ಜೇನಿನ ಹೊಳೆಯೊ ಹಾಲಿನ ಮಳೆಯೊ SONG LYRICS IN KANNADA | DR.RAJKUMAR SONGS| JENINA HOLEYO SONG LYRICS |

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ:  ಶ್ರೀನಿವಾಸ್ ರಾವ್

ಜೇನಿನ ಹೊಳೆಯೊ ಹಾಲಿನ ಮಳೆಯೊ

ಸುಧೆಯೊ ಕನ್ನಡ ಸವಿ ನುಡಿಯೊ....

ಜೇನಿನ ಹೊಳೆಯೊ ಹಾಲಿನ ಮಳೆಯೊ

ಸುಧೆಯೊ ಕನ್ನಡ ಸವಿ ನುಡಿಯೊ....

ವಾಣಿಯ ವೀಣೆಯ ಸ್ವರಮಾಧುರ್ಯವೋ

ಸುಮಧುರ ಸುಂದರ ನುಡಿಯೊ ಆಹಾ.. ||

 

ಕವಿನುಡಿ ಕೋಗಿಲೆ ಹಾಡಿದ ಹಾಗೆ 

ದಪದ ….ರಿಸರಿ…. ಗಾಗಾಪಪದಸರಿದಸ

ಸವಿ ನುಡಿ ತಣ್ಣನೆ ಗಾಳಿಯ ಹಾಗೆ....

ಕವಿ ನುಡಿ ಕೋಗಿಲೆ ಹಾಡಿದ ಹಾಗೆ 

ಸವಿ ನುಡಿ ತಣ್ಣನೆ ಗಾಳಿಯ ಹಾಗೆ....

ಒಲವಿನ ಮಾತುಗಳಾಡುತಲಿರಲು,

ಮಲ್ಲಿಗೆ ಹೂಗಳು ಅರಳಿದ ಹಾಗೆ

ಮಕ್ಕಳು ನುಡಿದರೆ ಸಕ್ಕರೆಯಂತೆ

ಅಕ್ಕರೆ ನುಡಿಗಳು ಮುತ್ತುಗಳಂತೆ

ಪ್ರೀತಿಯ ನೀತಿಯ ಮಾತುಗಳೆಲ್ಲ

ಸುಮಧುರ ಸುಂದರ ನುಡಿಯೊ…..||1||

 

ಕುಮಾರವ್ಯಾಸನ ಕಾವ್ಯದ ಚೆಂದ

ಕವಿ ಸರ್ವಜ್ಞನ ಪದಗಳ ಅಂದ

ಕುಮಾರವ್ಯಾಸನ ಕಾವ್ಯದ ಚೆಂದ

ಕವಿ ಸರ್ವಜ್ಞನ ಪದಗಳ ಅಂದ

ದಾಸರು ಶರಣರು ನಾಡಿಗೆ ನೀಡಿದ

ಭಕ್ತಿಯ ಗೀತೆಗಳ ಪರಮಾನಂದ

ರನ್ನನು ರಚಿಸಿದ ಹೊನ್ನಿನ ನುಡಿಯು

ಪಂಪನು ಹಾಡಿದ ಚಿನ್ನದ ನುಡಿಯು

ಕನ್ನಡ ತಾಯಿಯು ನೀಡಿದ ವರವು

ಸುಮಧುರ ಸುಂದರ ನುಡಿಯೊ ||2||

.....................................................................................................................................................

No comments:

Post a Comment

ನಿನ್ನೆಡೆಗೆ ಬರುವಾಗ ಸಿಂಗರದ ಹೊರೆಯೇಕೆ? ninnedege baruvaaga | Kuvempu | Kannada bhavagethe lyrics

ಹಾಡಲು ಕಲಿಯಿರಿ(CLICK HERE TO LEARN THIS SONG)   ನಿನ್ನೆಡೆಗೆ ಬರುವಾಗ ಸಿಂಗರದ ಹೊರೆಯೇಕೆ ?  ಸಡಗರದ ಮಾತುಗಳ ಬಿಂಕವೇಕೆ ? ನಿನ್ನ ಮುಂದಿರುವಾಗ ಮಂತ್ರಗಳ...