ರೆಕ್ಕೆ ಇದ್ದರೆ ಸಾಕೆ (ಭಾವಗೀತೆ) ಸಾಹಿತ್ಯ|REKKE IDDARE SAAKE SONG LYRICS IN KANNADA AND ENGLISH

 ಹಾಡಲು ಕಲಿಯಿರಿ(CLICK HERE TO LEARN THIS SONG)

ರೆಕ್ಕೆ ಇದ್ದರೆ ಸಾಕೆ, ಹಕ್ಕಿಗೆ ಬೇಕು ಬಾನು ಬಯಲಲಿ ತೇಲುತ ತಾನು

ಮ್ಯಾಲೇ ಹಾರೋಕೆ

ಕಾಲೊಂದಿದ್ದರೆ ಸಾಕೆ, ಚಿಗರೆಗೆ ಬೇಕು ಕಾನು ಗಾಳಿಯ ಮೇಲೆ ತಾನು

ಜಿಗಿದು ಆಡೋಕೆ||

 

ಹೂವೊಂದಿದ್ದರೆ ಸಾಕೇ ಬ್ಯಾಡವೆ ಗಾಳಿ

 ನೀವೇ ಹೇಳಿ ಕಂಪ ಬೀರೋಕೆ

ಮುಖವೊಂದಿದ್ದರೆ ಸಾಕೇ ದುಂಬಿ ತಾವ

 ಬ್ಯಾಡವೇ ಹೂವ ಜೇನ ಹೀರೋಕೆ||1||

 

ನೀರೊಂದಿದ್ದರೆ ಸಾಕೇ ಬ್ಯಾಡವೆ ಹಳ್ಳಾ

 ಬಲ್ಲವ ಬಲ್ಲ ತೊರೆಯು ಹರಿಯೋಕೆ

ಮೋಡ ಇದ್ದರೆ ಸಾಕೆ ಬ್ಯಾಡವೇ ಭೂಮಿ

 ಹೇಳಿ ಸ್ವಾಮಿ ಮಳೆಯು ಸುರಿಯೋಕೆ||2||

 

ಕಣ್ಣೊಂದಿದ್ದರೆ ಸಾಕೆ ಬ್ಯಾಡವೆ ಮಂದೆ

ಕಣ್ಣಿನ ಮುಂದೆ ನಿಮಗೆ ಕಾಣೋಕೆ

ಕೊರಳೊಂದಿದ್ದರೆ ಸಾಕೆ ಬ್ಯಾಡವೇ ಹಾಡು

ಎಲ್ಲರ ಜೋಡಿ ಕೂಡಿ ಹಾಡೋಕೆ||3||

.................................................................................................


REKKE IDDARE SAAKE, 

HAKKIGE BEKU BAANU BAYALALI TELUTHA THAANU

MYAALE HAAROKE

KAALONDIDDARE SAAKE,

CHIGAREGE BEKU KAANU GAALIYA MELE THAANU 

JIGIDU AADOKE||


HOOVONDIDDARE SAAKE BYAADAVE GAALI

NEEVE HELI, KAMPA BEEROKE

MUKHAVONDIDDARE SAAKE DUMBI THAAVA

BYAADAVE HOOVA, JENA HEEROKE||1||


NEERONDIDDARE SAAKE BYAADAVE HALLA

BALLAVA BALLA TOREYU HARIYOKE

MODA IDDARE SAAKE BYADAVE BHOOMI 

HELI SWAMI MALEYU SURIYOKE||2||


KANNONDIDDARE SAAKE BYAADAVE MANDHE 

KANNINA MUNDHE NIMAGE KAANOKE

KORALONDIDDARE SAAKE BYAADAVE HAADU

ELLARA JODI KOODI HAADOKE||3||

................................................................................................

Also See:

EMOTIONAL SONGS(ಭಾವಗೀತೆಗಳು).

