪಾತ್ರೆಯಲಿ ನಾರಿಯರು ||
ಹಗಲೆಲ್ಲ ತರುತಿಹರು ಯೋಚನೆಯ ಮಾಡುತ್ತ
ಬೇಗದಿಂದಲಿ ತರಿಸೊ ವೃಷ್ಟಿಯನು ಹರಿಯೆ ||2||
ಸಂದು ಹೋದವು ಜ್ಯೇಷ್ಠ ಆಷಾಢ ಶ್ರಾವಣ |
ಬಂದಿದೆ ಭಾದ್ರಪದ ಮಾಸವೀಗ||
ಇಂದು ಪುರಂದರಗೆ ಹೇಳಿ ವೃಷ್ಟಿಯ ತರಿಸೊ |
ಸಂದೇಹವಿನ್ಯಾಕೆ ಹೆಳವನಕಟ್ಟೆಯ ರಂಗ ||3 ||
--------------------------------------------------------------------------------

ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯಾ SONG LYRICS | IDU BHAGYA IDU BHAGYA SONG LYRICS | PURANDARA DASA

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯಾ

 ಪದುಮನಾಭನ ಪಾದ ಭಜನೆ ಸುಖವಯ್ಯಾ ॥ಪ॥

 ಕಲ್ಲಾಗಿ ಇರಬೇಕು ಕಠಿಣ ಭವ ತೊರೆಯೊಳಗೆ

 ಬಿಲ್ಲಾಗಿ ಇರಬೇಕು ಬಲ್ಲವರೊಳಗೆ॥

ಮೆಲ್ಲನೇ ಮಾಧವನ ಮನವ ಮೆಚ್ಚಿಸಬೇಕು

 ಬೆಲ್ಲವಾಗಿರಬೇಕು ಬಂಧು ಜನರೊಳಗೆ॥

 

 ಬುದ್ಧಿಯಲಿ ತನುಮನವ ತಿದ್ದಿಕೊಳ್ಳಲುಬೇಕು

 ಮುದ್ದಾಗಿ ಇರಬೇಕು ಮುನಿಯೋಗಿಗಳಿಗೆ॥

 ಮಧ್ವ ಮತ ಅಬ್ಧಿಯಲಿ ಮೀನಾಗಿರಲುಬೇಕು

 ಶುದ್ಧನಾಗಿರಬೇಕು ಕರಣತ್ರಯಗಳಲೀ॥

 

ವಿಷಯಭೋಗದ ತೃಣಕೆ ಉರಿಯಾಗಿರಲುಬೇಕು

 ನಿಶಿಹಗಲು ಶ್ರೀಹರಿಯ ನೆನೆಯಬೇಕು॥

 ವಸುಧೀಶ ಪುರಂದರ ವಿಠಲ ರಾಯನ

 ಹಸನಾದ ದಾಸರನು ಸೇವಿಸಲುಬೇಕು॥

---------------------------------------------------------------------------------------------

ಆಡೋಣ ಬನ್ನಿ ಕಣ್ಣ ಮುಚ್ಚಾಲೆ |ADONA BANNI KANNA MUCHALE | ಕನ್ನಡ ಭಾವಗೀತೆ | Lyrics

ಹಾಡಲು ಕಲಿಯಿರಿ(CLICK HERE TO LEARN THIS SONG) 

ಆಡೋಣ ಬನ್ನಿ ಕಣ್ಣ ಮುಚ್ಚಾಲೆ ,

ತೂಗೋಣ ಬನ್ನಿ ಉಯ್ಯಾಲೆ

ಜೀವನ  ಒಂದು ನಾಟಕ ಶಾಲೆ,

ನಾವೆಲ್ಲ ಕುಣಿಯುವ ನರ್ತನ ಶಾಲೆ

ಉಯ್ಯಾಲೆ ಓ ಓ ಓ ಚಂಪಾಲೆ, ಉಯ್ಯಾಲೆ ಚಂಪಾಲೆ ||

 

 

