ಮಂಗನ ಬಾಲ ಒಂದು(ಶಿಶುಗೀತೆ): MANGANA BAALA ONDU RHYMES LYRICS


                                         

                           ಮಂಗನ ಬಾಲ ಒಂದು
                                     (ಶಿಶುಗೀತೆ)


ಮಂಗನ ಬಾಲ ಒಂದು
ಹಸುವಿನ ಕೋಡು ಎರಡು
ಶಿವನ ಕಣ್ಣು ಮೂರು
ಮಂಚಕೆ ಕಾಲು ನಾಲ್ಕು
ಬೆರಳುಗಳು ಐದು
ಋತುಗಳು ಆರು
ವಾರಕೆ ದಿನಗಳು ಏಳು
ದಿಕ್ಕುಗಳು ಎಂಟು
ಗ್ರಹಗಳು ಒಂಬತ್ತು
ರಾವಣನ ತಲೆ ಹತ್ತು

CLICK HERE FOR THE SONG


ಗುರುವೆ ನಾನು ಒಂದು ಸೊನ್ನೆ lyrics- GURUVE NAANU ONDU SONNE LYRICS IN KANNADA AND ENGLISH




ಗುರುವೆ ನಾನು ಒಂದು ಸೊನ್ನೆ


ಗುರುವೆ ನಾನು ಒಂದು ಸೊನ್ನೆ ಸೊನ್ನೆಗೆಲ್ಲಿ ಬೆಲೆಯಿದೆ (2 ಸಲ)
ಸೊನ್ನೆ ಹಿಂದೆ ಇದ್ದರಂಕಿ ಸೊನ್ನೆಗಾಗ ಬೆಲೆಯಿದೆ
ಸೊನ್ನೆಗಾಗ ಬೆಲೆಯಿದೆ||

ಗುರುವೆ ನೀವು ನನ್ನ ಹಿಂದೆ ಅಂಕಿಯಾಗಿ ಬನ್ನಿರಿ(2 ಸಲ)
ಸೊನ್ನೆಯಾದ ನನ್ನ ಬಾಳ್ಗೆ ಬೆಳಕ ತಂದು ತುಂಬಿರಿ(2 ಸಲ) ||1||

ನಿಮ್ಮನಳಿದ  ನನ್ನ ಬದುಕು ನಿಮ್ಮಾಣೆಗು ಶೂನ್ಯವು(2 ಸಲ)
ಅಲ್ಪ ಬುದ್ಧಿ ಅತಿಯಾಸೆ ಅಹಂಕಾರ ಭರಿತವು(2 ಸಲ) ||2||

ಅಂಕಿಯಿದ್ದರೇನೆ ಬೆಲೆಯಿಹುದು ಸೊನ್ನೆಗೆ(2 ಸಲ)
ಹಿಂದೆ ಗುರುವು ಇದ್ದರೇನೇ ಬೆಲೆಯು ನನ್ನ ಇರುವಿಗೆ(2 ಸಲ) ||3||


GURUVE NAANU ONDU SONNE SONNEGELLI BELEYIDE 
SONNE HINDE IDDARANKI SONNEGAAGA BELEYIDE
SONNEGAAGA BELEYIDE||

GURUVE NEEVU NANNA HINDE ANKIYAAGI BANNIRI
SONNEYAADA NANNA BAALGE BELAKA TANDU TUMBIRI||1||

NIMMANALIDA NANNA BADUKU NIMMAANEGU SHOONYAVU
ALPA BUDHI ATHI AASE AHANKAARA BHARITAVU||2||

ANKIYIDDDARENE BELEYIHUDU SONNEGE
HINDE GURUVU IDDARENE BELEYU NANNA IRUVIGE||3||
.....................................................................................................................

Also SEe:


ಹಟ್ಟಿಯಂಗಡಿಯ ವಾಸ ಗಣನಾಯಕ (HATTIANGADIYA VAASA SONG LYRICS IN KANNADA)




ಹಟ್ಟಿಯಂಗಡಿಯ ವಾಸ

ಹಟ್ಟಿಯಂಗಡಿಯ ವಾಸ ಗಣನಾಯಕ
ಮುಟ್ಟಿ ಪೂಜೆ ಮಾಡುವಾಸೆ ವಿನಾಯಕ
ಬಾರೋ ಗಣೇಶ ನಲಿದು ಬಾರೊ ಗಣೇಶ
ಬಾರೋ ಗಣೇಶ ಒಲಿದು ಬಾರೊ ಗಣೇಶ||