ಜ್ಞಾನವಿಲ್ಲದೇ ಮೋಕ್ಷವಿಲ್ಲಾ/JNANAVILLADE MOKSHAVILLA song lyrics in kannada

ಹಚ್ಚೇವು ಕನ್ನಡದಾ ದೀಪಾ ಸಾಹಿತ್ಯ|HACHEVU KANNADA DA DEEPA SONG LYRICS IN KANNADA AND ENGLISH

 

ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ: ಡಿ.ಎಸ್ಸ್.ಕರ್ಕಿ

ಹಚ್ಚೇವು ಕನ್ನಡದ ದೀಪಾ

ಹಚ್ಚೇವು ಕನ್ನಡದ ದೀಪಾ
ಕರುನಾಡ ದೀಪಾ ಸಿರಿನುಡಿಯ ದೀಪಾ
ಒಲವೆತ್ತಿ ತೋರುವಾ ದೀಪಾ
ಹಚ್ಚೇವು ಕನ್ನಡದ ದೀಪಾ
ಹಚ್ಚೇವು ಕನ್ನಡದ ದೀಪಾ

ಬಹುದಿನಗಳಿಂದ ಮೈಮರವೆಯಿಂದ
ಕೂಡಿರವ ಕೊಳೆಯ 
ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು
ಅಲ್ಲಲ್ಲಿ ಕರಣ 
ಚಾಚೇವು
ನಡುನಾಡೆ ಇರಲಿ ಗಡಿನಾಡೆ ಇರಲಿ
ಕನ್ನಡದ ಕಳೆಯಾ ಕೆಚ್ಚೇವು
ಮರೆತೇವು ಮರವಾ ತೆರೆದೇವು ಮನವಾ
ಎರೆದೇವು ಒಲವಾ ಹಿಡಿ ನೆನಪಾ
ನರನರವನೆಲ್ಲ ಹುರಿಗೊಳಿಸಿ ಹೊಸೆದು

ಹಚ್ಚೇವು ಕನ್ನಡದ ದೀಪಾ
ಹಚ್ಚೇವು ಕನ್ನಡದ ದೀಪಾ||1||


ಕಲ್ಪನೆಯ ಕಣ್ಣು ಹರಿವನಕ ಸಾಲು
ದೀಪಗಳ ಬೆಳಕ 
ಬೀರೇವು
ಹಚ್ಚಿರುವ ದೀಪದಲಿ ತಾಯ ರೂಪ
ಅಚ್ಚಳಿಯದಂತೆ 
ತೋರೇವು
ಒಡಲೊಡಲ ಕೆಚ್ಚಿನಾ ಕಿಡಿಗಳನ್ನು
ಗಡಿನಾಡಿನಾಚೆ 
ತೂರೇವು
ಹೊಮ್ಮಿರಲು ಪ್ರೀತಿ ಎಲ್ಲಿಯದು ಭೀತಿ
ನಾಡೊಲವೆ ನೀತಿ ಹಿಡಿ ನೆನಪಾ
ಮನೆಮನೆಗಳಲ್ಲಿ ಮನಮನಗಳಲ್ಲಿ

ಹಚ್ಚೇವು ಕನ್ನಡದ ದೀಪಾ

ಹಚ್ಚೇವು ಕನ್ನಡದ ದೀಪಾ ||2||


ನಮ್ಮವರುಗಳಿಸಿದಾ ಹೆಸರುಳಿಸಲು
ಎಲ್ಲಾರು ಒಂದು
ಗೂಡೇವು
ನಮ್ಮೆದೆಯ ಮಿಡಿಯುವಿ ಮಾತಿನಲ್ಲಿ
ಮಾತೆಯನು ಪೂಜೆ 
ಮಾಡೇವು
ನಮ್ಮುಸಿರು ತೀರುವಿ ನಾಡಿನಲ್ಲಿ
ಮಾಂಗಲ್ಯ
ಗೀತಾ ಹಾಡೇವು
ತೊರೆದೇವು ಮರುಳ ಕಳೆದೇವು ಇರುಳ
ಪಡೆದೇವು ತಿರುಳ ಹಿಡಿ ನೆನಪಾ
ಕರುಳೆಂಬ ಕುಡಿಗೆ ಮಿಂಚಂತೆ ಮುಡಿಸಿ

ಹಚ್ಚೇವು ಕನ್ನಡದ ದೀಪಾ

ಹಚ್ಚೇವು ಕನ್ನಡದ ದೀಪಾ||3||

.............................................

