Dec 28, 2020

ಶರಣು ಶರಣಯ್ಯ ಶರಣು ಬೆನಕ(SHARANU SHARANAYYA SHARANU BENAKA) LYRICS IN KANNADA & ENGLISH

 ಶರಣು ಶರಣಯ್ಯ ಶರಣು ಬೆನಕ


ಮೂಷಿಕ ವಾಹನ ಮೋದಕ ಹಸ್ತ

ಚಾಮರ ಕರ್ಣ ವಿಳಂಬಿತ ಸೂತ್ರ

ವಾಮನ ರೂಪ ಮಹೇಶ್ವರ ಪುತ್ರ

ವಿಘ್ನವಿನಾಶಕ ಪಾದ ನಮಸ್ತೇ ನಮಸ್ತೇ ನಮಸ್ತೇ ನಮ: ||


ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ
ನಿನ್ನ ನಂಬಿದ ಜನಕೆ ಇಹುದಯ್ಯ ಎಲ್ಲ ಸುಖ
ತಂದೆ ಕಾಯೊ ನಮ್ಮ ಕರಿಮುಖ||

ಎಲ್ಲಾರು ಒಂದಾಗಿ ನಿನ್ನ
ನಮಿಸಿ ನಲಿಯೋದು ನೋಡೋಕೆ ಚೆನ್ನ(2ಸಲ)
ಗರಿಕೆ ತಂದರೆ ನೀನು ಕೊಡುವೆ ವರವನ್ನ
ಗತಿ ನೀನೆ ಗಣಪನೆ ಕೈ ಹಿಡಿಯೊ ಮುನ್ನ||1||

ಸೂರ್ಯನೆದುರಲಿ ಮಂಜು ಕರಗುವ ರೀತಿ
ನಿನ್ನ ನೆನೆಯಲು ಒಡನೆ ಓಡುವುದು ಭೀತಿ (2ಸಲ)
ನೀಡಯ್ಯ ಕಷ್ಟಗಳ ಗೆಲ್ಲುವ ಶಕುತಿ
ತೋರಯ್ಯ ನಮ್ಮಲ್ಲಿ ನಿನ್ನಯ ಪ್ರೀತಿ||2||


ಬೆನಕ ಬೆನಕ ಏಕದಂತ ಪಚ್ಚೆಕಲ್ಲು ಪಾಣಿಮೆಟ್ಲು
ಒಪ್ಪುವ ವಿಘ್ನೇಶ್ವರ ನಿನಗೆ ಇಪ್ಪತ್ತೊಂದು ನಮಸ್ಕಾರಗಳು

......................................

MOOSHIKA VAAHANA MODAKA HASTHA

CHAAMARA KARNA VILAMBITHA SOOTRA

VAAMANA ROOPA MAHESHWARA PUTRA

VIGHNAVINASHAKA PAADA NAMASTE NAMASTE NAMASTE NAMAHA||


SHARANU SHARANAYYA SHARANU BENAKA 

NEEDAYYA BAALELLA BELAGUVA BELAKA

NINNA NAMBIDA JANAKE IHUDAYYA ELLA SUKHA 

TANDE KAAYOO NAMMA KARIMUKHA||


ELLAARU ONDAAGI NINNA

NAMISI BHAJISODA NODOKE CHENNA

GARIKE TANDARE NEENU KODUVE VARAVANNA

GATI NEENE GANAPANE KAI HIDIYO MUNNA||1||


SURYANEDURALI MANJUKARAGUVA REETHI

NINNA NENEYALU ODANE ODUVUDU BHEETHI

NEEDAYYA KASHTAGALA GELLUVA SHAKUTI

TORAYYA NAMMALLI NINNAYA PREETHI||2||


BENAKA BENAKA EKADANTA

PACHEKALLU PAANIMETLU

OPPUVA VIGHNESHWARA NINAGE

IPPATHONDU NAMASKAARAGALU||

..................................................