ಸಂಕಷ್ಟಿ ದಿನದಲ್ಲಿ ಸಂಕಷ್ಟ ಪರಿಹರಿಸೋ
ಉತ್ತಿಷ್ಥ ಗಣಪತಿ ನೀನಾಗಿ ಬಂದಿರುವೆ
ಭಕ್ತರ ಕಾಮಧೇನು ನಮಗಾಗಿ ನೀನಿರಲು
ನಿತ್ಯವು ನಾಮ ಸ್ಮರಣೆ ಮಾಡುವಾಸೆಯಾಗಿದೆ

ಬಾರೋ ಗಣೇಶ ನಲಿದು ಬಾರೊ ಗಣೇಶ
ಬಾರೋ ಗಣೇಶ ಒಲಿದು ಬಾರೊ ಗಣೇಶ||1||

ಭಾದ್ರಪದ ಶುಕ್ಲಚೌತಿ  ಮನೆ ಮನೆಗೂ ನಿನ್ನ ಮೂರ್ತಿ
ಕೊಂಡೊಯ್ದು ಪೂಜಿಪರು ಜಗವೆಲ್ಲ ನಿನ್ನ ಕೀರ್ತಿ
ಭಕ್ತಿಯ ಹೂ ಹಣ್ಣು ಗರಿಕೇಯ ಅರ್ಪಿಸಲು
ಮುಕ್ತಿಯ ದಾರಿ ತೋರಲೆಂದು ಬರುವ ದೇವನೆ

ಬಾರೋ ಗಣೇಶ ನಲಿದು ಬಾರೊ ಗಣೇಶ
ಬಾರೋ ಗಣೇಶ ಒಲಿದು ಬಾರೊ ಗಣೇಶ||2||

CLICK HERE FOR THE SONG

ಬಾನಿನಲ್ಲಿ ಮೂಡಿ ಬಂದ ಚಂದಮಾಮ(ಶಿಶುಗೀತೆ) : BANINALLI MOODI BANDA SONG LYRICS IN KANNADA



ಬಾನಿನಲ್ಲಿ ಮೂಡಿ ಬಂದ ಚಂದಮಾಮ
(ಶಿಶುಗೀತೆ)


ಬಾನಿನಲ್ಲಿ ಮೂಡಿ ಬಂದ ಚಂದಮಾಮ
ಮೂಡಿ ಬಂದ ಮೂಡಿ ಬಂದ ಚಂದಮಾಮ
ಕತ್ತಲನ್ನು ದೂಡಿ ನಿಂದ ಚಂದ ಮಾಮಾ ||

ಮೋಡದೊಡನೆ ಓಡಿ ಬಂದ ಚಂದಮಾಮ
ಓಡಿ ಬಂದ ಓಡಿ ಬಂದ ಚಂದಮಾಮ
ನಮ್ಮನ್ನು ನೋಡಿ ನಿಂದ ಚಂದ ಮಾಮಾ ||1||

ಮುಗಿಲ ಬೆಟ್ಟವೇರಿ ಬಂದ ಚಂದಮಾಮ
ಏರಿ ಬಂದ ಏರಿ ಬಂದ ಚಂದಮಾಮ
ತಾರೆಗಳನು ಸೇರಿ ನಿಂದ ಚಂದ ಮಾಮಾ ||2||

ತಂಪು ಬೆಳಕು ಬೀರಿ ಬಂದ ಚಂದಮಾಮ
ಬೀರಿ ಬಂದ ಬೀರಿ ಬಂದ ಚಂದಮಾಮ
ಜಗಕೆ ಚೆಲುವ ತೋರಿ ನಿಂದ ಚಂದ ಮಾಮಾ ||3||
....................................................................................

Also See:



ಶಿವ ಶಿವ ಎನ್ನುತ ಹಾಡಲು ಮನದಲಿ (SHIVA SHIVA ENNUTHA HAADALU SONG LYRICS)




ಶಿವ ಶಿವ ಎನ್ನುತ ಹಾಡಲು

ಶಿವ ಶಿವ ಎನ್ನುತ ಹಾಡಲು ಮನದಲಿ
ನೆಮ್ಮದಿ ಕಾಣುವುದು ಸುಖ ಸಮೃದ್ಧಿಕೂಡುವುದು
ಶಿವ ಸ್ಮರಣೆಯ ಮಾಡು ಶಿವ ನಾಮವ ನೀ ಹಾಡು
ಕೈ ಮುಗಿದು ಬೇಡು ಕೈಲಾಸವ ನೀ ನೋಡು||