ಸುತ್ತಾಲು ಚೆಲ್ಲಿದ ರಂಗುರಂಗೋಲೆ,

ಬಳುಕುತ ಬರುವಳು ವನಮಾಲೆ

ಭರದಿಂದ ಬಂದು ಪಚ್ಚೆಯ ಸಾಲೆ,

ತೂಗಾಡಿ ಕರೆದಾವು ತೆಂಗಿನ ಸಾಲೆ

ಉಯ್ಯಾಲೆ ಓ ಓ ಓ  ಚಂಪಾಲೆ, ಉಯ್ಯಾಲೆ ಚಂಪಾಲೆ ||

 

ಹಕ್ಕಿಗಳಿಂಚರ ಕರೆಯೋಲೆ,

ಕುಣಿಯುತ ಬರುವಳು ನವ್ವಾಲೆ

ಇಂಪು ಇಂಪಿನ ಗುಂಪು ಕೋಗಿಲೆ,

ಕಂಪನು ಸೂಸುವ ಹೂಗಳ ಮಾಲೆ

ಉಯ್ಯಾಲೆ ಓ ಓ ಓ  ಚಂಪಾಲೆ, ಉಯ್ಯಾಲೆ ಚಂಪಾಲೆ ||

----------------------------------------------------------------------------------------

 


ನಿನ್ನೆಡೆಗೆ ಬರುವಾಗ ಸಿಂಗರದ ಹೊರೆಯೇಕೆ? ninnedege baruvaaga | Kuvempu | Kannada bhavagethe lyrics

ಹಾಡಲು ಕಲಿಯಿರಿ(CLICK HERE TO LEARN THIS SONG) 

ನಿನ್ನೆಡೆಗೆ ಬರುವಾಗ ಸಿಂಗರದ ಹೊರೆಯೇಕೆ? 

ಸಡಗರದ ಮಾತುಗಳ ಬಿಂಕವೇಕೆ?

ನಿನ್ನ ಮುಂದಿರುವಾಗ ಮಂತ್ರಗಳ ಮರೆಯೇಕೆ? 

ಸಂಪ್ರದಾಯದ ಮರುಳು ಲಜ್ಜೆಯೇಕೆ?

 

ನೇವುರದ ಗೆಜ್ಜೆಗಳ ಕಿಂಕಿಣಿಯ ದನಿ ನಿನ್ನ

 ಸವಿಗೊರಳಿನಿಂಚರವ ಕೆಡಿಸದಿರಲಿ
ಸಿಂಗರದ ಜವನಿಕೆಯು ದೊರೆ ನಿನ್ನ ಸಿರಿಮೆಯ

ಸೌಂದರ್ಯವನು ಮಬ್ಬುಗೊಳಿಸದಿರಲಿ ||1||

 

ನಗ್ನತೆಗೆ ನಾಚದೆಲೆ ಸಿರಿತಳಿರ ತೆಕ್ಕೆಯಿಂ 

ಮೂಡಿಸುಗ್ಗಿಯನೊಲಿವ ಹೂವಿನಂತೆ

ಸಿಂಗರದ ಹೊರೆಯುಳಿದು ಮಂತ್ರಗಳ ಮರೆಯುಳಿದು 

ಪ್ರೇಮದಾರತಿ ಹಿಡಿದು ತೇಲಿ ಬರುವೆ ||2||

 ---------------------------------------------------------------------------------

ಬಾ ಸವಿತಾ.... ಬಾ ಸವಿತಾ... ರಚನೆ : ಮಾಸ್ತಿ ವೆಂಕಟೇಶ ಅಯ್ಯಂಗಾರ್ |Lyrics in Kannada Baa Savitha song

ಹಾಡಲು ಕಲಿಯಿರಿ(CLICK HERE TO LEARN THIS SONG)

 

ಬಾ ಸವಿತಾ.... ಬಾ ಸವಿತಾ...

