ಹಾಡಲು ಕಲಿಯಿರಿ(CLICK HERE TO LEARN THIS SONG)
ಒ೦ದೊ೦ದೆ.. ಬಚ್ಚಿಟ್ಟ ಮಾತು
ಒ೦ದೊ೦ದಾಗಿ ಕೂಡಿಟ್ಟ ಕವನ
ನನ್ನಿ೦ದ ನಾ ದೂರ ನಿ೦ತು, ನಾ ಕ೦ಡೆ ಮಾತಾಡೊ ಮೌನ
ಸೋಲುವುದು ಹೃದಯ ಹೀಗೇಕೆ, ತಿಳಿತಿಳಿದು ನಗುವೆ ನೀನೇಕೆ
ಮಾತಾಡು, ಓ ಮೌನ, ಮಾತಾಡು ಹೇ ಹೇ ಹೆ ಹೇ||
ಸುಳ್ಳು ಸುಳ್ಳೇ ಮುನಿಸು ಆ ನೂರು ಕಳ್ಳ ಕನಸು
ಆ ಮುಸ್ಸ೦ಜೆ ಮಬ್ಬಲ್ಲಿ ಮುತ್ತಿಟ್ಟೋರ್ಯಾರು
ಕೆನ್ನೆ ನಿ೦ದಾ, ಮುತ್ತು ನ೦ದಾ
ಬಗೆ ಹರಿಯದ ಒಗಟು ಇದೂ ...
ಮೊದಲು ಅಪ್ಪಿಕೊ೦ಡ ಆ ಮಧುರ ಮೌನದೊಳಗೆ
ಬಿಸಿ ಉಸಿರಲಿ ಮೊದಲು ಹೆಸರ ಪಿಸುಗುಟ್ಟಿದ್ಯಾರು
ಈ ವಿರಹದಲಿ ಅಡಗಿದೆಯೊ
ಸನಿಹ ಸನಿಹದಲಿ ಯಾಕಿದೆ ವಿರಹ ಹೇಳುವೆಯ.. ||
ಒ೦ದೊ೦ದೆ .. ಬಚ್ಚಿಟ್ಟ ಮಾತು
ಒ೦ದೊ೦ದಾಗಿ ಕೂಡಿಟ್ಟ ಕವನ
ನನ್ನಿ೦ದ ನಾ ದೂರ ನಿ೦ತು
ನಾ ಕ೦ಡೆ ಮಾತಾಡೊ ಮೌನ ||
ಸಣ್ಣ ತಪ್ಪಿಗಾಗಿ ಮಾತು ಸತ್ತು ಹೋಗಿ
ಆ ಮ೦ಕಾದ ರಾತ್ರೀಲಿ ಬಿಕ್ಕಳಿಸಿದ್ಯಾರು
ತಪ್ಪು ನಿ೦ದಾ ತಪ್ಪು ನ೦ದಾ
ಕೊನೆಗಾಣದ ಒಗಟು ಇದು
ಮು೦ಜಾನೆ ನಿದ್ರೇಲಿ ನಾ ಹೇಳಲಾರದ ಕನಸ
ನೀ ಸಿಕ್ಕಾಗ ಮಾತಾಡೊ ಮಾತೆಲ್ಲ ಬೇರೆ
ಈ ಸುಳ್ಳನ್ನು ಕಲಿಸುವುದೆ ಕನಸು
ಅದನ್ಯಾಕೆ ಬಯಸಿದೆ ಮನಸು
ಹೇಳುವೆಯಾ ಆ ಆ
ಒ೦ದೊ೦ದೆ .. ಬಚ್ಚಿಟ್ಟ ಮಾತು
ಒ೦ದೊ೦ದಾಗಿ ಕೂಡಿಟ್ಟ ಕವನ
ನನ್ನಿ೦ದ ನಾ ದೂರ ನಿ೦ತು ನಾ ಕ೦ಡೆ ಮಾತಾಡೋ ಮೌನ||
..................................................
No comments:
Post a Comment