HACHEVU KANNADA DA DEEPA
HACHEVU KANNADA DA DEEPA
KARUNAADA DEEPA SIRI NUDIYA DEEPA
OLAVETHI TORUVA DEEPA ||

BAHU DINAGALINDA MAI MAREVEYINDA 
KOODIRUVA KOLEYA KOCHEVU
ELLELLI KANNADA DA KAMPU SOOSALU 
ALLALLI KARANA CHAACHEVU
NADUNAADE IRALI GADINAADE IRALI
KANNADA DA KALEYA KECHEVU
MARETHEVU MARAVAA THEREDEVU MANAVA
EREDEVU OLAVA HIDI NENAPA
NARA NARAVANELLA HURIGOLISI HOSEDU
HACHEVU KANNADA DA DEEPA ||1||

KALPANEYA KANNU HARIVANAKA SAALU
DEEPAGALA BELAKA BEEREVU
HACHIRUVA DEEPADALI TAAYA ROOPA
ACHALIYADANTE TOREVU
ODALODALA KECHINA KIDIGALANNU
GADINAADINAACHE TOOREVU
HOMMIRALU PREETHI ELLIYADU BHEETHI
NAADOLAVE NEETHI HIDI NENAPA
MANE MANE GALALLI MANA MANAGALALLI
HACHEVU KANNADA DA DEEPA||2||

NAMMAVARU GALISIDA HESARULISALU
ELLARU ONDUGOODEVU
NAMMEDEYA MIDIYUVEE MAATHINALLI
MAATHEYANU POOJE MAADEVU
NAMMUSIRU THEERUVEE NAADINALLI
MAANGALYA DEEPA HAADEVU
TOREDEVU MARULA KALEDEVU IRULA
PADEDEVU TIRULA HIDI NENAPA
KARULEMBA KUDIGE MINCHANTHE MUDISI
HACHEVU KANNADA DA DEEPA ||3||

..........................................

Also See:





ಕರುನಾಡ ತಾಯಿ ಸದಾ ಚಿನ್ಮಯಿ |Karunada Tayi Sada Chinmayi song lyrics in Kannada And English|ಕನ್ನಡ

 ಹಾಡಲು ಕಲಿಯಿರಿ(CLICK HERE TO LEARN THIS SONG)


ರಚನೆ: ಹಂಸಲೇಖ

ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ
ಈ ಪುಣ್ಯ ಭೂಮಿ ನಮ್ಮ ದೇವಾಲಯ
ಪ್ರೇಮಾಲಯ, ಈ ದೇವಾಲಯ

ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ||

ವೀರ ಧೀರರಾಳಿದ ನಾಡು ನಿನ್ನದು
ಶಾಂತಿ ಮಂತ್ರ ಪಾಡಿದ ಬೀಡು ನಿನ್ನದು
ವರ ಸಾಧು ಸಂತರಾ ನೆಲೆ ನಿನ್ನದು
ಮಹಾ ಶಿಲ್ಪಕಾರರ ಕಲೆ ನಿನ್ನದು
ಸಂಗೀತ ಸಾಹಿತ್ಯ ಸೆಲೆ ನಿನ್ನದೂ ||1||


ಜೀವ ತಂತಿ ಮೀಟುವ ಸ್ನೇಹ ನಮ್ಮದು

ಎಲ್ಲ ಒಂದೆ ಎನ್ನುವಾ ಔದಾರ್ಯ ನಮ್ಮದು
ಸೌಂದರ್ಯ ಸೀಮೆಯಾ ಗುಡಿ ನಮ್ಮದು
ಮಾಧುರ್ಯ ತುಂಬಿದಾ ನುಡಿ ನಮ್ಮದು
ಕಸ್ತೂರಿ ಕನ್ನಡದ ಸವಿ ನಮ್ಮದು


ರೋಮರೋಮಗಳು ನಿಂತವು ತಾಯೆ
ಚೆಲುವ ಕನ್ನಡದೊಳೇನಿದು ಮಾಯೆ
ಮುಗಿಲೆ ಕಡಲೆ ಸಿಡಿಲೆ ಹೇಳಿರಿ
ಮುಗಿಲೆ ಕಡಲೆ ಸಿಡಿಲೆ ಹೇಳಿರಿ
ತನುವು ಮನವು ಧನವು ಎಲ್ಲ ಕನ್ನಡ
ತನುವು ಮನವು ಧನವು ಎಲ್ಲ ಕನ್ನಡ
ಆ ಆ ಆ ಆ ||2||

............................................

