ಜೇನಿನ ಹೊಳೆಯೊ ಹಾಲಿನ ಮಳೆಯೊ SONG LYRICS IN KANNADA | DR.RAJKUMAR SONGS| JENINA HOLEYO SONG LYRICS |

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ:  ಶ್ರೀನಿವಾಸ್ ರಾವ್

ಜೇನಿನ ಹೊಳೆಯೊ ಹಾಲಿನ ಮಳೆಯೊ

ಸುಧೆಯೊ ಕನ್ನಡ ಸವಿ ನುಡಿಯೊ....

ಜೇನಿನ ಹೊಳೆಯೊ ಹಾಲಿನ ಮಳೆಯೊ

ಸುಧೆಯೊ ಕನ್ನಡ ಸವಿ ನುಡಿಯೊ....

ವಾಣಿಯ ವೀಣೆಯ ಸ್ವರಮಾಧುರ್ಯವೋ

ಸುಮಧುರ ಸುಂದರ ನುಡಿಯೊ ಆಹಾ.. ||

 

ಕವಿನುಡಿ ಕೋಗಿಲೆ ಹಾಡಿದ ಹಾಗೆ 

ದಪದ ….ರಿಸರಿ…. ಗಾಗಾಪಪದಸರಿದಸ

ಸವಿ ನುಡಿ ತಣ್ಣನೆ ಗಾಳಿಯ ಹಾಗೆ....

ಕವಿ ನುಡಿ ಕೋಗಿಲೆ ಹಾಡಿದ ಹಾಗೆ 

ಸವಿ ನುಡಿ ತಣ್ಣನೆ ಗಾಳಿಯ ಹಾಗೆ....

ಒಲವಿನ ಮಾತುಗಳಾಡುತಲಿರಲು,

ಮಲ್ಲಿಗೆ ಹೂಗಳು ಅರಳಿದ ಹಾಗೆ

ಮಕ್ಕಳು ನುಡಿದರೆ ಸಕ್ಕರೆಯಂತೆ

ಅಕ್ಕರೆ ನುಡಿಗಳು ಮುತ್ತುಗಳಂತೆ

ಪ್ರೀತಿಯ ನೀತಿಯ ಮಾತುಗಳೆಲ್ಲ

ಸುಮಧುರ ಸುಂದರ ನುಡಿಯೊ…..||1||

 

ಕುಮಾರವ್ಯಾಸನ ಕಾವ್ಯದ ಚೆಂದ

ಕವಿ ಸರ್ವಜ್ಞನ ಪದಗಳ ಅಂದ

ಕುಮಾರವ್ಯಾಸನ ಕಾವ್ಯದ ಚೆಂದ

ಕವಿ ಸರ್ವಜ್ಞನ ಪದಗಳ ಅಂದ

ದಾಸರು ಶರಣರು ನಾಡಿಗೆ ನೀಡಿದ

ಭಕ್ತಿಯ ಗೀತೆಗಳ ಪರಮಾನಂದ

ರನ್ನನು ರಚಿಸಿದ ಹೊನ್ನಿನ ನುಡಿಯು

ಪಂಪನು ಹಾಡಿದ ಚಿನ್ನದ ನುಡಿಯು

ಕನ್ನಡ ತಾಯಿಯು ನೀಡಿದ ವರವು

ಸುಮಧುರ ಸುಂದರ ನುಡಿಯೊ ||2||

.....................................................................................................................................................

ದೇವಿ ನಮ್ಮ ದ್ಯಾವರು ಬಂದರು |DEVI NAMMA DYAVARU BANDARU SONG LYRICS |KANAKADASA SONGS|

 ಹಾಡಲು ಕಲಿಯಿರಿ(CLICK HERE TO LEARN THIS SONG)

ಕನಕದಾಸರಿಂದ ರಚಿತವಾದ ದಶಾವತಾರದ ಪದ

ದೇವಿ ನಮ್ಮ ದ್ಯಾವರು ಬಂದರು ಬನ್ನೀರೆ, ನೋಡ ಬನ್ನಿರೆ ||ಪ||

 