Also See:

ಒಲವಿನ ಉಡುಗೊರೆ ಕೊಡಲೇನು(OLAVINA UDUGOARE KODALENU) SONG LYRICS IN KANNADA

ಸರಳ ಸುಭಾಷಿತಗಳು(ಅರ್ಥ ಸಹಿತ) – 4| SUBHASHITAS WITH KANNADA MEANING -4

Dec 26, 2020

ಪವಮಾನ ಜಗದಾ ಪ್ರಾಣಾ (ಸಾಹಿತ್ಯ)(PAVAMANA JAGADA PRANA) -LYRICS IN KANNADA

 ಪವಮಾನ ಜಗದಾ ಪ್ರಾಣಾ

ಪವಮಾನ ಪವಮಾನ ಪವಮಾನ ಜಗದಾ ಪ್ರಾಣಾ

ಸಂಕರುಷಣ ಭವಭಯಾರಣ್ಯ ದಹನಾ... ದಹನಾ|

ಶ್ರವಣವೆ ಮೊದಲಾದ ನವವಿಧ ಭಕುತಿಯ

ತವಕದಿಂದಲಿ ಕೊಡು ಕವಿಜನ ಪ್ರಿಯ||

 

ಹೇಮ ಕಚ್ಚುಟ ಉಪವೀತ ಧರಿಪ ಮಾರುತ

ಕಾಮಾದಿ ವರ್ಗ ರಹಿತ....ಕಾಮಾದಿ ವರ್ಗ ರಹಿತ|

ವ್ಯೋಮಾದಿ ಸರ್ವವ್ಯಾಪುತ ಸತತ ನಿರ್ಭೀತ

ರಾಮಚಂದ್ರನ ನಿಜದೂತ ....ರಾಮಚಂದ್ರನ ನಿಜದೂತ|

ಯಾಮ ಯಾಮಕೆ ನಿನ್ನಾರಾಧಿಪುದಕೆ

ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ

ಮನಸಿಗೆ ಸುಖಸ್ತೋಮವ ತೋರುತ

ಪಾಮರ ಮತಿಯನು ನೀ ಮಾಣಿಪುದು||1||

 

ವಜ್ರ ಶರೀರ ಗಂಭೀರ ಮುಕುಟಧರ

ದುರ್ಜನವನ ಕುಠಾರ.....ದುರ್ಜನವನ ಕುಠಾರ|

ನಿರ್ಜರ ಮಣಿ ದಯಪಾರ ವಾರ ಉದಾರ

ಸಜ್ಜನರಘ ಪರಿಹಾರ....ಸಜ್ಜನರಘ ಪರಿಹಾರ|

ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು

ಮೂರ್ಜಗವರಿವಂತೆ ಗರ್ಜನೆ ಮಾಡಿದಿ

ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜ ಪದದ ಧೂಳಿ

ಮರ್ಜನದಲಿ ಭವ ವರ್ಜಿತವೆನಿಸೋ||2||

 

ಪ್ರಾಣ ಅಪಾನ ವ್ಯಾನೋದಾನ ಸಮಾನ

ಆನಂದ ಭಾರತಿ ರಮಣ....ಆನಂದ ಭಾರತಿ ರಮಣ|

ನೀನೆ ಶರ್ವಾದಿ ಗೀರ್ವಾಣಾದ್ಯಮರರಿಗೆ

ಜ್ಞಾನಧನ ಪಾಲಿಪ ವರೇಣ್ಯ....ಜ್ಞಾನಧನ ಪಾಲಿಪ ವರೇಣ್ಯ|

ನಾನು ನಿರುತದಲಿ ಏನೇನೆಸಗುವೆ

ಮಾನಸಾದಿ ಕರ್ಮ ನಿನಗೊಪ್ಪಿಸಿದೆನೊ

ಪ್ರಾಣನಾಥ ಸಿರಿ ವಿಜಯ ವಿಠ್ಠಲನ

ಕಾಣಿಸಿ ಕೊಡುವುದು ಭಾನುಪ್ರಕಾಶ||3||

.............................................................................................