KARUNADA TAYI SADA CHINMAYI

KARUNADA TAYI SADA CHINMAYI 

EE PUNYA BHOOMI NAMMA DEVAALAYA

PREMAALAYA  EE  DEVAALAYA||


VEERA DHEERA RAALIDA NAADU NINNADU

SHAANTI MANTRA PAADIDA BEEDU NINNADU

VARA SAADHU SANTARA NELE NINNADU

MAHA SHILPA KAARARA KALE NINNADU

SANGEETHA SAAHITYA SELE NINNADU ||1||


JEEVA THANTHI MEETUVA SNEHA NAMMADU

ELLA ONDE ENNUVA AUDAARYA NAMMADU

SOUNDARYA SEEMEYA GUDI NAMMADU

MAADHURYA TUMBIDA NUDI NAMMADU

KASTHURI KANNADA DA SAVI NAMMADU

 ROMA ROMAGALU NINTHAVU TAAYE

CHELUVA KANNADA DOLENIDU MAAYE

MUGILE KADALE SIDILE HELIRI

MUGILE KADALE SIDILE HELIRI

THANUVU MANAVU DHANAVU ELLA KANNADA

THANUVU MANAVU DHANAVU ELLA KANNADA

AA AA AA AA... ||2||


......................................................................................................................

Also See:

ವಿಶ್ವ ವಿನೂತನ ವಿದ್ಯಾ ಚೇತನ |VISHWA VINUTHANA VIDYA CHETANA SONG LYRICS IN KANNADA AND ENGLISH

NITYOTSAVA (ನಿತ್ಯೋತ್ಸವ ಗೀತೆ)




ನಾವಾಡುವ ನುಡಿಯೇ ಕನ್ನಡ ನುಡಿ|NAVADUVA NUDIYE SONG LYRICS IN KANNADA|ಕನ್ನಡ

 

ಗಂಧದ ಗುಡಿ (1973) - ನಾವಾಡುವ ನುಡಿಯೇ


ನಾವಾಡುವ ನುಡಿಯೇ ಕನ್ನಡ ನುಡಿ 

ಚಿನ್ನದ ನುಡಿ ಸಿರಿಗನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ

ಅಂದದ ಗುಡಿ ಚೆಂದದ ಗುಡಿ


ನಾವಾಡುವ ನುಡಿಯೇ ಕನ್ನಡ ನುಡಿ

ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ

ಚೆಂದದ ಗುಡಿ ಶ್ರೀಗಂಧದ ಗುಡಿ
ಆಹಹಾ ಆಹಹಾ ಆಹಹಾ..ಆಹಹಾ ಆಹಹಾ ಆಹಹಾ

ಹಸುರಿನ ಬನಸಿರಿಗೇ ಒಲಿದು ಸೌಂದರ್ಯ ಸರಸ್ವತಿ ಧರೆಗಿಳಿದು
ಆಹಹಾ ಓ ಹೊ ಹೋ..ಆ‌ಆ ಓ ಹೋ
ಹರಿಯುವ ನದಿಯಲಿ ಈಜಾಡಿ ಹೂಬನದಲಿ ನಲಿಯುತ ಓಲಾಡಿ
ಚಲುವಿನ ಬಲೆಯ ಬೀಸಿದಳು ಈ ಗಂಧದ ಗುಡಿಯಲಿ ನೆಲೆಸಿದಳು
ಇದು ಯಾರ ತಪಸಿನ ಫಲವೋ ಈ ಕಂಗಳು ಮಾಡಿದ ಪುಣ್ಯವೋ ಓ ಹೊ ಹೋ..ಹಾಹ ||1||