ಕೆಂಗಣ್ಣ ಮೀನನಾಗಿ ನಮ ರಂಗ ಗುಂಗಾಡು ಸೋಮನ ಕೊಂದಾನ್ಮ್ಯಾ|

ಗುಂಗಾಡು ಸೋಮನ ಕೊಂದು ವೇದವ ಬಂಗಾರದೊಡಲನಿಗಿತ್ತಾನ್ಮ್ಯಾ||1||

 

ದೊಡ್ಡ ಮಡುವಿನೊಳಗೆ ನಿಂತು ನಮ ರಂಗ ಗುಡ್ಡವ ಹೊತ್ಕೊಂಡು ನಿಂತಾನ್ಮ್ಯಾ|

ಗುಡ್ಡವ ಹೊತ್ಕೊಂಡು ನಿಂತು ಸುರರನು ದೊಡ್ಡವರನ್ನ ಮಾಡ್ಯಾನ್ಮ್ಯಾ ||2||

 

ಚೆನ್ನ ಕಾಡಿನ ಹಂದಿಯಾಗಿ ನಮ ರಂಗ ಚಿನ್ನದ ಕಣ್ಣನ ಕೊಂದಾನ್ಮ್ಯಾ

ಚಿನ್ನದ ಕಣ್ಣನ ಕೊಂದು ಭೂಮಿಯ ವನ್ನಜ ಸಂಭವಗಿತ್ತಾನ್ಮ್ಯಾ ||3||

 

ಸಿಟ್ಟಿಲಿಂದ ಸಿಂಹನಾಗಿ ನಮ ರಂಗ ಹೊಟ್ಟೆಯ ಕರುಳ ಬಗೆದಾನ್ಮ್ಯಾ |

ಹೊಟ್ಟೆಯ ಕರುಳ ಹಾರವ ಮಾಡಿ ಪುಟ್ಟಗೆ ವರವ ಕೊಟ್ಟಾನ್ಮ್ಯಾ||4||

 

ಹುಡುಗ ಹಾರುವನಾಗಿ ನಮ ರಂಗ ಬೆಡಗಲಿ ಮುಗಿಲಿಗೆ ಬೆಳೆದಾನ್ಮ್ಯಾ|

ಬೆಡಗಲಿ ಮುಗಿಲಿಗೆ ಬೆಳೆದು ಬಲಿಯನ್ನ ಅಡಿಯಿಂದ ಪಾತಾಳಕೊತ್ತ್ಯಾನ್ಮ್ಯಾ|| 5||

 

ತಾಯ ಮಾತನು ಕೇಳಿ ಸಾಸಿರ ತೋಳಿನ ಆವಿನ ಕಳ್ಳನ ಕೊಂದಾನ್ಮ್ಯಾ|

ಆವಿನ ಕಳ್ಳನ ಕೊಂದು ಭೂಮಿಯ ಅವನಿಸುರರಿಗೆ ಇತ್ತಾನ್ಮ್ಯಾ|| 6||

 

ಪಿಂಗಳ ಕಣ್ಣಿನ ಕೊಂಗಗಳ ಕೂಡಿ ಛಂಗನೆ ಲಂಕೆಗೆ ಪೋದಾನ್ಮ್ಯಾ|

ಛಂಗನೆ ಲಂಕೆಗೆ ಪೋಗಿ ನಮ ರಂಗ ಹೆಂಗಸುಗಳ್ಳನ ಕೊಂದಾನ್ಮ್ಯಾ||7||

 

