ಹಾಡಲು ಕಲಿಯಿರಿ(CLICK HERE TO LEARN THIS SONG)
ರಚನೆ: ದ.
ರಾ ಬೇಂದ್ರೆ (ದತ್ತಾತ್ರೇಯ ರಾಮಚಂದ್ರ ಬೇಂದ್ರೆ)
ಹೊಸ
ದ್ವೀಪಗಳಿಗೆ ಹೊರಟಾನಾ ಬನ್ನೀ ಅಂದದೋ
ಅಂದದಾ
ಹೊಸ
ದ್ವೀಪಗಳಿಗೆ ಹೊರಟಾನಾ ಬನ್ನೀ ಅಂದದೋ
ಅಂದದಾ
ಬಂಗಾರ
ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರ
ಮಿಂಚು
ಬಳಗ ತೆರೆ ತೆರೆಗಳಾಗಿ ಅಲೆಯುವುದು
ಪುಟ್ಟ ಪೂರ
ಅದು
ನಮ್ಮ ಊರು ಇದು ನಿಮ್ಮ
ಊರು ತಮ್ ತಮ್ಮಊರು ಧೀರ
ಅದರೊಳಗೆ
ನಾವು ನಮ್ಮೊಳಗೆ ತಾವು ಅದು ಇಲ್ಲವಣ್ಣ
ದೂರ||
ಕರೆ
ಬಂದಿತಣ್ಣ ತೆರೆ ಬಂದಿತಣ್ಣ ನೆರೆ
ಬಂದಿತಣ್ಣ ಬಳಿಗೆ
ಹರಿತದಾ
ಭಾವ ಬೆರಿತದಾ ಜೀವ ಅದರೊಳಗೆ ಒಳಗೆ
ಒಳಗೆ
ಇದೆ
ಸಮಯವಣ್ಣ ಇದೆ ಸಮಯ ತಮ್ಮ ನಮ್ಮ್
ನಿಮ್ಮ ಆತ್ಮಗಳಿಗೆ
ಅಂಬಿಗನು
ಬಂದ ನಂಬಿಗನು ಬಂದ ಬಂದದಾ ದಿವ್ಯ
ಘಳಿಗೆ||1||
ಇದು
ಉಪ್ಪು ನೀರ ಕಡಲಲ್ಲೊ ನಮ್ಮ
ಒಡಲಲ್ಲು ಇದರ ನೆಲೆಯು
ಕಂಡವರಿಗಲ್ಲೊ
ಕಂಡವರಿಗಷ್ಟೆ ತಿಳಿದದಾ ಇದರ ಬೆಲೆಯು
ಸಿಕ್ಕಲ್ಲಿ
ಅಲ್ಲ ಸಿಕ್ಕಲ್ಲೆ ಮಾತ್ರ ಒಡೆಯುವುದು ಇದರ ಸೆಲೆಯು
ಕಣ್ಣರಳಿದಾಗ
ಕಣ್ಹೊರಳಿದಾಗ ಹೊಳೆಯುವುದು ಇದರ ಕಳೆಯು||2||
ಬಂದವರ
ಬಳಿಗೆ ಬಂದದಾ ಮತ್ತು ನಿಂದವರಾ ನೆರೆಗೂ
ಬಂದದೋ
ಬಂದದಾ
ನವ ಮನುವು ಬಂದ ಹೊಸ ದ್ವೀಪಗಳಿಗೆ
ಹೊರಟಾನಾ ಬನ್ನೀ
ಅಂದದೋ
ಅಂದದಾ
ನವ ಮನುವು ಬಂದ ಹೊಸ ದ್ವೀಪಗಳಿಗೆ
ಹೊರಟಾನಾ ಬನ್ನೀ
ಅಂದದೋ
ಅಂದದಾ ||3||
Also See:
ಕಾಣದ ಕಡಲಿಗೆ ಹಂಬಲಿಸಿದೆ ಮನ Lyrics| kanada kadalige song lyrics in Kannada| C Ashwath songs lyrics
No comments:
Post a Comment