ಚಿಮ್ಮುತ ಓಡಿವೆ ಜಿಂಕೆಗಳು ಕುಣಿದಾಡುತ ನಲಿದಿವೆ ನವಿಲುಗಳೂ

ಮುಗಿಲನು ಚುಂಬಿಸುವಾಸೆಯಲಿ ತೂಗಾಡುತ ನಿಂತ ಮರಗಳಲಿ

ಹಾಡುತಿರೆ ಬಾನಾಡಿಗಳು ಎದೆಯಲ್ಲಿ ಸಂತಸದಾ ಹೊನಲು

ಇದು ವನ್ಯ ಮೃಗಗಳ ಲೋಕವೋ ಈ ಭೂಮಿಗೆ ಇಳಿದ ನಾಕವೋ ಆಹಹಾ.ಓಹೋ ||2||
………………………………………………………………………………….

ALSO SEE:

PATRIOTIC SONGS(ದೇಶಭಕ್ತಿಗೀತೆಗಳು)

ವಿಶ್ವ ವಿನೂತನ ವಿದ್ಯಾ ಚೇತನ |VISHWA VINUTHANA VIDYA CHETANA SONG LYRICS IN KANNADA AND ENGLISH

 

ರಚನೆ : ಚೆನ್ನವೀರ ಕಣವಿ

 CLICK HERE TO LEARN THIS SONG

 ವಿಶ್ವ ವಿನೂತನ ವಿದ್ಯಾ ಚೇತನ ಸರ್ವ ಹೃದಯ ಸಂಸ್ಕಾರಿ

ಜಯ ಭಾರತಿ………………….

 

ವಿಶ್ವ ವಿನೂತನ ವಿದ್ಯಾ ಚೇತನ ಸರ್ವ ಹೃದಯ ಸಂಸ್ಕಾರಿ

ಜಯ ಭಾರತಿ………………….

ಕರುನಾಡ ಸರಸ್ವತಿ ಗುಡಿ ಗೋಪುರ ಸುರ ಶಿಲ್ಪ ಕಲಾಕೃತಿ

ಕೃಷ್ಣೆ ತುಂಗೆ ಕಾವೇರಿ ಪವಿತ್ರಿತ ಕ್ಷೇತ್ರ ಮನೋಹಾರಿ||

 

ಗಂಗ ಕದಂಬ ರಾಷ್ಟ್ರಕೂಟ ಬಲ ಚಾಲುಕ್ಯ ಹೊಯ್ಸಳ ಬಲ್ಲಾಳ

ಹಕ್ಕ ಬುಕ್ಕ ಪುಲಿಕೇಶಿ ವಿಕ್ರಮರ ಚೆನ್ನಮ್ಮಾಜಿಯ ವೀರಶ್ರೀ||1||

 

ತ್ಯಾಗ ಭೋಗ ಸಮಯೋಗದ ದೃಷ್ಟಿ ಬೆಳವೊಲ ಮಲೆ ಕೆರೆ ಸುಂದರ ಸೃಷ್ಟಿ

ಜ್ಞಾನದ ವಿಜ್ಞಾನದ ಕಲೆಯೈಸಿರಿ  ಸರ್ವೋದಯ ಧಾರಾ ನಗರಿ||2||

 

ಅರಿವೇ ಗುರು ನುಡಿ ಜ್ಯೋತಿರ್ಲಿಂಗ ದಯವೇ ಧರ್ಮದ ಮೂಲ ತರಂಗ

ವಿಶ್ವ ಭಾರತಿಗೆ ಕನ್ನಡದಾರತಿ ಮೊಳಗಲಿ ಮಂಗಲ ಜಯಭೇರಿ||3||

...........................................................................................

VISHWA VINOOTANA VIDYA CHETANA SARVA HRADAYA SAMSKAARI

JAYA BHAARATHI…..