ಗಂಗಾಜಟಾಧರನು ಶಂಕರ ಪಾರ್ವತಿ ಮನ ಪ್ರಿಯನು (2 ಸಲ)
ದೀನ ರಕ್ಷಕ ದಾನವ ಶಿಕ್ಷಕ ತಾಂಡವ ಭೈರವನು
ಕರುಣಾಳು ಮೂರ್ತಿಯವನು ದಯೆತೋರಿ ಹರಸುತಿಹನು||1||

ನಂದೀಶ ವಾಹನನು ಶಂಕರ ನಾಗಭೂಷಣನು (2 ಸಲ)
ನಿಟಿಲ ಮನೋಹರ ನೀಲಕಂಠಹರ ಅನಾಥ ರಕ್ಷಕನು
ಕರುಣಾಳ ನೋಡಬನ್ನಿ ಸೇನೇಶ್ವರ ಜಯವೆನ್ನಿ||2||

CLICK HERE FOR THE SONG

Also See:

ನೀಡು ಶಿವ ನೀಡದಿರು ಶಿವ(NEEDU SHIVA NEEDADIRU SHIVA) SONG LYRICS IN KANNADA




ನೀಡು ಶಿವ ನೀಡದಿರು ಶಿವ

ನೀಡು ಶಿವ ನೀಡದಿರು ಶಿವ
ಬಾಗುವುದು ಎನ್ನ ಕಾಯ
ನಾನೇಕೆ ಅಂಜಲಿ ನೀ ನನ್ನ ಅಂಬಲಿ
ನೀಡು ಶಿವ ನೀಡದಿರು ಶಿವ
ಬಾಗುವುದು ಎನ್ನ ಕಾಯ||

ಶೃಂಗಾರ ಕೃತಕ ಬಂಗಾರ ಕ್ಷಣಿಕ
ಬಾಳಲ್ಲಿ ಬಡಿವಾರವೇಕೆ(2 ಸಲ)
ನೀನಿತ್ತ ಕಾಯ ನಿನ ಕೈಲಿ ಮಾಯ(2 ಸಲ)
ಆಗೋದು ಹೋಗೋದು ನಾ ಕಾಣೆನೆ||1||

ಮಾಳಿಗೆ ಕೊಟ್ಟರು ಮರದಡಿಯೆ ಇಟ್ಟರೂ
ನಾನಂತೂ ನಿನ್ನನ್ನಲಾರೆ(2 ಸಲ)
ಸಾರಂಗ ಮನಕೆ ನೂರಾರು ಬಯಕೆ(2 ಸಲ)
ಮುಂದಿಟ್ಟು ಉಣಿಸೋದು ನಾ ಕಾಣೆನೆ||2||



ಶ್ರೀ ಗಣೇಶ ಶ್ಲೋಕಗಳು(LORD GANESHA SHLOKAS) LYRICS IN KANNADA




ಶ್ರೀ ಗಣೇಶ ಶ್ಲೋಕಗಳು

1.      ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ|
         ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಷು ಸರ್ವದಾ||

2.   ಅಗಜಾನನ ಪದ್ಮಾರ್ಕಂ ಗಜಾನನಮ್ ಅಹರ್ನಿಶಂ|
         ಅನೇಕದಂ ತಂ ಭಕ್ತಾನಾಂ ಏಕದಂತಂ ಉಪಾಸ್ಮಹೇ||

3.   ಗಜಾನನಂ ಭೂತ ಗಣಾದಿ ಸೇವಿತಂ
         ಕಪಿತ್ಥ ಜಂಬೂಫಲ ಸಾರ ಭಕ್ಷಿತಂ|
         ಉಮಾಸುತಂ ಶೋಕ ವಿನಾಶ ಕಾರಣಂ
         ನಮಾಮಿ ವಿಘ್ನೇಶ್ವರ ಪಾದಪಂಕಜಂ||

    4.ಪ್ರಣಮ್ಯ ಶಿರಸಾ ದೇವಂ ಗೌರಿ ಪುತ್ರಂ ವಿನಾಯಕಂ|
      ಭಕ್ತಾವಾಸಂ ಸ್ಮರೇನ್ನಿತ್ಯಂ ಆಯುಷ್ ಕಾಮಾರ್ಥ ಸಿದ್ಧಯೆ||

..........................................................................................

Also see:

ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ SONG LYRICS IN KANNADA |VIGHNESHWARA NINAGE PRATHAMA PRANAMA | LORD GANESHA SONGS

  ಹಾಡಲು ಕಲಿಯಿರಿ(CLICK HERE TO LEARN THIS SONG) ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ ಸ್ಮರಿಸುವೆ ನಿನ್ನಯ ದಿವ್ಯ ನಾಮ ॥   ವಿಘ್ನ ವಿನಾಶಕ ಬುದ್ಧಿಪ್ರ...