ಕರಿಯ ಹೊಳೆಯ ಬಳಿ ತುರುಗಳ ಕಾಯುತ ಉರಗನ ಮಡುವ ಧುಮುಕ್ಯಾನ್ಮ್ಯಾ|

ಉರಗನ ಹೆಡೆ ಮೇಲೆ ಹಾರ್ಹಾರಿ ಕುಣಿವಾಗ ನಾರೇರ್ಗೆ ವರವ ಕೊಟ್ಟಾನ್ಮ್ಯಾ ||8||


ಭಂಡನಂದದಿ ಕುಂಡೆಯ ಬಿಟುಗೊಂಡು ಕಂಡ ಕಂಡಲ್ಲಿಗೆ ತಿರುಗ್ಯಾನ್ಮ್ಯಾ|

ಕಂಡ ಕಂಡಲ್ಲಿಗೆ ತಿರುಗಿ ತ್ರಿಪುರರ ಹೆಂಡಿರನೆಲ್ಲ ಕೆಡಿಸ್ಯಾನ್ಮ್ಯಾ ||9||


ಚೆಲುವ ಹೆಂಡತಿಯ ಕುದುರೆಯ ಮಾಡಿ ಒಳ್ಳೆಯ ರಾಹುತನಾದಾನ್ಮ್ಯಾ|

 ಒಳ್ಳೆಯ ರಾಹುತನಾಗಿ ಮ್ಲೇಚ್ಛರಡೊಳ್ಳು ಹೊಟ್ಟೆಯ ಮ್ಯಾಲೆ ಒದ್ದಾನ್ಮ್ಯಾ ||10||

 

ಡೊಳ್ಳಿನ ಮ್ಯಾಲ್ ಕೈಯ ಭರಮಪ್ಪ ಹಾಕ್ಯಾನ ತಾಳವ ಶಿವನಪ್ಪ ತಟ್ಟಾನ್ಮ್ಯಾ|

ಒಳ್ಳೊಳ್ಳೆ ಪದಗಳ ಹನುಮಪ್ಪಾ ಹಾಡ್ಯನ ಚೆಲುವ ಕನಕಪ್ಪ ಕುಣಿದಾನ್ಯ ||11||

.............................................................................................................................................................

ಈ ನಾಡು ನನ್ನದು ಈ ಭಾಷೆ ನನ್ನದು song lyrics | EE NAADU NANNADU EE BHAASHE NANNADU | ಕನ್ನಡ ರಾಜ್ಯೊತ್ಸವ ಗೀತೆ

 ಹಾಡಲು ಕಲಿಯಿರಿ(CLICK HERE TO LEARN THIS SONG)


ರಚನೆ: ಸುವರ್ಣ ನಾಗರಾಜ್ ಶಾಸ್ತ್ರಿ

 

ಈ ನಾಡು ನನ್ನದು ಈ ಭಾಷೆ ನನ್ನದು

ಈ ನಮ್ಮ ಕನ್ನಡದ ಜನ್ಮ ದೊಡ್ಡದೂ

ಹಾಡು ಬಾರ ಕನ್ನಡಕೆ ಸಾಟಿಯಿಲ್ಲವೆಂದು

ಹಳದಿ ಕೆಂಪಿನ ಕನ್ನಡಾದ ಬಾವುಟವ ಹಿಡಿದು

ಸಿರಿಗನ್ನಡಂ ಗೆಲ್ಗೆಸಿರಿಗನ್ನಡಂ ಬಾಳ್ಗೆ

                                          

ಕಲೆಯನು ಶಿಲೆಯಲಿ ಬೆಳೆಸಿದ ನಾಡು ಕನ್ನಡ

ಸಾರಿದೆ ನೋಡು ನಮ್ಮಯ ಸಂಸ್ಕೃತಿ ಕನ್ನಡ

ಕಾವೇರಿ ತುಂಗೆಯು ಹರಿಯುವ ನಾಡು ಕನ್ನಡ

ಗಂಧದ ನಾಡಿದು ಚೆಂದದ ಬೀಡಿದು ಕನ್ನಡ ||1||

 

ಜೋಗದ ಸಿರಿಯಲಿ ಮೆರೆದ ವೈಭವದ ಕನ್ನಡ

ಹಸಿರೆರೆದು ನಾಡಿಗೆ ಜೀವ ತುಂಬಿದ ಕನ್ನಡ

ಸಾಹಿತ್ಯ ಮೆರೆಯುವ ಭವ್ಯದ ನಾಡು ಕನ್ನಡ

ಮಾನವೀಯತೆಗೆ ಸಾಕ್ಷಿಯ ನೀಡುವ ಕನ್ನಡ||2||

 

……………………………………………………………………………………………………


ಕರ್ನಾಟಕ ಬರಿ ನಾಡಲ್ಲ, ನಮ್ಮ ಸಂಸ್ಕೃತಿಯ ಧಾತು SONG LYRICS IN KANNADA |KANNADA RAJYOTSAVA SONGS |ರಚನೆ: ಬಿ ಆರ್. ಲಕ್ಷ್ಮಣರಾವ್

