Aug 1, 2025

ನಮಸ್ತೇ ವಿಮಲೆ ಕೋಮಲೆ SONG ON LORD LAKSHMI LYRICS IN KANNADA | LORD LAKSHMI SONGS

 ಹಾಡಲು ಕಲಿಯಿರಿ(CLICK HERE TO LEARN THIS SONG)

ನಮಸ್ತೇ ವಿಮಲೆ ಕೋಮಲೆ ರಮಾದೇವಿ
ನಮಸ್ತೇ ನಮಸ್ತೇ||

ತರುಣಿ ಶಿರೋಮಣಿ ನಿನ್ನ ಶೀಲಸೌಂದರ್ಯವನು
ಧರೆಯೊಳಗೆ ವರ್ಣಿಸುವ ಕವಿಯದಾವ|
ಸ್ವರಮಣನೆಂದೆನಿಪ ರಮಣನುರದೊಳೆಂದೆಂದು
ಅರಮನೆಯ ಮಾಡಿ ಮೆರೆವ ಭಾಪುರೆ ದೇವಿ||

ತನ್ನ ಮೈಯಿಂದ ಮಕ್ಕಳ ಸೃಜಿಸಿ ಯುಗಯುಗದಿ
ನಿನ್ನ ತಾರುಣ್ಯ ಲಾವಣ್ಯಗಳನು|
ಮನ್ನಿಸಿ ಪೊರೆವ ಹರಿಯ ಪಟ್ಟದ ರಮಣಿ ಜಗ-
ನ್ಮಾನ್ಯೆ ಚೈತನ್ಯೆ ಬಹು ಗುಣಗಣಸದನೆ||

ನಿನ್ನಂಗವಪ್ಪಲು ನೋಡಲು ಮುಖವ ಚುಂಬಿಸಲು
ಅನಂತ ಕರ ನೇತ್ರ ವಕ್ತ್ರಗಳನು|
ಪೂರ್ಣ ಹಯವದನ ಕೈಕೊಂಡ ನಿನ್ನಯ ಗಂಡ
ಸ್ವರ್ಣಸಮವರ್ಗೆ ಕರ್ಣಾಯತಾಕ್ಷಿ ದೇವಿ||

..............................................................................................


No comments:

Post a Comment