ಕರ್ನಾಟಕ ಬರಿ ನಾಡಲ್ಲ, ನಮ್ಮ ಸಂಸ್ಕೃತಿಯ ಧಾತು SONG LYRICS IN KANNADA |KANNADA RAJYOTSAVA SONGS |ರಚನೆ: ಬಿ ಆರ್. ಲಕ್ಷ್ಮಣರಾವ್

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ: ಬಿ ಆರ್. ಲಕ್ಷ್ಮಣರಾವ್


ಕರ್ನಾಟಕ ಬರಿ ನಾಡಲ್ಲ, ನಮ್ಮ ಸಂಸ್ಕೃತಿಯ ಧಾತು

ಕನ್ನಡ ಕೇವಲ ನುಡಿಯಲ್ಲ, ನಮ್ಮಂತರಂಗದಾ ಮಾತು||

 

ಕಂಗೊಳಿಸುವ ಬರಿ ಗಿರಿಯಲ್ಲ ಸಹ್ಯಾದ್ರಿಯ ಸಾಲು,

ಹೊಮ್ಮಿದೆ ಸಲಹುವ ಅಮ್ಮನೆದೆ ಊಡಲೆಮಗೆ ಹಾಲು|

ಬರಿನೆರೆ ನುಗ್ಗುವ ನೀರಲ್ಲ ಕೃಷ್ಣ ಕಾವೇರಿ ತುಂಗಾ

ಧಮನಿ ಧಮನಿಯಲಿ ಹರಿವ ಚೇತನ, ಕಣ್ಣ ಬೆಳಕು ನಮಗೆ||||

 

ಪಂಪ ಕುಮಾರವ್ಯಾಸರೆಂದರೆ ಅಲ್ಲ ಕವಿಗಳು ಮಾತ್ರ

ಇಂದೂ ಕನ್ನಡ ಕಾವ್ಯ ಮಾಲೆಗೆ ಅವರೇ ಅಂತಃಸೂತ್ರ|

ಶಿಲ್ಪ ಕಲೆಯ ಬರಿ ಬಲೆಯಲ್ಲ ಹಳೇಬೀಡು ಬೇಲೂರು

ನಮ್ಮ ಬೇರನ್ನು ತೋರುತ್ತಿದೆ, ಅಲ್ಲೇ ನಮ್ಮ ತಲೆಮಾರು||||

...................................................................................

ಕನ್ನಡ ರಾಜ್ಯೋತ್ಸವ ಗೀತೆಗಳು

No comments:

Post a Comment

ಓಂ ನಮ: ಶಿವಾಯ್ ಓಂ ನಮ: ಶಿವಾಯ್ OM NAMA SHIVAY SONG LYRICS IN KANNADA |LORD SHIVA STOTRA LYRICS

ಹಾಡಲು ಕಲಿಯಿರಿ(CLICK HERE TO LEARN THIS SONG)   ಓಂ ನಮ: ಶಿವಾಯ್ ಓಂ ನಮ: ಶಿವಾಯ್  ಹರ ಹರ ಭೋಲೇ ನಮ: ಶಿವಾಯ್ ಓಂ ನಮ: ಶಿವಾಯ್ ಓಂ ನಮ: ಶಿವಾಯ್  ಹರ ಹರ ಭ...