ಹಾಡಲು ಕಲಿಯಿರಿ(LEARN HOW TO SING THIS SONG)


Also see:

ಬಾಲಬೋಧೆ(ಮಕ್ಕಳ ಬಾಯಿಪಾಠ):ನವ ಗ್ರಹಗಳು |KIDS BYHEART: 9 GRAHAS


ಬಾನಿನಲ್ಲಿ ಮೂಡಿ ಬಂದ ಚಂದಮಾಮ(ಶಿಶುಗೀತೆ) : BANINALLI MOODI BANDA SONG LYRICS IN KANNADA

Dec 24, 2020

ಒಲವಿನ ಉಡುಗೊರೆ ಕೊಡಲೇನು(OLAVINA UDUGOARE KODALENU) SONG LYRICS IN KANNADA

 

ಒಲವಿನ ಉಡುಗೊರೆ ಕೊಡಲೇನು

ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು
ಹೃದಯವೇ ಇದಾ ಮಿಡಿದಿದೆ
ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ||

ಪ್ರೇಮ ದೈವದ ಗುಡಿಯಂತೆ
ಪ್ರೇಮ ಜೀವನ ಸುಧೆಯಂತೆ
ಅಂತ್ಯ ಕಾಣದು ಅನುರಾಗ
ಎಂದು ನುಡಿವುದು ಹೊಸ ರಾಗ
ಒಲವು ಸಿಹಿ ನೆನಪು ಸಿಹಿ
ಹೃದಯಗಳ ಮಿಲನ ಸಿಹಿ
ಪ್ರೇಮವೇ ಕವನಾ ಮರೆಯದಿರು ||1||


ತಾಜಮಹಲಿನ ಚೆಲುವಲ್ಲಿ
ಪ್ರೇಮ ಚರಿತೆಯ ನೋಡಲ್ಲಿ
ಕಾಳಿದಾಸನ ಪ್ರತಿಕಾವ್ಯ
ಪ್ರೇಮ ಸಾಕ್ಷಿಯ ನಿಜದಲ್ಲಿ
ಕವಿತೆ ಇದಾ ಬರೆದಿರುವೆ
ಹೃದಯವನೆ ಕಳಿಸಿರುವೆ
ಕೋಮಲಾ ಇದು ನೀ ಎಸಯದಿರು||2||

....................................

Also See:

ಬಾರಿಸು ಕನ್ನಡ ಡಿಂಡಿಮವ (BAARISU KANNADA DINDIMAVA) LYRICS

ಕುದುರೇನ ತಂದೀವ್ನಿ ಜೀನಾವ ಬಿಗಿಸಿವ್ನಿ :KUDURENA THANDIVNI JEEVANA BIGISIVNI SONG LYRICS


Dec 23, 2020

ನಾನು ಸೈನ್ಯ ಸೇರುವೆ(ಕನ್ನಡ ಶಿಶುಗೀತೆ) | NAANU SAINYA SERUVE, KIDS' RHYMES IN KANNADA

 

ನಾನು ಸೈನ್ಯ ಸೇರುವೆ(ಕನ್ನಡ ಶಿಶುಗೀತೆ)


ನಾನು ಸೈನ್ಯ ಸೇರುವೆ, ಯುನಿಫ಼ರ್ಮ್ ಧರಿಸುವೆ

ಕಾಲಿಗೆ ಬೂಟು ಬಿಗಿಯುವೆ ನಾನು ಸೈನ್ಯ ಸೇರುವೆ||

 

ನಾನು ಸೈನ್ಯ ಸೇರುವೆ, ತಲೆಗೆ ಟೋಪಿ ಹಾಕುವೆ

ಕೈಯಲ್ಲಿ ಬಂದೂಕ್ ಹಿಡಿಯುವೆ,ನಾನು ಸೈನ್ಯ ಸೇರುವೆ||

 

ನಾನು ಸೈನ್ಯ ಸೇರುವೆ, ದೇಶದ ರಕ್ಷಣೆ ಮಾಡುವೆ

ವೀರ ಪದಕ ಪಡೆಯುವೆ, ನಾನು ಸೈನ್ಯ ಸೇರುವೆ||

.........................................................................................

