ಎಲ್ಲಿ ಎಲ್ಲಿ ರಮ್ಯ ತಾಣ ಅಲ್ಲಿ ನಿನಗೆ ವಂದನ song lyrics in kannada | ಕೆ ಎಸ್ ನಿಸಾರ್ ಅಹಮದ್ | ELLI ELLI RAMYA TAANA

 

ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ: ಕೆ ಎಸ್ ನಿಸಾರ್ ಅಹಮದ್

 

ಎಲ್ಲಿ ಎಲ್ಲಿ ರಮ್ಯ ತಾಣ ಅಲ್ಲಿ ನಿನಗೆ ವಂದನ

ಎಲ್ಲಿ ಎಲ್ಲಿ ಪುಣ್ಯಧಾಮ ಹೂ ಧವನ ಚಂದನ ॥

 

ತುಂಗೆ ಕೃಷ್ಣೆ ಕಾವೇರಿ ನಿನ್ನ ಪ್ರಾಣ ಸ್ಪಂದನ

ಹರಿದ್ವರ್ಣ ತರು ಸುಪರ್ಣ ವಿಪಿನ ಸ್ವಪ್ನ ನಂದನ ।

ಪಶ್ಚಿಮಾದ್ರಿ ದರಿ ತಟಾಕ ಘಟ್ಟ ನಾಕ ಸದೃಶ

ಬಯಲು ಸೀಮೆ ತೆನೆ ಸುಭಿಕ್ಷ ಕಲ್ಪವೃಕ್ಷ ಪರವಶ ॥ ಎಲ್ಲಿ ಎಲ್ಲಿ ರಮ್ಯ ತಾಣ||

 

ಬಸದಿ ಚರ್ಚು ಗುಡಿ ಮಸೀದಿ ಅಗ್ಗಳಿಕೆಯ ಕೇತನ

ಬಾಣವೆಂದು ಸತ್ಯದೆಡೆಗೆ ಬತ್ತಳಿಕೆ ಸಚೇತನ ।

ಕಾಪಾಲಿಕ ಲಕುಲ ಶಕ್ತಿ ನಾಗಪಂಥ ಸರಿ ಸಮ

ಅಂತೆ ಜಿನ ಕಬೀರ ಸಂತ ಎಲ್ಲರಿಗು ನಮೋ ನಮ ॥ ಎಲ್ಲಿ ಎಲ್ಲಿ ರಮ್ಯ ತಾಣ||

 

ಸುಸಂಸ್ಕಾರ ಸಂಪನ್ನಳು ಕನ್ನಡಾಂಬೆ ಧನ್ಯಳು

ವಿವಿಧ ಜನ ಅನನ್ಯೆ ಮಾನ್ಯೆ ಸಚ್ಚಿದಂಶ ಜನ್ಯಳು

ರತ್ನದಂತೆ  ಕಂದರಮಿತ ಪ್ರತಿಭಾ ಪ್ರಭೆ ಹಬ್ಬಲಿ

ನುಡಿಪ ರಾಗ ಅತಿ ಸರಾಗ ವಿಶ್ವವನ್ನೆ ತಬ್ಬಲಿ ॥ ಎಲ್ಲಿ ಎಲ್ಲಿ ರಮ್ಯ ತಾಣ||

………………………………………………………………….

ಕನ್ನಡ ರಾಜ್ಯೋತ್ಸವ ಗೀತೆಗಳು

No comments:

Post a Comment

ರಾಮ ರಾಮ ರಾಮ ರಾಮ ರಾಮ ಎನ್ನಿರೋ | RAMA RAMA RAMA SEETHA RAMA ENNIRO SONG LYRICS IN KANNADA |LORD RAMA

  ಹಾಡಲು ಕಲಿಯಿರಿ(CLICK HERE TO LEARN THIS SONG) ರಾಗ: ತಿಲಂಗ್ ರಾಮ ರಾಮ ರಾಮ ರಾಮ ರಾಮ ಎನ್ನಿರೋ | ಸೀತಾ | ಅಮರಪತಿಯ ದಿವ್ಯ ನಾಮ ಅಂದಿಗೊದಗಿ ಬಾರದೊ   ...