ಹಾಡಲು ಕಲಿಯಿರಿ(CLICK HERE TO LEARN THIS SONG)
ಪೂಜಿಸಲೆಂದೇ ಹೂಗಳ ತಂದೆ
ಪೂಜಿಸಲೆಂದೇ ಹೂಗಳ ತಂದೆ
ದರುಶನ ಕೋರಿ ನಾ ನಿಂದೇ...
ತೆರೆಯೋ ಬಾಗಿಲನು ರಾಮ...
ತೆರೆಯೋ ಬಾಗಿಲನು ರಾಮ||
ಮೋಡದಮೇಲೆ ಚಿನ್ನದ ನೀರು
ಚೆಲ್ಲುತ ಸಾಗಿದೆ ಹೊನ್ನಿನ ತೇರು
ಮಾಣಿಕ್ಯದಾರತಿ ಉಷೆ ತಂದಿಹಳು
ತಾಮಸವೇಕಿನ್ನು ಸ್ವಾಮಿ....
ತೆರೆಯೋ ಬಾಗಿಲನು ರಾಮ ||1||
ಒಲಿದರು ಚೆನ್ನ ಮುನಿದರು ಚೆನ್ನ
ನಿನ್ನಾಸರೆಯೇ ಬಾಳಿಗೆ ಚೆನ್ನ
ನಾ ನಿನ್ನ ಪಾದದ ಧೂಳಾದರೂ ಚೆನ್ನ
ಸ್ವೀಕರಿಸು ನನ್ನಾ...ಸ್ವಾಮಿ
ತೆರೆಯೋ ಬಾಗಿಲನು ರಾಮ ||2||
....................................
No comments:
Post a Comment