ಹಾಡಲು ಕಲಿಯಿರಿ(LEARN TO SING THIS SONG)


Also See:


Dec 20, 2020

ಹುಚ್ಚು ಕೋಡಿ ಮನಸು(ಸಾಹಿತ್ಯ) | HUCHU KODI MANSU SONG LYRICS IN KANNADA

 ಹುಚ್ಚು ಕೋಡಿ ಮನಸು

(ಭಾವಗೀತೆ)

ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು
ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು
ಮಾತು ಮಾತಿಗೇಕೋ ನಗು ಮರುಗಳಿಗೆಯೇ ಮೌನ
ಕನ್ನಡಿ ಮುಂದಷ್ಟು ಹೊತ್ತು ಬರೆಯದಿರುವ ಕವನ||


ಸೆರಗು ತೀಡಿದಷ್ಟು ಹೊತ್ತು ಹಟಮಾಡುವ ಕೂದಲು
ಸೆರಗು ತೀಡಿದಷ್ಟು ಹೊತ್ತು ಹಟಮಾಡುವ ಕೂದಲು
ನಿರಿಯೇಕೋ ಸರಿಯಾಗದು ಮತ್ತೆ ಒಳಗೆ ಹೋದಳು||1||


ಕೆನ್ನೆ ಕೊಂಚ ಕೆಂಪಾಯಿತೆ ತುಟಿಯ ರಂಗು ಹೆಚ್ಚೇ
ಕೆನ್ನೆ ಕೊಂಚ ಕೆಂಪಾಯಿತೆ ತುಟಿಯ ರಂಗು ಹೆಚ್ಚೇ
ನಗುತ ಅವಳ ಅಣುಕಿಸುತಿದೆ ಗಲ್ಲದ ಕರಿ ಮಚ್ಚೆ||2||


ಬರಿ ಹಸಿರು ಬರಿ ಹೂವು ಎದೆಯೊಳೆಷ್ಟು ಹೆಸರು
ಯಾವ ಮದುವೆ ದಿಬ್ಬಣವೋ ಸುಮ್ಮನೆ ನಿಟ್ಟುಸಿರು||3||

….......................................


Also See:

ಪರಿಸರ ಗೀತೆ : ಹೃದಯಾಂತರಾಳದಲ್ಲಿ ಅಡಗಿರುವ ನೋವುಗಳು| HRADAYANTARAALADALI ADAGIRUVA |NATURE SONG


ಕುದುರೇನ ತಂದೀವ್ನಿ ಜೀನಾವ ಬಿಗಿಸಿವ್ನಿ :KUDURENA THANDIVNI JEEVANA BIGISIVNI SONG LYRICS



Dec 18, 2020

ನೀ ಸಿಗದೆ ಬಾಳೊ೦ದು ಬಾಳೇ ಕೃಷ್ಣ (ಸಾಹಿತ್ಯ) | NEE SIGADE BAALONDU BAALE KRISHNA LYRICS | KANNADA SONG

ನೀ ಸಿಗದೆ ಬಾಳೊ೦ದು ಬಾಳೇ ಕೃಷ್ಣ  

(ಭಾವಗೀತೆ)


ನೀ ಸಿಗದೆ ಬಾಳೊ೦ದು ಬಾಳೇ ಕೃಷ್ಣ
ನಾ ತಾಳಲಾರೆ ಈ ವಿರಹ ಕೃಷ್ಣ
ನೀ ಸಿಗದೆ ಬಾಳೊ೦ದು ಬಾಳೇ ಕೃಷ್ಣ||

