ಹಾಡಲು ಕಲಿಯಿರಿ(CLICK HERE TO LEARN THIS SONG)
ಶರಣು ಸಿದ್ಧಿ ವಿನಾಯಕ
ಶರಣು ವಿದ್ಯಾ ಪ್ರದಾಯಕ
ಶರಣು ಪಾರ್ವತಿ ತನಯ
ಮೂರುತಿ ಶರಣು ಮೂಷಕ ವಾಹನ||
ಶರಣು ಶರಣು….
ನಿಟಿಲ ನೇತ್ರನ ದೇವಿ
ಸುತನೆ ನಾಗಭೂಷಣ ಪ್ರಿಯನೆ
ತಟಿಲತಾಂಕಿತ
ಕೋಮಲಾಂಗನೆ ಕರ್ಣಕುಂಡಲ ಧಾರನೇ॥1|| (ಶರಣು ಶರಣು….)
ಬಟ್ಟ ಮುತ್ತಿನ
ಹಾರಪದಕನೆ ಬಾಹು ಹಸ್ತ ಚತುಷ್ಟನೇ
ಇಟ್ಟ ತೊಡುಗೆಯ ಹೇಮ
ಕಂಕಣ ಪಾಶ ಅಂಕುಶ ಧಾರನೇ॥2|| (ಶರಣು ಶರಣು….)
ಕುಕ್ಷಿ ಮಹಾ
ಲಂಬೊದರನೇ ಇಕ್ಷು ಚಾಪನ ಗೆಲಿದನೇ
ಪಕ್ಷಿವಾಹನ ಶ್ರೀ
ಪುರಂದರ ವಿಠಲನಾ ನಿಜ ದಾಸನೇ॥3||(ಶರಣು ಶರಣು….)
…………………………………………………………………………
No comments:
Post a Comment