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ: ಬಿ ಆರ್. ಲಕ್ಷ್ಮಣರಾವ್


ಕರ್ನಾಟಕ ಬರಿ ನಾಡಲ್ಲ, ನಮ್ಮ ಸಂಸ್ಕೃತಿಯ ಧಾತು

ಕನ್ನಡ ಕೇವಲ ನುಡಿಯಲ್ಲ, ನಮ್ಮಂತರಂಗದಾ ಮಾತು||

 

ಕಂಗೊಳಿಸುವ ಬರಿ ಗಿರಿಯಲ್ಲ ಸಹ್ಯಾದ್ರಿಯ ಸಾಲು,

ಹೊಮ್ಮಿದೆ ಸಲಹುವ ಅಮ್ಮನೆದೆ ಊಡಲೆಮಗೆ ಹಾಲು|

ಬರಿನೆರೆ ನುಗ್ಗುವ ನೀರಲ್ಲ ಕೃಷ್ಣ ಕಾವೇರಿ ತುಂಗಾ

ಧಮನಿ ಧಮನಿಯಲಿ ಹರಿವ ಚೇತನ, ಕಣ್ಣ ಬೆಳಕು ನಮಗೆ||೧||

 

ಪಂಪ ಕುಮಾರವ್ಯಾಸರೆಂದರೆ ಅಲ್ಲ ಕವಿಗಳು ಮಾತ್ರ

ಇಂದೂ ಕನ್ನಡ ಕಾವ್ಯ ಮಾಲೆಗೆ ಅವರೇ ಅಂತಃಸೂತ್ರ|

ಶಿಲ್ಪ ಕಲೆಯ ಬರಿ ಬಲೆಯಲ್ಲ ಹಳೇಬೀಡು ಬೇಲೂರು

ನಮ್ಮ ಬೇರನ್ನು ತೋರುತ್ತಿದೆ, ಅಲ್ಲೇ ನಮ್ಮ ತಲೆಮಾರು|| ೨||

...................................................................................

ಕನ್ನಡ ರಾಜ್ಯೋತ್ಸವ ಗೀತೆಗಳು

ಯೆಂಡ ಯೆಂಡ್ತಿ ಕನ್ನಡ ಪದಗೋಳ್ | ಜಿ ಪಿ ರಾಜರತ್ನಂ | SONG LYRICS IN KANNADA | YENDA YENDTHI KANNADA PADAGOL

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ: ಜಿ ಪಿ ರಾಜರತ್ನಂ

 

ಯೆಂಡ ಯೆಂಡ್ತಿ ಕನ್ನಡ ಪದಗೋಳ್ ಅಂದ್ರೆ ರತ್ನಂಗ್ ಪ್ರಾಣ

ಬುಂಡೇನ್ ಎತ್ತಿ ಕುಡ್ದ್ ಬುಟ್ಟಾಂದ್ರೆ ತಕ್ಕೊ ಪದಗೋಳ್ ಬಾಣಾ॥

 

ಭಗವಂತ್ ಏನ್ರ ಬೂಮೀಗ್ ಇಳಿದು ನನ್ ತಾಕ್ ಬಂದಾಂತನ್ನು

ಪರ್ ಗೀರೀಕ್ಷೆ ಮಾಡ್ತಾನವ್ನು ಭಕ್ತನ್ ಮೇಲವ್ನ್ ಕಣ್ಣು ||

 

ಯೆಂಡ ಕುಡಿಯೊದ್ ಬುಟ್ಬುಡ್ ರತ್ನ ಅಂತವ್ನ್ ಯೇನಾರ್ ಅಂದ್ರೆ

ಮೂಗ್ ಮೂರ್ ಚೂರಾಗ್ ಮುರ್ಸ್ಕೊಂತೀನಿ ದೇವ್ರು ಮಾತ್ಗಡ್ ಬಂದ್ರೆ ||

 

ಯೆಂಡ ಬುಟ್ಟೇ ಯೆಂಡ್ತೀನ್ ಬುಟ್ಬುಡ್ ರತ್ನ ಅಂತೌನ್ ಏನಾರ್ ಅಂದ್ರೆ

ಕಳ್ದೋಯ್ತ್ ಅಂತಾ ಕುಣ್ದಾಡ್ತೀನಿ ದೊಡ್ದೊಂದ್ ಕಾಟಾ ತೊಂದ್ರೆ ||

 