ಒಳಗಿನ ಕಣ್ಣನು ಮುಚ್ಚಿಸಿ ಒಮ್ಮೆ ,

ತಿಳಿವಿಗೆ ಬಣ್ಣವ ಹಚ್ಚಿಸಿ ಒಮ್ಮೆ
ಒಳಿತಲ್ಲದುದೇ ಒಳಿತೆಂಬುದರ ಚಳಕವೆಲ್ಲಕೆ
ವಿನಾಶವ ತಾ.... ||

ನೆಲೆಯಿಂದ ಹೊರಟು ಅಲೆ ಅಲೆ.. ಅಲೆ ಅಲೆ..
ಛಲತೊಟ್ಟ ಮಲ್ಲ ವಾಹಿನಿ ಬಾ..
ನಿಲವಿಲ್ಲ ಜಗದಿ ಕತ್ತಲಿಗೆಂದು
ಗೆಲವನು ಸಾರುವ ಭಾಸವ ತಾ....  
                                                            

ಓಂ ತತ್ಸವಿತುರ್ವರೇಣ್ಯವೆ೦ಬೆವು
ಅಂತಲ್ಲದೆ ಬೇರೆಯದನು ನಂಬೆವು
ಪಂಥವ ಬೆಳಗಿಸಿ, ನಿರೂಪಿಸಿ ಕಾಂಬೆವು
ಶಾಂತ ಸುಂದರ ಶಿವದಾ ಸವಿತಾ...  ||


SANSKRIT WORKSHEET: क्रीडाम वयं श्लोकान्त्याक्षरीम् | NCERT CLASS 7 DEEPAKAM

 













ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ SONG LYRICS IN KANNADA |VIGHNESHWARA NINAGE PRATHAMA PRANAMA | LORD GANESHA SONGS

 ಹಾಡಲು ಕಲಿಯಿರಿ(CLICK HERE TO LEARN THIS SONG)

ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ

ಸ್ಮರಿಸುವೆ ನಿನ್ನಯ ದಿವ್ಯ ನಾಮ ॥

 

ವಿಘ್ನ ವಿನಾಶಕ ಬುದ್ಧಿಪ್ರದಾಯಕ

ವಿದ್ಯೆಯ ನೀಡೋ ಶ್ರೀ ವರದಾಯಕ

ಚರಣ ಕಮಲ ನಿನ್ನ ಪೂಜಿಪೆ ಅನುದಿನ

ಪಾವನಗೊಳಿಸೋ ಈ ಶಾಂತಿಧಾಮ ॥1||

 

ಗಂಗಾಧರ ಸುತ ಚಂದ್ರ ಸುಧಾಕರ

ಮಂಗಳಗೊಳಿಸೋ ಶ್ರೀ ಶುಭಕಾರಕ ।

ಭವಸಾಗರವನು ದಾಟಲು ಅನುದಿನ

ಸಾಧನವೇ ತವ ತಾರಕನಾಮ ॥2||

ಮೆಲ್ಲ ಮೆಲ್ಲನೆ ಬಂದನೆ , ಗೋಪಮ್ಮ ಕೇಳೆ | mella mellane bandane song lyrics | purandara dasa |

 

ಮೆಲ್ಲ ಮೆಲ್ಲನೆ ಬಂದನೆ , ಗೋಪಮ್ಮ ಕೇಳೆ
ಮೆಲ್ಲ ಮೆಲ್ಲನೆ ಬಂದನೆ ||ಪ||

ಮೆಲ್ಲ ಮೆಲ್ಲನೆ ಬಂದು ಗಲ್ಲಕ್ಕೆ ಮುತ್ತ ಕೊಟ್ಟು
ನಿಲ್ಲದೆ ಓಡಿ ಪೋದ ಕಳ್ಳಗೆ ಬುದ್ಧಿ ಪೇಳೆ ||ಅ.ಪ||

ಹಾಲು ಮಾರಲು ಪೋದರೆ, ನಿನ್ನಯ ಕಂದ, ಕಾಲಿಗಡ್ಡವ ಕಟ್ಟಿದ
ಹಾಲ ಸುಂಕವ ಬೇಡಿ ಕೋಲನ್ನೆ ಅಡ್ಡಕಟ್ಟಿ
ಶಾಲೆಯ ಸೆಳಕೊಂಡು ಹೇಳದೋಡಿದ ಕೃಷ್ಣ || 1||