VISHWA VINOOTANA VIDYA CHETANA SARVA HRADAYA SAMSKAARI

JAYA BHAARATHI….. KARUNAADA SARASWATHI

GUDI GOPURA SURA SHILPA KALAAKRATHI

KRASHNE TUNGE KAVERI PAVITRITHA KSHETRA MANOHAARI||

 

GANGA KADAMBA RAASHTRA KOOTA BALA

CHAALUKYA HOYSALA BALLALA

HAKKA BUKKA PULIKESHI VIKRAMARA

CHENNAMMAAJIYA VEERASHRI ||1||

 

TYAAGA BHOGA SAMAYOGADA DRASHTI

BELAVOLA MALEKERE SUNDARA SRASHTI

JNAANADA VIJNAANADA KALEYAI SIRI

SARVODAYA DHAARAA NAGARI ||2||

 

ARIVE GURU NUDI JYOTIRLINGA

DAYAVE DHARMADA MOOLA TARANGA

VISHWA BHAARATHIGE KANNADA DAARATHI

MOLAGALI MANGALA JAYABHERI ||3||

....................................................................................................................

Also See:

NITYOTSAVA (ನಿತ್ಯೋತ್ಸವ ಗೀತೆ)

PATRIOTIC SONGS(ದೇಶಭಕ್ತಿಗೀತೆಗಳು)


ಎಂಥ ಅಂದ ಎಂಥ ಚೆಂದ ಶಾರದಮ್ಮ|ENTHA ANDHA ENTHA CHENDA SHARADAMMA SONG LYRICS

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಎಂಥ ಅಂದ ಎಂಥ ಚೆಂದ ಶಾರದಮ್ಮ ನೀನು

ಎಂಥ ಅಂದ ಎಂಥ ಚೆಂದ ಶಾರದಮ್ಮ ನಿನ್ನ

ನೋಡಲೆರಡು ಕಣ್ಣು ನನಗೆ ಸಾಲದಮ್ಮ

ನಿನ್ನ ನೋಡಲೆರಡು ಕಣ್ಣು ನನಗೆ ಸಾಲದಮ್ಮ||

ಎಂಥ ಅಂದ ಎಂಥ ಚೆಂದ ಶಾರದಮ್ಮ ನಿನ್ನ

ನೋಡಲೆರಡು ಕಣ್ಣು ನನಗೆ ಸಾಲದಮ್ಮ

ನಿನ್ನ ನೋಡಲೆರಡು ಕಣ್ಣು ನನಗೆ ಸಾಲದಮ್ಮ||

 

ಇನ್ನು ಇನ್ನು ನೋಡುವಾಸೆ ತುಂಬಿತಮ್ಮ ಇನ್ನು

ಕೋಟಿ ಜನುಮ ಬರಲಿ ನನಗೆ ಸಾಲದಮ್ಮ |

ಅಭಯ ಹಸ್ತ ನೋಡಿ ಜೀವ ಕುಣಿಯಿತಮ್ಮ ನಿನ್ನ

ಅಭಯ ಹಸ್ತ ನೋಡಿ ಜೀವ ಕುಣಿಯಿತಮ್ಮ

ನಿನ್ನ ಪಾದಕಮಲದಲ್ಲಿ ಶಿರವು ಬಾಗಿತಮ್ಮ||1||

 

ಎಂಥ ಶಕ್ತಿ ನಿನ್ನಲಿದೆಯೋ ಶಾರದಮ್ಮ

ನಿನ್ನ ನೋಡಿ ಹಾಡುವಾಸೆ ಬಂದಿತಮ್ಮ

ರತ್ನದಂಥ ಮಾತುಗಳನೆ ಆಡಿಸಮ್ಮ ಒಳ್ಳೆ

ರತ್ನದಂಥ ಮಾತುಗಳನೆ ಆಡಿಸಮ್ಮ

ರಾಗ ಭಾವ ಭಕ್ತಿ ತುಂಬಿ ಹಾಡಿಸಮ್ಮ

ಒಳ್ಳೆ ರಾಗ ಭಾವ ಭಕ್ತಿ ತುಂಬಿ ಹಾಡಿಸಮ್ಮ ||2||

 

ಅಲ್ಲಿ ಇಲ್ಲಿ ಓಡೋ ಮನಸು ನನ್ನದಮ್ಮ

ಬೇಗ ಬಂದು ನೆಲೆಸು ಅಲ್ಲಿ ಶಾರದಮ್ಮ

ಬೇರೆ ಏನು ಬೇಕು ಎಂದು ಕೇಳೆನಮ್ಮ ನಿನ್ನ

ಬೇರೆ ಏನು ಬೇಕು ಎಂದು ಕೇಳೆನಮ್ಮ ನಿನ್ನ

ವೀಣೆ ತಂತಿ ಮಾಡಿ ನುಡಿಸು ಶಾರದಮ್ಮ ನನ್ನ

ವೀಣೆ ತಂತಿ ಮಾಡಿ ನುಡಿಸು ಶಾರದಮ್ಮ ||3||

 