ಕನ್ನಡ್ ಪದಗೋಳ್ ಆಡೋದ್ನೆಲ್ಲ ನಿಲ್ಲೀಸ್ ಬುಡ್ಬೇಕ್ ರತ್ನ

ಅಂತವ್ನಂದ್ರೆ ದೇವ್ರಾದ್ರೇನು ಮಾಡ್ತೀನ್ ಅವ್ಂಗೆ ಖತ್ನ॥

 

ಆಗ್ನೆ ಮಾಡೋ ಐಗೋಳೆಲ್ಲಾ ದೇವ್ರೇ ಆಗ್ಲಿ ಎಲ್ಲಾ

ಕನ್ನಡ ಸುದ್ದಿಗೇನ್ರಾ ಬಂದ್ರೆ ಮಾನಾ ಉಳ್ಸಾಕಿಲ್ಲಾ ||

 

ನರಕಕ್ಕ್ ಇಳ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲ್ಸಾಕಿದ್ರೂನೆ

ಮೂಗ್ನಲ್ ಕನ್ನಡ ಪದವಾಡ್ತೀನಿ ನನ್ ಮನ್ಸನ್ ನೀ ಕಾಣೆ॥

 

ಯೆಂಡ ಓಗ್ಲಿ ಯೆಂಡ್ತಿ ಓಗ್ಲಿ ಎಲ್ಲಾ ಕೊಚ್ಕೊಂಡ್ ಓಗ್ಲಿ

ಪರ್ಪಂಚ್ ಇರೋ ತನಕಾ ಮುಂದೆ ಕನ್ನಡ ಪದಗೋಳ್ ನುಗ್ಲೀ ||

…………………………………………………………………………………………

ಕನ್ನಡ ರಾಜ್ಯೋತ್ಸವ ಗೀತೆಗಳು

ಎಲ್ಲಿ ಎಲ್ಲಿ ರಮ್ಯ ತಾಣ ಅಲ್ಲಿ ನಿನಗೆ ವಂದನ song lyrics in kannada | ಕೆ ಎಸ್ ನಿಸಾರ್ ಅಹಮದ್ | ELLI ELLI RAMYA TAANA

 

ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ: ಕೆ ಎಸ್ ನಿಸಾರ್ ಅಹಮದ್

 

ಎಲ್ಲಿ ಎಲ್ಲಿ ರಮ್ಯ ತಾಣ ಅಲ್ಲಿ ನಿನಗೆ ವಂದನ

ಎಲ್ಲಿ ಎಲ್ಲಿ ಪುಣ್ಯಧಾಮ ಹೂ ಧವನ ಚಂದನ ॥

 

ತುಂಗೆ ಕೃಷ್ಣೆ ಕಾವೇರಿ ನಿನ್ನ ಪ್ರಾಣ ಸ್ಪಂದನ

ಹರಿದ್ವರ್ಣ ತರು ಸುಪರ್ಣ ವಿಪಿನ ಸ್ವಪ್ನ ನಂದನ ।

ಪಶ್ಚಿಮಾದ್ರಿ ದರಿ ತಟಾಕ ಘಟ್ಟ ನಾಕ ಸದೃಶ

ಬಯಲು ಸೀಮೆ ತೆನೆ ಸುಭಿಕ್ಷ ಕಲ್ಪವೃಕ್ಷ ಪರವಶ ॥ ಎಲ್ಲಿ ಎಲ್ಲಿ ರಮ್ಯ ತಾಣ||

 

ಬಸದಿ ಚರ್ಚು ಗುಡಿ ಮಸೀದಿ ಅಗ್ಗಳಿಕೆಯ ಕೇತನ

ಬಾಣವೆಂದು ಸತ್ಯದೆಡೆಗೆ ಬತ್ತಳಿಕೆ ಸಚೇತನ ।

ಕಾಪಾಲಿಕ ಲಕುಲ ಶಕ್ತಿ ನಾಗಪಂಥ ಸರಿ ಸಮ

ಅಂತೆ ಜಿನ ಕಬೀರ ಸಂತ ಎಲ್ಲರಿಗು ನಮೋ ನಮ ॥ ಎಲ್ಲಿ ಎಲ್ಲಿ ರಮ್ಯ ತಾಣ||

 