ಕಮಲವಿಲ್ಲದ ಕೆರೆ ನನ್ನ ಬಾಳು
ಚ೦ದ್ರ ಇಲ್ಲದ ರಾತ್ರಿ ಬೀಳು
ಕಮಲವಿಲ್ಲದ ಕೆರೆ ನನ್ನ ಬಾಳು
ಚ೦ದ್ರನಿಲ್ಲದ ರಾತ್ರಿ ಬೀಳು
ನೀ ಸಿಗದೆ ಉರಿ ಉರಿ ಕಳೆದೆ ಇರುಳ
ಮಾತಿಲ್ಲ ಬಿಗಿದಿದೆ ದುಃಖ ಕೊರಳ ||1||


ಅನ್ನ ಸೇರದು ನಿದ್ದೆ ಬ೦ದುದೆ೦ದು
ಕುದಿವೆ ಒ೦ದೇ ಸಮ ಕೃಷ್ಣಾ ಎ೦ದು
ಅನ್ನ ಸೇರದು ನಿದ್ದೆ ಬ೦ದುದೆ೦ದು
ಕುದಿವೆ ಒ೦ದೇ ಸಮ ಕೃಷ್ಣಾ ಎ೦ದು
ಯಾರು ಅರಿವರು ಹೇಳು ನನ್ನ ನೋವ
ತಲ್ಲಣಿಸಿ ಕೂಗುತಿದೆ ದಾಸಿ ಜೀವ ||2||

ಒಳಗಿರುವ ಗಿರಿಧರನೆ ಹೊರಗೆ ಬಾರೋ
ಕಣ್ಣೆದುರು ನಿ೦ತು ಆ ರೂಪ ತೋರೋ
ಒಳಗಿರುವ ಗಿರಿಧರನೆ ಹೊರಗೆ ಬಾರೋ
ಕಣ್ಣೆದುರು ನಿ೦ತು ಆ ರೂಪ ತೋರೋ
ಜನುಮ ಜನುಮದಾ ರಾಗ ನನ್ನ ಪ್ರೀತಿ
ಕೃಷ್ಣಾ... ಕೃಷ್ಣಾ... ಕೃಷ್ಣಾ... ಕೃಷ್ಣಾ...
ಜನುಮ ಜನುಮದಾ ರಾಗ ನನ್ನ ಪ್ರೀತಿ
ನಿನ್ನೊಳಗೆ ಹರಿವುದೆ ಅದರ ರೀತಿ ||3||

……………………………………………………………………………………………


Also See:

ಜನ್ಮದಿನದ ಶುಭಾಶಯ: ಸಂಸ್ಕೃತ : HAPPY BIRTHDAY SONG IN SANSKRIT.

ಯೋಧರೇ ಬಯಸಿ ಬನ್ನಿ-ಸಾಹಿತ್ಯದೊಂದಿಗೆ ಹಾಡಲು ಕಲಿಯಿರಿ(YODHARE BAYASI BANNI- LEARN TO SING WITH LYRICS)


Dec 14, 2020

ಆಂಜನೇಯ ಶ್ಲೋಕಗಳು((ಅರ್ಥ ಸಹಿತ) | LORD ANJANEYA /HANUMAN SHLOKAS LYRICS WITH MEANING IN KANNADA

  ಆಂಜನೇಯ ಶ್ಲೋಕಗಳು

(ಅರ್ಥ ಸಹಿತ)


1 . ಮನೋಜವಂ ಮಾರುತ ತುಲ್ಯ ವೇಗ೦ ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ|

