ಹಾಡಲು ಕಲಿಯಿರಿ(CLICK HERE TO LEARN THIS SONG)
ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ
ಇಂದೇತಕೊ ನಾನಿನ್ನಲಿ ಬೆರೆವಂಥ ಮನಸಾಗಿದೆ|
ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ
ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ ||
ಬಾಳಲ್ಲಿ ನೀ ಬರೆದೆ ಕಣ್ಣೀರ ಕಾದಂಬರಿ
ಕಲ್ಲಾದ ಹೃದಯಕ್ಕೆ ಏಕಾದೆ ನೀ ಮಾದರಿ
ಉಸಿರಾಗುವೆ ಎಂದ ಮಾತೆಲ್ಲಿದೆ
ಸಿಹಿ ಪ್ರೇಮವೆ ಇಂದು ವಿಷವಾಗಿದೆ
ಹುಸಿ ಪ್ರೀತಿಯ ನಾ ನಂಬಿದೆ
ಮಳೆಬಿಲ್ಲಿಗೆ ಕೈ ಚಾಚಿದೆ
ಒಲವೆ ಚೆಲುವೆ ನನ್ನ ಮರೆತು ನಗುವೆ ||ನೀ ಮೀಟಿದ||
ಹಗಲೇನು ಇರುಳೇನು ಮನದಾಸೆ ಮರೆಯಾಗಿದೆ
ಸಾವೇನು ಬದುಕೇನು ಏಕಾಂಗಿ ನಾನಾಗಿರೆ
ನಾ ಬಾಳುವೆ ಕಂದ ನಿನಗಾಗಿಯೆ
ಈ ಜೀವನ ನಿನ್ನ ಸುಖಕಾಗಿಯೆ
ನನ್ನಾಸೆಯ ಹೂವಂತೆ ನೀ
ಇರುಳಲ್ಲಿಯೂ ಬೆಳಕಂತೆ ನೀ
ನಗುತ ಇರು ನೀ ನನ್ನ ಪ್ರೀತಿ ಮಗುವೆ ||ನೀ ಮೀಟಿದ||
...............................................
No comments:
Post a Comment