ಹಾಡಲು ಕಲಿಯಿರಿ(CLICK HERE TO LEARN THIS SONG)
ಸಂತೋಷ ಅಹಾ ಅಹಾ, ಸಂಗೀತ ಒಹೊ ಒಹೊ,
ರಸಮಯ ಸಂತೋಷ, ಸುಖಮಯ ಸಂಗೀತ
ಹೊಸ ಹೊಸ ಭಾವ ತುಂಬಿ ನಸು ನಗೆ ಹೊಮ್ಮಿ ಚಿಮ್ಮಿ,
ಮೈ ತುಂಬಿದೇ..||
ಏಳು ಸ್ವರಗಳ ಭಾವಗೀತೆಯ ಸಂಗೀತಾ,
ಏಳು ಬಣ್ಣದ ಭೂಮಿ ಧಮನಿಗೆ ಸಂತೋಷ
ರಾಗ ಸಂಗೀತ, ಗೆಲುವಿನ ಯೋಗ ಸಂತೋಷ,
ರಾಗ ಸಂಗೀತ..ಗೆಲುವಿನ ಯೋಗ ಸಂತೋಷ,
ಹಾದಿಗೆಲ್ಲಾ, ಹೂವುಚೆಲ್ಲಿ,
ಹಾದಿಗೆಲ್ಲಾ ಹೂವುಚೆಲ್ಲಿ ಓಡಿ ಓಡಿ ಸಾಗುವಲ್ಲಿ
ಹಾಡಿ ಹಾಡಿ ಮೂಡಿಬಂತು ಏನೋ ಮೋಡಿ..||1||
ಜುಳು ಜುಳು ಹರಿಯುವ ನೀರಿನ ಅಲೆಗಳ ಸಂಗೀತ,
ಸುಯಿ ಸುಯಿ ಎನ್ನುತ
ಬೀಸುವ ಗಾಳಿಗೆ ಸಂತೊಷ
ಸ್ವರ್ಗ ಸಂಗೀತಾ ನಿಸರ್ಗ ಸಂತೊಷ
ಸ್ವರ್ಗ ಸಂಗೀತಾ...ನಿಸರ್ಗ ಸಂತೊಷ,
ಸನ್ನೆ ಮಾಡಿ, ಕಯ್ಯ ಬೀಸಿ,
ಸನ್ನೆಮಾಡಿ ಕಯ್ಯ ಬೀಸಿ ಗುಟ್ಟುಹೇಳಿ ಬೆಟ್ಟಸಾಲು
ಹಾಡಿಹಾಡಿ ಹೇಳಿಬಂತು, ಏನೋಮೊಡೀ. ||2||
ಕದ್ದು ಹಾಡುವ ಕೋಗಿಲೆ ಕೊರಳಿನ ಸಂಗೀತ,
ಮುದ್ದು ಜಿಂಕೆಗೆ
ಜಿಗಿದು ನೆಗೆಯುವ ಸಂತೊಷ.
ನಾದ ಸಂಗೀತಾ...ಉನ್ಮಾದ ಸಂತೊಷ,
ನಾದ ಸಂಗೀತಾ...ಉನ್ಮಾದ ಸಂತೊಷ,
ಗುಬ್ಬಿ ಹಕ್ಕಿ, ಬಾಚಿ ಬಾಚಿ,
ಗುಬ್ಬಿ ಹಕ್ಕಿ ಬಾಚಿ ಬಾಚಿ ಹಾಕಿದೆಂದು ಹೊಲದಲ್ಲಿ
ಹಾಡಿಹಾಡಿ ಓಡಿಬಂತು ಏನೋಮೊಡೀ||3||
………………………………………………………………………………………….
No comments:
Post a Comment