    ವಾತಾತ್ಮಜಂ ವಾನರಯೂಥ ಮುಖ್ಯಂ ಶ್ರೀ ರಾಮ ದೂತಂ ಶರಣಂ ಪ್ರಪದ್ಯೇ||

  ಅರ್ಥ: ಮನಸ್ಸಿನ  ಆಲೋಚನೆಯಂತೆ ಚುರುಕಾದ, ಗಾಳಿಗಿಂತ ಹೆಚ್ಚು ವೇಗವುಳ್ಳ,ಇಂದ್ರಿಯಗಳನ್ನು ಜಯಿಸಿದವನು, ಬುದ್ಧಿವಂತರಲ್ಲಿ ಉತ್ತಮನಾದ, ವಾಯುವಿನ ಮಗನಾದ, ವಾನರ ಸೇನೆ  ಮುಖ್ಯಸ್ಥನಾದ,ಶ್ರೀ ರಾಮ ದೂತನಾದ ಆಂಜನೇಯ ಸ್ವಾಮಿಯನ್ನು ನಾನು ವಂದಿಸುತ್ತೇನೆ.


2. ಬುದ್ಧಿರ್ಬಲಂ ಯಶೋಧೈರ್ಯಂ ನಿರ್ಭಯತ್ವಂ ಅರೋಗತಾ

   ಅಜಾಡ್ಯಂ ವಾಕ್ಪಟುತ್ವಂ ಹನುಮತ್ ಸ್ಮರಣಾದ್ ಭವೇತ್||

ಅರ್ಥ: ಯಾವುದೇ ಪರಿಸ್ಥಿತಿಯನ್ನು ಅರ್ಥಮಾಡಿ ಕೊಳ್ಳುವ ಬುದ್ಧಿವಂತಿಕೆ, ಶಕ್ತಿ, ಒಳ್ಳೆಯ ವ್ಯಕ್ತಿತ್ವ, ಧೈರ್ಯ, ನಿರ್ಭಯತೆ, ಆರೋಗ್ಯ, ಚುರುಕುತನ, ಮಾತಿನ ಕೌಶಲ್ಯ, ಇವೆಲ್ಲವೂ ಹನುಮಂತ ಸ್ಮರಣೆಯಿಂದ ಲಭಿಸುತ್ತದೆ.


ಹಾಡಲು ಕಲಿಯಿರಿ(LEARN HOW TO SING THIS SONG)

Also See:

ಭಗವದ್ಗೀತೆ ಶ್ಲೋಕಗಳು - 1 (WITH MEANING IN KANNADA)

GURU STOTRAM: ಗುರು ಸ್ತೋತ್ರಮ್ |SHLOKAS WITH MEANING

Dec 12, 2020

ತನುವು ನಿನ್ನದು ಮನವು ನಿನ್ನದು(TANUVU NINNADU MANAVU NINNADU) SONG LYRICS IN KANNADA & ENGLISH

 

ತನುವು ನಿನ್ನದು ಮನವು ನಿನ್ನದು

(ಭಾವಗೀತೆ)

ರಚನೆ: ರಾಷ್ಟ್ರಕವಿ ಕುವೆಂಪು

 

ತನುವು ನಿನ್ನದು ಮನವು ನಿನ್ನದು ನನ್ನ ಜೀವನ ಧನವು  ನಿನ್ನದು

ನಾನು ನಿನ್ನವನೆಂಬ ಹೆಮ್ಮೆಯ  ತೃಣವು ಮಾತ್ರವೆ ನನ್ನದು||

 

ನೀನು ಹೊಳೆದರೆ ನಾನು ಹೊಳೆವೆನು ನೀನು ಬೆಳೆದರೆ ನಾನು ಬೆಳೆವೆನು

ನನ್ನ ಹರಣದ ಹರಣ ನೀನು ನನ್ನ ಮರಣದ ಮರಣವು|| 1||

 

ನನ್ನ ಮನದಲಿ ನೀನೆ ಯುಕ್ತಿ ನನ್ನ ಹೃದಯದಿ ನೀನೆ ಭಕ್ತಿ

ನೀನೆ ಮಾಯಾ ಮೋಹ ಶಕ್ತಿಯು ನನ್ನ ಜೀವನ ಮುಕ್ತಿಯು|| 2 ||


..............................................................................................

