ತವರೂರ ಮನೆ ನೋಡ ಬಂದೆ
ತಾಯಿ ನೆನಪಾಗಿ ಕಣ್ಣೀರ ತಂದೆ|
ಹತ್ತು ಹದಿನಾಲ್ಕು ವರುಷಗಳ ಹಿಂದೆ
ಹೆತ್ತ ತಾಯಿ ತಂದೆ ಪ್ರೀತಿಹಿಂದೆ
ಮುತ್ತಿನಂತೆ ಜೋಪಾನವಾಗಿ ಬಾಳಿದೆ
ಅದು ಎತ್ತ ಹೋದರೂ ಕನಸಾಗಿದೆ ||
ಬಾಗಿಲ ಮುಂದೆ ರಂಗೋಲಿ
ಬಾಗಿ ಇಡುತ್ತಿದ್ದೆ ನಾನಾ ತರದಲ್ಲಿ
ಅದು ಹೇಗೆ ಮರೆಯಲಿ ಮನಸಲ್ಲಿ
ಅದು ಮರೆಯದು ಈ ಬಾಳಿನಲ್ಲಿ ||
ಅತ್ತಿಗೆ ಕೈ ಗೊಂಬೆ ಅಣ್ಣ
ಎತ್ತಿ ಮುದ್ದಾಡಿದ ತಂಗಿ ಮರೆತ
ಅಣ್ಣ ಕಣ್ಣೆತ್ತಿ ಸಹ ನೋಡಬಾರದೇ
ತಂಗಿ ಬಾರಮ್ಮ ಇತ್ತ ಎನ್ನಬಾರದೆ|
ಅಣ್ಣನ ಹೆಂಡತಿ ನೋಡಿ
ಕಣ್ಣ ಸನ್ನೆ ಮಾಡಿದಳೆನ್ನ ನೋಡಿ
ಅಣ್ಣ ಮಾತನಾಡಿಸದವಳ ಸೇರಿದ
ತನ್ನ ಸಿರಿಯಲ್ಲೇ ತಾನೊಡಗೂಡಿದ||
ಶಿವನೆ ನಾ ಕೈ ಮುಗಿದು ಬೇಡುವೆ
ಸಿರಿ ಸಂಪತ್ತು ಕೊಡು ನಮ್ಮಣ್ಣಗೆ
ತಾಯಿ ಜಗದಂಬೆ ಕೈಮುಗಿದು ಬೇಡುವೆ
ಕಾಯಿ ಕರ್ಪುರದಾರತಿ ಬೆಳಗುವೆ
.............................................................................................................
No comments:
Post a Comment