ಎಂಥ ಅಂದ ಎಂಥ ಚೆಂದ ಶಾರದಮ್ಮ ನೀನು

ಎಂಥ ಅಂದ ಎಂಥ ಚೆಂದ ಶಾರದಮ್ಮ ನಿನ್ನ

ನೋಡಲೆರಡು ಕಣ್ಣು ನನಗೆ ಸಾಲದಮ್ಮ

ನಿನ್ನ ನೋಡಲೆರಡು ಕಣ್ಣು ನನಗೆ ಸಾಲದಮ್ಮ||

........................................................................................................................................

Also See:

ತಾಯಿ ಶಾರದೆ ಲೋಕ ಪೂಜಿತೆ(TAYI SHARADE LOKA PUJITE) SONG ON LORD SARASWATI- SCHOOL PRAYER LYRICS

ಅಂಜನಾ ನಂದನ ಆಂಜನೇಯ ನಮೋ ನಮೋ (ANJANA NANDANA AANJANEYA )SONG LYRICS IN KANNADA AND ENGLISH

 ಹಾಡಲು ಕಲಿಯಿರಿ(CLICK HERE TO LEARN THIS SONG)

ಅಂಜನಾ ನಂದನ ಆಂಜನೇಯ ನಮೋ ನಮೋ

ಪವನ ತನಯ ನಮೋ ನಮೋ ಪತಿತ ಪಾವನ ನಮೋ ನಮೋ||

 

ರಾಮ ದೂತ ನಮೋ ನಮೋ ರಮ್ಯ ಚರಿತ ನಮೋ ನಮೋ

ಕಾಮ ದುಃಖ ಕಲುಷವಿಘ್ನ ನಾಶಕಾಯ ನಮೋ ನಮೋ||1||

 

ಜ್ಞಾನದಾತ ನಮೋ ನಮೋ ಜ್ಞಾನ ಸಿಂಧು ನಮೋ ನಮೋ

ಸಂಗೀತ ಶಾಸ್ತ್ರ ನಿಪುಣ ಶಂಕರಾಕ್ಷ ನಮೋ ನಮೋ||2||

 

ಬುದ್ಧಿ ದಾತ ನಮೋ ನಮೋ ಯಶೋದಾತ ನಮೋ ನಮೋ

ಶಕ್ತಿದಾತ ನಮೋ ನಮೋ ಶೌರ್ಯದಾತ ನಮೋ ನಮೋ||3||

.........................................................................................................

ANJANA NANDANA AANJANEYA NAMO NAMO

PAVANA TANAYA NAMO NAMO 

PATHITHA PAAVANA NAMO NAMO||


RAMA DOOTHA NAMO NAMO

RAMYA CHARITHA NAMO NAMO

KAAMA DUKHA KALUSHA VIGHNA

NAASHAKAAYA NAMO NAMO||1||


JNAANA DAATHA NAMO NAMO

JNAANA SINDHU NAMO NAMO

SANGEETHA SHAASTRA NIPUNA

SHNKARAAKSHA NAMO NAMO||2||


BUDHIDAATHA NAMO NAMO

YASHODAATHA NAMO NAMO

SHAKTHI DAATHA NAMO NAMO 

SHOURYA DAATHA NAMO NAMO||3||

..........................................................................................................................

Also See:


ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ SONG LYRICS IN KANNADA |VIGHNESHWARA NINAGE PRATHAMA PRANAMA | LORD GANESHA SONGS

  ಹಾಡಲು ಕಲಿಯಿರಿ(CLICK HERE TO LEARN THIS SONG) ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ ಸ್ಮರಿಸುವೆ ನಿನ್ನಯ ದಿವ್ಯ ನಾಮ ॥   ವಿಘ್ನ ವಿನಾಶಕ ಬುದ್ಧಿಪ್ರ...