ಸುಸಂಸ್ಕಾರ ಸಂಪನ್ನಳು ಕನ್ನಡಾಂಬೆ ಧನ್ಯಳು

ವಿವಿಧ ಜನ ಅನನ್ಯೆ ಮಾನ್ಯೆ ಸಚ್ಚಿದಂಶ ಜನ್ಯಳು

ರತ್ನದಂತೆ  ಕಂದರಮಿತ ಪ್ರತಿಭಾ ಪ್ರಭೆ ಹಬ್ಬಲಿ

ನುಡಿಪ ರಾಗ ಅತಿ ಸರಾಗ ವಿಶ್ವವನ್ನೆ ತಬ್ಬಲಿ ॥ ಎಲ್ಲಿ ಎಲ್ಲಿ ರಮ್ಯ ತಾಣ||

………………………………………………………………….

ಕನ್ನಡ ರಾಜ್ಯೋತ್ಸವ ಗೀತೆಗಳು

ಬೆಳಗುವೆವು ನಿನಗೆ ಆರತಿ |ಕನ್ನಡ ರಾಜ್ಯೋತ್ಸವ | BELAGUVEVU AARATI NINAGE SONG LYRICS IN KANNADA

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ:ಡಾ . ಕೋ.ವೆಂ . ರಾಮಕೃಷ್ಣೇಗೌಡ


ಬೆಳಗುವೆವು ನಿನಗೆ ಆರತಿ ಕನ್ನಡತಿ...ಸಾರುತ ನಿನ್ನ ಕೀರುತಿ

ಬೆಳಗುವೆವು ನಿನಗೆ ಆರತಿ ಕನ್ನಡತಿ...ಸಾರುತ ನಿನ್ನ ಕೀರುತಿ

 

ನಿನ್ನೊಡಲಲಿ ಧರಿಸಿಹ ಸಿರಿ ನಿನ್ನ ಮುಡಿಯ ಆ ಐಸಿರಿ

ಪರರಿಗೆ ಬೆರಗು...

ಪರರಿಗೆ ಬೆರಗು ನಮಗದು ಮೆರುಗು ಕೂಡಿ ಎಲ್ಲ ಸುತರೂ... ॥ಬೆಳಗುವೆವು॥

 

ಅಂಗಳದಿ ಆಡಿ ನಲಿವ ಎಳೆಯರು ಮಂಗಳಕೆ ದುಡಿಯುತಿಹ ಗೆಳೆಯರು

ಅಳಲದೇ.... ಬಳಲದೇ...

ಅಳಲದೆ ಬಳಲದೆ ಕೂಡಿ ಹಾಡಿ ಒಲಿವ ಪರಿಯ ನೆನೆ ನೆನೆದು॥ಬೆಳಗುವೆವು॥

 

ಕಲಿತವರು ಬಲಿತವರು ಬಾಳ ಬುತ್ತಿಯ ಹೊತ್ತವರು

ಭ್ರಷ್ಟರು......

ಭ್ರಷ್ಟರು...... ನಿಕೃಷ್ಟರು ಸನ್ಮಾರ್ಗದಿ ನಡೆಯಲೆಂದು ॥ಬೆಳಗುವೆವು॥

……………………………………………………………………………….

ಕನ್ನಡ ರಾಜ್ಯೊತ್ಸವ ಗೀತೆಗಳು

ಮಳೆಯ ದಯಮಾಡೊ ಶ್ರೀರಂಗಾ ನಿಮ್ಮ | Lyrics |ಹೆಳವನಕಟ್ಟೆ ಗಿರಿಯಮ್ಮ | maleya dayamaado shree ranga | helavana katte giriyamma

  ಹಾಡಲು ಕಲಿಯಿರಿ(CLICK HERE TO LEARN THIS SONG) ಮಳೆಯ ದಯಮಾಡೊ ಶ್ರೀರಂಗಾ ನಿಮ್ಮ | ಕರುಣ ತಪ್ಪಿದರೆ ಉಳಿಯದೀ ಲೋಕ ||ಪ|| ಪಶುಜಾತಿ ಹುಲ್ಲೆ ಸಾರಂಗ ಮೃಗಗಳು ಬ...