ಮೊಸರ ಮಾರಲು ಪೋದರೆ, ನಿನ್ನಯ ಕಂದ ಪೆಸರೇನೆಂದೆಲೆ ಕೇಳಿದ
ಹಸನಾದ ಹೆರಳ ಮೇಲೆ ಕುಸುಮವ ತಂದಿಕ್ಕಿ
ಶಶಿಮುಖಿಯರಿಗೆಲ್ಲ ಬಸಿರು ಮಾಡಿದ ಕೃಷ್ಣ ||2||

ಪೋಗಿರೆ ರಂಗಯ್ಯನ, ಮೇಲೆ ನೀವು , ದೂರೇನು ಕೊಂಡು ಬಂದಿರೆ
ಸೃಷ್ಟೀಶ ಪುರಂದರ ವಿಠಲ ರಾಯನ
ತೂಗಿ ಪಾಡಿರೆ ಬೇಗ ನಾಗವೇಣಿಯರೆಲ್ಲ || 3||

 ----------------------------------------------------------------------------------------


ಆಲಾರೆ ಆಲಾರೆ, ಮುಕುಂದ ಮುರಾರೆ SONG LYRICS IN KANNADA | ALARW ALARW MUKUNDA MURARE SONG LYRICS

 

ಆಲಾರೆ ಆಲಾರೆ, ಮುಕುಂದ ಮುರಾರೆ

ಗೋಪಾಲ ಬಾರಯ್ಯ.. ಬಾ…ರೋ ಶ್ರೀ ಕೃಷ್ಣ ನೀ ಬೇಗ ಬಾ…ರೋ||


ನನ್ನ ಕಣ್ಣಲ್ಲಿ ನೋಡು ನಿನ್ನ ಬಿಂಬವೆ

ನನ್ನ ಮನದಲ್ಲಿ ಇಂದು ನಿನ್ನ ರೂಪವೆ,

ಬಲ್ಲೆಯಾ… ಕೃಷ್ಣನೇ…

ನೆನ್ನೆ ಕನಸಲ್ಲೂ ನಾನು ನಿನ್ನೇ ಕಂಡೆನೇ

ನಿನ್ನ ನೋಡೊ ಆಸೆ ನಾ ತಾಳಲಾರೆನೆ

ಕೇಶವಾ… ಮಾಧವಾ…ರಾ ಧಾ ಲೋ ಲ ||1||


ಪ್ರೇಮವೆ ದೈವ ಎಂದೂ ಪ್ರೇಮವೆ ಜೀವಾ

ಪ್ರೇಮದ ಕೂಗು ಇನ್ನು ಕೇಳದೆ ದೇವ,

ತಾಮಸಾ… ಏತಕೇ…

ನನ್ನ ಹೃದಯದ ಪ್ರೇಮ ಗಾನ ಕೇಳದೆ

ಜೀವ ನಿಲ್ಲದು ಕೃಷ್ಣ ನಿನ್ನ ನೋಡದೆ

ಕೇಶವಾ…ಮಾಧವಾ…, ರಾ ಧಾ ಲೋ ಲ ||2||

------------------------------------------------------------------------------------------------------------------------

ಮಳೆಯ ದಯಮಾಡೊ ಶ್ರೀರಂಗಾ ನಿಮ್ಮ | Lyrics |ಹೆಳವನಕಟ್ಟೆ ಗಿರಿಯಮ್ಮ | maleya dayamaado shree ranga | helavana katte giriyamma

  ಹಾಡಲು ಕಲಿಯಿರಿ(CLICK HERE TO LEARN THIS SONG) ಮಳೆಯ ದಯಮಾಡೊ ಶ್ರೀರಂಗಾ ನಿಮ್ಮ | ಕರುಣ ತಪ್ಪಿದರೆ ಉಳಿಯದೀ ಲೋಕ ||ಪ|| ಪಶುಜಾತಿ ಹುಲ್ಲೆ ಸಾರಂಗ ಮೃಗಗಳು ಬ...