TANUVU NINNADU MANAVU NINNADU
NANNA JEEVANA DHANAVU NINNADU 
NAANU NINNAVANEMBA HEMMEYA 
TRANAVU MAATRAVE NANNADU||

NEENU OLIDARE NAANU OLIVENU
NEENU BELEDARE NAANU BELEVENU
NANNA HARANADA HARANA NEENU 
NANNA MARANADA MARANAVU||1||

NANNA MANADALI NEENE YUKTI
NANNA HRADAYADI NEENE BHAKTI
NEENE MAAYAA MOHA SHAKTHIYU 
NANNA JEEVENA MUKTIYU||2||

.................................................................................


Also see:


Dec 7, 2020

ಕನ್ನಡ ಕಲಿ - ಸರಳ ಕನ್ನಡ ಪದಗಳು -2|SIMPLE KANNADA WORDS -2| - 2 LETTERS KANNADA WORDS WITH ENGLISH MEANING

ಸರಳ ಕನ್ನಡ ಪದಗಳು-2

SIMPLE KANNADA WORDS -2

 

ಓಟ

RUN

 

ಕರ

HAND

 

ಫಲ

FRUIT

 

ವನ

FOREST

 

ಯಮ

LORD YAMA

 

ಧನ

MONEY

 

ಕದ

DOOR

 

ಶರ

ARROW

 

ಹಯ

HORSE

 

ಖಗ

BIRD

 

ಹರ

LORD SHIVA

 

ಗಜ

ELEPHANT

 

ಆಲ

BANIAN TREE

 

ಮಠ

the residence of a religious community

 

ದಡ

BANK OF A RIVER

 

ರಥ

CHARIOT

 

ದಳ

PETAL

 

ಈಶ

LORD SHIVA

 



LEARN TO PRONOUNCE ABOVE WORDS -1

LEARN TO PRONOUNCE ABOVE WORDS - 2

Also see:

ಕನ್ನಡ ಕಲಿ - ಸರಳ ಕನ್ನಡ ಪದಗಳು -1|SIMPLE KANNADA WORDS -1|

ಕನ್ನಡ ಕಲಿ-ವ್ಯಂಜನಗಳು|LEARN KANNADA- VYANJANAS |

ಶಿಶುಗೀತೆ: ಪುಟ್ಟ ಪುಟ್ಟ ಕೃಷ್ಣ (LYRICS OF PUTTA PUTTA KRISHNA, KANNADA RHYMES)

Dec 5, 2020

ಹರಿವರಾಸನ೦ ವಿಶ್ವಮೋಹನ೦ ಸಾಹಿತ್ಯ(HARIVARASANAM VISHWA MOHANAM LYRICS: SONG ON LORD AYYAPPA

 

ಹರಿವರಾಸನ೦ ವಿಶ್ವಮೋಹನ೦


ಹರಿವರಾಸನ೦ ವಿಶ್ವಮೋಹನ೦ ಹರಿದಧೀಶ್ವರ೦ ಆರಾಧ್ಯಪಾದುಕಂ

ಅರಿವಿಮರ್ದನಂ ನಿತ್ಯನರ್ತನ೦ ಹರಿಹರಾತ್ಮಜಂ ದೇವಮಾಶ್ರಯೇ|

 

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ||2 ಸಲ||

 

ಶರಣ ಕೀರ್ತನಂ ಭಕ್ತ ಮಾನಸಂ ಭರಣ ಲೋಲುಪ೦ ನರ್ತನಾಲಸ೦

ಅರುಣ ಭಾಸುರ೦ ಭೂತನಾಯಕ೦ ಹರಿಹರಾತ್ಮಜಂ ದೇವಮಾಶ್ರಯೇ||

ಪ್ರಣಯ ಸತ್ಯಕ೦ ಪ್ರಾಣ ನಾಯಕ೦ ಪ್ರಣತ ಕಲ್ಪಕಂ ಸುಪ್ರಭಾಂಜಿತ೦

ಪ್ರಣವ ಮಂದಿರ೦ ಕೀರ್ತನ ಪ್ರಿಯ೦ ಹರಿಹರಾತ್ಮಜಂ ದೇವಮಾಶ್ರಯೇ||

 

