ಅಪಾರ ಕೀರ್ತಿ ಗಳಿಸಿ ಮೆರೆವ | kannada song lyrics| APARA KEERTHI GALISI MEREVA SONG LYIRCS| KANNADA FILM SONG

ಹಾಡಲು ಕಲಿಯಿರಿ(CLICK HERE TO LEARN THIS SONG) 


ರಚನೆ: ಆರ್. ಎನ್. ಜಯಗೋಪಾಲ್

ಅರಳೆ ರಾಶಿಗಳಂತೆ ಹಾಲ್ಗಡಲ ಅಲೆಯಂತೆ ಆಗಸದೆ ತೇಲುತಿದೆ ಮೋಡ ನೆರೆನೋಟ ಹರಿದಂತೆ ಪಸರಿಸಿಹ ಗಿರಿಪಂಕ್ತಿ ಹಸಿ ಹಸಿರು ವನರಾಜಿ ನೋಡ

ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು
ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು |

ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು
ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು
ಅಪಾರ ಕೀರ್ತಿಯೇ……

ಮಾತೆ ತುಂಗಭದ್ರೆ ಹರಿಯುತಿಹಳು ಇಲ್ಲಿ
ಮಾನವನ ಪಾಪವನು ತೊಳೆವ ಕಲ್ಪವಲ್ಲಿ
ಮಾನವನ ಪಾಪವನು ತೊಳೆವ ಕಲ್ಪವಲ್ಲಿ||1||

ದೇವ ವಿರೂಪಾಕ್ಷ ಈವ ನಮಗೆ ರಕ್ಷ
ಜೀವಿಗೆ ತಾ ನೀಡುವನು ಧರ್ಮದ ದೀಕ್ಷ
ಜೀವಿಗೆ ತಾ ನೀಡುವನು ಧರ್ಮದ ದೀಕ್ಷ ||2||

ಕಡಿದು ಸುತ್ತಮುತ್ತಲಿದ್ದ ಗೊಂಡಾರಣ್ಯ
ಸ್ಥಾಪಿಸಿದನು ವಿಜಯನಗರ ವಿದ್ಯಾರಣ್ಯ
ಹಕ್ಕಬುಕ್ಕರಾಳಿ ಭವ್ಯತೆಯನು ತಾಳಿ
ದಿಕ್ಕು ದಿಕ್ಕು ಶಾಂತಿ ಸುಖದ ಕಹಳೆಯು ಕೇಳಿ ||3||

................................................................................................................................................... 


No comments:

Post a Comment

ನಿನ್ನೆಡೆಗೆ ಬರುವಾಗ ಸಿಂಗರದ ಹೊರೆಯೇಕೆ? ninnedege baruvaaga | Kuvempu | Kannada bhavagethe lyrics

ಹಾಡಲು ಕಲಿಯಿರಿ(CLICK HERE TO LEARN THIS SONG)   ನಿನ್ನೆಡೆಗೆ ಬರುವಾಗ ಸಿಂಗರದ ಹೊರೆಯೇಕೆ ?  ಸಡಗರದ ಮಾತುಗಳ ಬಿಂಕವೇಕೆ ? ನಿನ್ನ ಮುಂದಿರುವಾಗ ಮಂತ್ರಗಳ...