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ||2 ಸಲ||

 

ತುರಗವಾಹನ೦ ಸುಂದರಾನನ೦ ವರಗದಾಯುಧ೦ ವೇದವರ್ಣಿತ೦

ಗುರುಕೃಪಾಕರ೦ ಕೀರ್ತನಪ್ರಿಯ೦ ಹರಿಹರಾತ್ಮಜಂ ದೇವಮಾಶ್ರಯೇ||

ತ್ರಿಭುವನಾರ್ಚಿತ೦ ದೇವತಾತ್ಮಕ೦ ತ್ರಿನಯನಂ ಪ್ರಭುಂ ದಿವ್ಯದೇಶಿಕ೦

ತ್ರಿದಶ ಪೂಜಿತ೦ ಚಿಂತಿತಪ್ರದ೦ ಹರಿಹರಾತ್ಮಜಂ ದೇವಮಾಶ್ರಯೇ||

 

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ||2 ಸಲ||

 

ಭವಭಯಾಪಹ೦ ಭಾವುಕಾವಹ೦ ಭುವನ ಮೋಹನ೦ ಭೂತಿಭೂಷಣ೦

ಧವಳ ವಾಹನ೦ ದಿವ್ಯ ವಾರಣ೦ ಹರಿಹರಾತ್ಮಜಂ ದೇವಮಾಶ್ರಯೇ||

ಕಳಮೃದು ಸ್ಮಿತಂ ಸುಂದರಾನನ೦ ಕಳಭ ಕೋಮಲ೦ ಗಾತ್ರ ಮೋಹನ೦

ಕಳಭ ಕೇಸರಿ ವಾಜಿ ವಾಹನ೦ ಹರಿಹರಾತ್ಮಜಂ ದೇವಮಾಶ್ರಯೇ||

 

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ||2 ಸಲ||

 

ಶ್ರಿತ ಜನ ಪ್ರಿಯ೦ ಚಿಂತಿತಪ್ರದ೦ ಶ್ರುತಿ ವಿಭೂಷಣ೦ ಸಾಧು ಜೀವನ೦

ಶ್ರುತಿ ಮನೋಹರ೦ ಗೀತ ಲಾಲಸ೦ ಹರಿಹರಾತ್ಮಜಂ ದೇವಮಾಶ್ರಯೇ||

ಹರಿವರಾಸನ೦ ವಿಶ್ವಮೋಹನ೦ ಹರಿದಧೀಶ್ವರ೦ ಆರಾಧ್ಯಪಾದುಕಂ

ಅರಿವಿಮರ್ದನಂ ನಿತ್ಯನರ್ತನ೦ ಹರಿಹರಾತ್ಮಜಂ ದೇವಮಾಶ್ರಯೇ|

 

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ||2 ಸಲ||

.............................................................................................

LEARN THIS SONG(ಈ ಹಾಡನ್ನು ಹಾಡಲು ಕಲಿಯಿರಿ)

Also see:

ಯೋಧರೇ ಬಯಸಿ ಬನ್ನಿ-ಸಾಹಿತ್ಯದೊಂದಿಗೆ ಹಾಡಲು ಕಲಿಯಿರಿ(YODHARE BAYASI BANNI- LEARN TO SING WITH LYRICS) PATRIOTIC SONG(DESHABHAKTIGEETE)

 ಆವ ಕುಲವೋ ರಂಗ ಅರಿಯಲಾಗದು(AAVA KULAVO RANGA ARIYALAGADU LYRICS IN KANNADA